ಕುದೂರು ಹೋಬಳಿಯ ಮರೂರು ಹ್ಯಾಂಡ್ ಪೋಸ್ಟ್ ಬಳಿ ಹೆದ್ದಾರಿ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿರುವುದು.
ಕುದೂರು: ಇಲ್ಲಿನ ಬೆಂಗಳೂರು&ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 30 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 24 ಮಂದಿ ಮೃತಪಟ್ಟಿದ್ದು, 62ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡು, ಶಾಶ್ವತ ಅಂಗವಿಕಲರಾಗಿದ್ದಾರೆ. ಮಾರ್ಗವು ದಿನೇದಿನೆ ಸಾವಿನ ರಹದಾರಿಯಾಗಿ ಮಾರ್ಪಡುತ್ತಿದೆ.
ಹೌದು... ರಾಷ್ಟ್ರೀಯ ಹೆದ್ದಾರಿ&75ಯ ಕುದೂರು ಠಾಣೆ ವ್ಯಾಪ್ತಿಯಲ್ಲಿ(30 ಕಿ.ಮೀ.) ವರ್ಷದ ಆರಂಭದಿಂದ ಈವರೆಗೆ 25ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಹೆಚ್ಚಾಗಿ ಹದಿಹರೆಯದವರೇ ಉಸಿರು ಚೆಲ್ಲಿದ್ದಾರೆ. ಇತ್ತೀಚೆಗೆ ಮರೂರು ಹ್ಯಾಂಡ್ ಪೋಸ್ಟ್ ಬಳಿಯ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು.
ಮಾಗಡಿ ಉಪ ವಿಭಾಗದ ಡಿವೈಎಸ್ಪಿ ರವಿ ನಿರ್ದೇಶನಲ್ಲಿ ಹೆದ್ದಾರಿಯ ಅಪಘಾತ ವಲಯ ಗುರುತಿಸಿ, ವಾಹನಗಳ ವೇಗ ನಿಯಂತ್ರಣಕ್ಕಾಗಿ ಬ್ಯಾರೆಲ್ಗಳನ್ನು ಜಿಗ್ಜಾಗ್ ಮಾದರಿಯಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಹಲವು ಸಂಚಾರ ಸುರಾ ಕ್ರಮಗ ಕೈಗೊಳ್ಳಲಾಗಿದೆ. ಆದರೂ ಅಪಘಾತಗಳು ಸಂಭವಿಸುತ್ತಿದ್ದು, ಆತಂಕ ಮೂಡಿಸಿದೆ. ಚಾಲಕರಲ್ಲಿ ಸ್ವಯಂ ಶಿಸ್ತು ಮತ್ತು ಸುರತಾ ಪ್ರೆ ಇಲ್ಲದಿರುವುದೂ ಅಪಘಾತಗಳಿಗೆ ಕಾರಣ ಎಂಬ ಆರೋಪವೂ ಇದೆ.
ಮರೂರು ಹ್ಯಾಂಡ್ ಪೋಸ್ಟ್ ಬಳಿ ಬೆಂಗಳೂರು ಕಡೆಗೆ ತೆರಳುವ ಹೆದ್ದಾರಿ ಬದಿಯಲ್ಲೆ ಕೆಲ ವ್ಯಾಪಾರಿಗಳು ಟೆಂಟ್ ಹಾಕಿಕೊಂಡು ಕಡಿಮೆ ಬೆಲೆಗೆ ತರಕಾರಿ, ಹಣ್ಣು ಮಾರುವುದರಿಂದ ವಾಹನ ಸವಾರರು ಹೆದ್ದಾರಿ ಬದಿಯಲ್ಲಿಯೇ ವಾಹನ ನಿಲ್ಲಿಸಿ ಖರೀದಿಗಿಳಿಯುತ್ತಾರೆ. ಇದರಿಂದ ಅಪಘಾತಗಳ ಸಂಭವ ಹೆಚ್ಚುತ್ತಿದ್ದು, ಸ್ಥಳಿಯ ಆಡಳಿತ ವ್ಯಾಪಾರಕ್ಕಾಗಿಯೇ ಪ್ರತ್ಯೇಕ ಜಾಗ ನಿಗದಿಪಡಿಸಬೇಕಿದೆ.
ಜಂನ್ಗಳಲ್ಲಿ ಸುರತಾ ಕ್ರಮಕೈಗೊಳ್ಳಿ
ಅಪಘಾತಗಳ ಹಾಟ್ ಸ್ಪಾಟ್ ಆಗಿರುವ ಮರೂರು ಹ್ಯಾಂಡ್ ಪೋಸ್ಟ್ ಬಳಿ ಬಾಗೇಪಲ್ಲಿ&ಹಲಗೂರು (ಎಸ್ಎಚ್&94), ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಮಾಗಡಿ&ದಾಬಸ್ಪೇಟೆ (ಎಸ್ಎಚ್&3), ತಾಳೇಕೆರೆ ಹ್ಯಾಂಡ್ ಪೋಸ್ಟ್ ಬಳಿಯ ಮಾಗಡಿ&ಬೆಂಗಳೂರು ಹೆದ್ದಾರಿ ಹಾದುಹೋಗಿದ್ದು, ಈ ಜಂನ್ಗಳಲ್ಲಿ ಟ್ರಾಫಿಕ್ ಸಿಗ್ನಲ್, ಹಂಪ್ಸ್ ಸೇರಿ ಇತರ ಸುರತಾ ಕ್ರಮ ಕೈಗೊಳ್ಳಬೇಕಿದೆ. ಹೆದ್ದಾರಿಗಳಲ್ಲಿ ಸಂಚಾರ ಸಿಕ್ಕು ಆದರೆ ವಾಹನಗಳು ಸರ್ವೀಸ್ ರಸ್ತೆಗಿಳಿಯುವುದರಿಂದ ಪಾದಚಾರಿಗಳು ಹಾಗೂ ಇತರ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ ಎಂಬುದು ಸ್ಥಳಿಯರ ವಾದ.
ಹೆದ್ದಾರಿಗಳಲ್ಲಿ ರಾತ್ರಿ ಲಾರಿ, ಸ್ಲೀಪರ್ ಬಸ್ಗಳು ಹೆಚ್ಚಾಗಿ ಸಂಚರಿಸುವುದರಿಂದ ಈ ವೇಳೆ ಬೈಕ್ ಸವಾರಿ ಒಳಿತಲ್ಲ ಎಂಬುದು ಪೊಲೀಸರ ಮಾತು. ಆದರೂ ಕೆಲ ಯುವಕರು ಮದ್ಯ ಸೇವಿಸಿ, ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಹೋಗಿ ಸಾವಿನ ದವಡೆಗೆ ಸಿಲುಕುತ್ತಿದ್ದಾರೆ ಎಂದು ಸ್ವತ@ ಪೊಲೀಸ್ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸುತ್ತಾರೆ.
ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯ ಹೊರ ಅಂಚಿನಿಂದ ಅಥವಾ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯಿಂದ ಕನಿಷ್ಠ 500ಮೀ ಅಂತರದಲ್ಲಿ ಮದ್ಯದ ಅಂಗಡಿ ಇರಬೇಕು ಎಂದು ಸರ್ಕಾರದ ಮಾನದಂಡವಿದೆ. ಆದರೆ, ಹೆದ್ದಾರಿ ಬದಿಯ ಕೆಲ ರೆಸ್ಟೋರೆಂಟ್, ಪೆಟ್ಟಿಗೆ ಅಂಗಡಿ, ಡಾಬಾಗಳಲ್ಲಿ ಮದ್ಯ ಅಕ್ರಮವಾಗಿ ಸಿಗುತ್ತಿರುವುದರಿಂದ ಡ್ರಿಂಕ್ ಆ್ಯಂಡ್ ಡೆವ್ ಪ್ರಕರಣ ಹೆಚ್ಚುತ್ತಿದೆ.
* ಹೆದ್ದಾರಿಯ ಪ್ರಮುಖ ಜಂನ್ಗಳಲ್ಲಿ ರಾತ್ರಿ ದೃಷ್ಟಿ ಗೋಚರತೆ ಹೆಚ್ಚಿಸಲು ಬ್ಲಿಂಕರ್ ಲೈಟ್ ಮತ್ತು ರಿಫ್ಲೆಕ್ಟರ್ಗಳ ಅಳವಡಿಕೆ.
* ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ, ಅಂತಹ ಕಡೆ ಹಂಪ್ಸ್ ನಿರ್ಮಾಣ, ರಸ್ತೆ ವಿಸ್ತರಣೆ ಇಲ್ಲವೇ ಸೂಚನಾ ಫಲಕ ಹಾಕಬೇಕು.
* ಲಾರಿ ಮತ್ತು ಬಸ್ಗಳು ಹೆದ್ದಾರಿಯ ಎಡಭಾಗದ ಲೇನ್ನಲ್ಲೆ ಚಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು, ಉಲ್ಲಂಸುವವರಿಗೆ ದಂಡ ವಿಧಿಸಬೇಕು.
* ಮದ್ಯ ಸೇವಿಸಿ ವಾಹನ ಚಲಾವಣೆ ನಿಯಂತ್ರಣಕ್ಕೆ ರಾತ್ರಿ ಮತ್ತು ವಾರಾಂತ್ಯಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಬೇಕಿದೆ.
* ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ
* ಹಿಂಬದಿ ವಾಹನ ಗಮನಿಸದೆ ಓವರ್ಟೇಕ್ ಮಾಡುವುದು
* ಹಠಾತ್ತಾಗಿ ಅಡ್ಡ ಬರುವ ಜಾನುವಾರು, ಕಾಡುಪ್ರಾಣಿಗಳು
* ರಾತ್ರಿ ಹೈ&ಬೀಮ್ ಲೈಟ್ ಹಾಕುವುದು
* ಅತಿ ವೇಗ, ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸದಿರುವುದು
ಬಳಕೆಗಿಲ್ಲ ಬಸ್ ನಿಲ್ದಾಣಗಳು
ರಾಷ್ಟ್ರೀಯ ಹೆದ್ದಾರಿ&75ರ ಸರ್ವೀಸ್ ರಸ್ತೆಯಲ್ಲಿ ಬಸ್ ನಿಲ್ದಾಣಗಳಿದ್ದೂ ಕೆಲ ಬಸ್ಗಳು ಸರ್ವೀಸ್ ರಸ್ತೆಗೆ ಇಳಿಯದ ಕಾರಣ ಅವು ಪ್ರಯಾಣಿಕರಿಲ್ಲದೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಹೆದ್ದಾರಿ ಬದಿಯಲ್ಲಿಯೇ ಬಸ್ಗಳನ್ನು ಕಾಯುವ ಸ್ಥಿತಿ ಪ್ರಯಾಣಿಕರದು. ಇದು ಅಪಾಯಕ್ಕೆ ಆಹ್ವಾನಿಸುತ್ತಿದೆ.
2026ರ ಆರಂಭದಿಂದ ಇಲ್ಲಿಯವರೆಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 24 ಮಂದಿ ಮೃತಪಟ್ಟು, 62ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಶೇ.50ರಷ್ಟು ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತಗಳಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುದೂರು ಪೊಲೀಸರು ಮಾಹಿತಿ ನೀಡಿದ್ದಾರೆ.
"
ಹೆದ್ದಾರಿಗಳಲ್ಲಿ ವೇಗಮಿತಿ ಮೀರಿ ಬರುವ ವಾಹನಗಳಿಂದ ಪಾದಚಾರಿ ಹಾಗೂ ವಾಹನಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗುತ್ತಿವೆ. ಈಗ ವಾಹನಗಳ ವೇಗಮಿತಿ ಕಡಿಮೆಗೊಳಿಸಲು ಹಾಟ್ಸ್ಪಾಟ್ಗಳಲ್ಲಿ ಬ್ಯಾರಿಕೇಡ್, ಡ್ರಮ್ಗಳನ್ನು ಅಳವಡಿಸಲಾಗಿದೆ. ಅಪಘಾತಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ತಾಳೇಕೆರೆ ಹಾಗೂ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ಗಳಲ್ಲಿ ಸಂಚಾರಸಿಕ್ಕು ಉಂಟಾಗದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
— > ರವಿ ಡಿವೈಎಸ್ಪಿ, ಮಾಗಡಿ ಉಪ ವಿಭಾಗ
"
ಕೋಟ್ರಾಷ್ಟ್ರೀಯ ಹೆದ್ದಾರಿ&75ರ ತಿಪ್ಪಸಂದ್ರ ಮತ್ತು ತಾಳೇಕೆರೆ ಹ್ಯಾಂಡ್ ಪೋಸ್ಟ್ ಬಳಿ ಹೆದ್ದಾರಿ ಪ್ರಾಧಿಕಾರದಿಂದ ಸೇತುವೆ ಕಾಮಗಾರಿ ನಡೆಯುತ್ತಿದ್ದು, ತಾಳೇಕೆರೆ ರಸ್ತೆ ಪಾಳ್ಯದಿಂದ ಕುಣಿಗಲ್ ಅಂಚೇಪಾಳ್ಯದವರೆಗೂ ನಿತ್ಯ ವಾಹನ ದಟ್ಟಣೆಯಾಗುತ್ತಿದೆ. ಅಪಘಾತಕ್ಕೆ ಇದು ಸಹ ಕಾರಣವಾಗಿದ್ದು, ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.
— > ಕನ್ನಡ ಕುಮಾರ್ ಸಾಮಾಜಿಕ ಹೋರಾಟಗಾರ, ಹನುಮಾಪುರ