ಯೋಗೇಶ್​ 
ಬೆಂಗಳೂರು ದಕ್ಷಿಣ

ಕಲ್ಲುಎತ್ತಿಹಾಕಿ ಸ್ನೇಹಿತನ ಕೊಲೆ

ರಾಮನಗರ: ಇಲ್ಲಿನ ವಿವೇಕಾನಂದನಗರದ ಖಾಸಗಿ ಕಾಲೇಜು ಬಳಿ ಭಾನುವಾರ ರಾತ್ರಿ ಮದ್ಯದ ಮತ್ತಿನಲ್ಲಿ ಸ್ನೇಹಿತನ ಮೇಲೆಯೇ ಕಲ್ಲುಎತ್ತಿಹಾಕಿ ಕೊಲೆಮಾಡಲಾಗಿದೆ.
ನಗರದ ನಿವಾಸಿ ಯೋಗೇಶ್​ (41) ಹತ್ಯೇಗಿಡಾದವರು. ಚನ್ನಪಟ್ಟಣ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಎಫ್​ಡಿಎ ಆಗಿದ್ದ ಯೋಗೇಶ್​ ಪ್ರತಿನಿತ್ಯ ಕಾಲೇಜು ಪಕ್ಕದ ಖಾಲಿ ಜಾಗದಲ್ಲಿ ಸ್ನೇಹಿತರೊಂದಿಗೆ ಮದ್ಯಸೇವನೆಗೆ ಬರುತ್ತಿದ್ದರು. ಭಾನುವಾರ ರಾತ್ರಿಯೂ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ, ಮದ್ಯದ ಮತ್ತಿನಲ್ಲಿದ್ದ ಯೋಗೇಶ್​ ಮೇಲೆ ಸ್ನೇಹಿತರೇ ಕಲ್ಲು ಎತ್ತಿಹಾಕಿದ್ದಾರೆ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಐಜೂರು ಠಾಣೆ ಪೊಲೀಸರು, ಮರಣೋತ್ತರ ಪರೀೆಗೆ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಪರೀೆ ರವಾನಿಸಿದರು. ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದರು. ಶ್ವಾನದಳ ಸೇರಿದಂತೆ ವಿಧಿ ವಿಜ್ಞಾನ ತರು ಸ್ಥಳ ಪರಿಶೀಲಿಸಿ, ಸಾಕ್ಷ$್ಯ ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.