ಮಾಗಡಿಯಲ್ಲಿ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗ ತಡೆಗಟ್ಟಲು ವಿಶೇಷ ಲಾರ್ವಾ ಸಮೀೆ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಯ್ಯ ಚಾಲನೆ ನೀಡಿದರು. ಜಿ.ಕೆ. ಉಮೇಶ್​ ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್​ ಹಾಗೂ ಶಿವಸ್ವಾಮಿ, ಮಮತಾ, ಹೊನ್ನಮ್ಮ, ಕೇಶವ ಇತರರು ಇದ್ದರು. 
ಬೆಂಗಳೂರು ದಕ್ಷಿಣ

ಡೆಂಘೆ, ಚಿಕೂನ್​ಗುನ್ಯಾ ನಿಯಂತ್ರಣಕ್ಕೆ ಕ್ರಮ

ಮಾಗಡಿ: ಮಳೆಗಾಲ ಹಿನ್ನೆಲೆಯಲ್ಲಿ ಸೊಳ್ಳೆಗಳಿಂದ ಹರಡುವ ಡೆಂಘೆ ಮತ್ತು ಚಿಕೂನ್​ಗುನ್ಯಾ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಯ್ಯ ತಿಳಿಸಿದರು.
ತಾಲೂಕಿನಾದ್ಯಂತ ಡೆಂಘೆ ಮತ್ತು ಚಿಕೂನ್​ಗುನ್ಯಾ ಲಾರ್ವಾಗಳನ್ನು ನಿಮೂರ್ಲನೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು "100 ದಿನಗಳ ವಿಶೇಷ ಲಾರ್ವಾ ಸಮೀೆ' ಕಾರ್ಯಕ್ರಮಕ್ಕೆ ಮಾಗಡಿ ಟೌನ್​ನಲ್ಲಿ ಚಾಲನೆ ನೀಡಿ ಮಾತನಾಡಿದರು. ಪ್ರತಿ ಭಾನುವಾರ ಸೊಳ್ಳೆ ಮುಕ್ತ ದಿನವಾಗಿ ಆಚರಿಸಿ, ಹಳೆಯ ಟಯರ್​, ಪ್ಲಾಸ್ಟಿಕ್​ ಹಾಗೂ ಕುಂಡಗಳಲ್ಲಿ ನಿಂತಿರುವ ನೀರನ್ನು ಖಾಲಿ ಮಾಡಬೇಕು ಎಂದು ಮನವಿ ಮಾಡಿದರು.
ಆಂದೋಲನದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ಮನೆ ಮನೆಗೂ ಭೇಟಿ ನೀಡಲಿದ್ದಾರೆ. ನೀರಿನ ತೊಟ್ಟಿ, ಡ್ರಮ್​ ಹಾಗೂ ಇತರೆ ನೀರು ಶೇಖರಣಾ ಪಾತ್ರೆಗಳನ್ನು ತಪಾಸಣೆ ನಡೆಸಿ, ಲಾರ್ವಾ ಕಂಡುಬಂದರೆ ತಕ್ಷಣವೇ ನಾಶಪಡಿಸುವ ಮತ್ತು ದ್ರಾವಣ ಸಿಂಪಡಿಸುವ ಕಾರ್ಯ ನಡೆಯಲಿದೆ ಎಂದರು.
ೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಕೆ. ಉಮೇಶ್​ ಮಾತನಾಡಿ, ಡೆಂ, ಚಿಕೂನ್​ಗುನ್ಯಾ ತಡೆಗೆ ಜಾಗೃತಿ ಅಗತ್ಯವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳಿಂದ ಹರಡುವ ಡೆಂ ಮತ್ತು ಚಿಕೂನ್​ಗುನ್ಯಾ ಜ್ವರಗಳ ಭೀತಿ ಹೆಚ್ಚಾಗುತ್ತದೆ. ರೋಗಗಳನ್ನು ನಿಯಂತ್ರಿಸಲು ಕೇವಲ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ವಿಭಾಗ ಅಥವಾ ಆರೋಗ್ಯ ಇಲಾಖೆ ಮಾತ್ರ ಶ್ರಮಿಸಿದರೆ ಸಾಲದು ಪ್ರತಿ ನಾಗರಿಕನ ಜವಾಬ್ದಾರಿಯುತ ಪಾತ್ರವೂ ಅತ್ಯಂತ ಪ್ರಮುಖವಾಗಿದೆ ಎಂದರು.
ಸೊಳ್ಳೆ ನಿವಾರಕ ಬಳಸಿ: 
ವಾರಕ್ಕೊಮ್ಮೆ ಮನೆಯಲ್ಲಿರುವ ಸೀಮೆಎಣ್ಣೆ ಡ್ರಮ್​ಗಳು, ತೊಟ್ಟಿಗಳು, ಏರ್​ ಕೂಲರ್​ಗಳು, ಸಿಂಪ್​ ಹಾಗೂ ನೀರಿನ ಪಾತ್ರೆಗಳನ್ನು ಖಾಲಿ ಮಾಡಿ, ತೊಳೆದು ಒಣಗಿಸಬೇಕು. ಕುಡಿಯುವ ಮತ್ತು ಬಳಸುವ ನೀರಿನ ಪಾತ್ರೆಗಳು, ಡ್ರಮ್​ಗಳನ್ನು ಬಿಗಿಯಾಗಿ ಮುಚ್ಚಿರಬೇಕು. ತೆಂಗಿನ ಬೊಂಬೆಗಳು, ಹಳೆಯ ಬಾಟಲಿಗಳು ಮತ್ತು ಒಡೆದ ಕುಂಡಗಳಲ್ಲಿ ನೀರು ನಿಲ್ಲದಂತೆ ತಕ್ಷಣ ವಿಲೇವಾರಿ ಮಾಡಬೇಕು. ಹಗಲಿನಲ್ಲೂ  ಮೈತುಂಬಾ ಬಟ್ಟೆಗಳನ್ನು ಧರಿಸಿ, ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಬಾರದಂತೆ ಜಾಲರಿ ಅಳವಡಿಸಿ. ಮಲಗುವಾಗ ಸೊಳ್ಳೆಪರದೆ ಹಾಗೂ ಸೊಳ್ಳೆ ನಿವಾರಕ ಕ್ರೀಮ್​ಗಳನ್ನು ಬಳಸಿ ಎಂದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ತಪಾಸಣೆ ನಡೆಸಿದಾಗ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಇಲಾಖೆ ಫಾಗಿಂಗ್​ ಮಾಡಿದಾಗ ಪೂರ್ಣ ಪ್ರಮಾಣದ ಬೆಂಬಲ ನೀಡಬೇಕು ಎಂದರು.
"

ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಗಂಟು ನೋವು, ಹಾಗೂ ಚರ್ಮದ ಮೇಲೆ ಕೆಂಪು ಕಡಿತದಂತಹ ಲಕ್ಷಣಗಳು ಕಂಡುಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಪರೀೆ ಮತ್ತು ಚಿಕಿತ್ಸೆ ಪಡೆಯಿರಿ. ಸ್ವಯಂ ವೈದ್ಯ ಪದ್ಧತಿ ಅಪಾಯಕಾರಿ. ಪರಿಸರ ನೈರ್ಮಲ್ಯ ಕಾಪಾಡೋಣ, ಸೊಳ್ಳೆ ಮುಕ್ತ ವಾತಾವರಣ ನಿರ್ಮಿಸೋಣ, ಡೆಂ &ಚಿಕೂನ್​ಗುನ್ಯಾದಿಂದ ದೂರವಿರೋಣ.

— > ಜಿ.ಕೆ. ಉಮೇಶ್​, ೇತ್ರ ಆರೋಗ್ಯ ಶಿಕ್ಷಣಾಧಿಕಾರಿ