ರೈತಸೇವಾ ಸಹಕಾರ ಸಂದ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಗಳು ನಾಮ ಪತ್ರಸಲ್ಲಿಕೆ ಮಾಡಿದರು. 
ಬೆಂಗಳೂರು ದಕ್ಷಿಣ

ನಿರ್ದೇಶಕ ಸ್ಥಾನಕ್ಕೆ ಕದನಕಲಿಗಳು ಸಿದ್ಧ

ಬಿಡದಿ: ಪಟ್ಟಣದ ಪ್ರತಿಷ್ಠಿತ ರೈತಸೇವಾ ಸಹಕಾರ ಸಂದ ನಿರ್ದೇಶಕರ ಚುನಾವಣೆ ರಂಗು ಪಡೆದುಕೊಂಡಿದ್ದು, ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಂರ್ಷಕ್ಕೆ ಕಾರಣವಾಗಿದೆ.
ನಿರ್ದೇಶಕ ಸ್ಥಾನಕ್ಕೆ ಎರಡೂ ಪಗಳಿಂದ ಹುರಿಯಾಳುಗಳು ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಶಾಸಕ ಎಚ್​.ಸಿ.ಬಾಲಕೃಷ್ಣ ಹಾಗೂ ಮಾಜಿ ಶಾಸಕ ಎ.ಮಂಜುನಾಥ್​ ನಡುವೆ ನೇರ ಹಣಾಹಣೆಯ ಚುನಾವಣೆ ಇದಾಗಿದ್ದು, ಇಬ್ಬರೂ ನಾಯಕರು ಮುಂದೆ ನಿಂತು ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
ಏ.12ರಂದು ಮತದಾನ: ಸಹಕಾರ ಸಂದ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಏ.1ರಂದು ನಾಮಪತ್ರ ಸ್ವೀಕಾರ ಆರಂಭವಾಗಿದೆ. ಏ.4ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು ಏ.6 ಕೊನೆಯ ದಿನವಾಗಿದೆ. ಏ.12ರ ಭಾನುವಾರ ಮತದಾನವಿದ್ದು, ಅಂದೇ ಮತ ಎಣಿಕೆ ಆಗಲಿದೆ.
ಜೆಡಿಎಸ್​ ವಶದಲ್ಲಿದ್ದ ಸಂ
ಸಂ ಸ್ಥಾಪನೆಯಾದಾಗಿನಿಂದ ಜೆಡಿಎಸ್​ ಬೆಂಬಲಿತರೇ ಅಧ್ಯರಾಗಿ ಅಧಿಕಾರ ನಡೆಸಿದ್ದಾರೆ. ಬಿಡದಿ ಮಟ್ಟದಲ್ಲಿ ಈ ಸಹಕಾರ ಸಂವೇ ದೊಡ್ಡ ಸಂ. ಇದೀಗ ಕಾಂಗ್ರೆಸ್​&ಜೆಡಿಎಸ್​ಗೆ ಪ್ರತಿಷ್ಠೆಯಾಗಿದೆ. ಸಂದ ಅಧಿಕಾರವನ್ನು ತಮ್ಮ ಬತ್ತಳಿಕೆಯಲ್ಲೇ ಉಳಿಸಿಕೊಳ್ಳಲು ಜೆಡಿಎಸ್​ ತಂತ್ರಗಾರಿಕೆ ಶುರು ಮಾಡಿದೆ. ಮಾಜಿ ಶಾಸಕರೇ ಖುದ್ದಾಗಿ ಚುನಾವಣಾ ರಣರಂಗವನ್ನು ಪ್ರವೇಶ ಮಾಡಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಇನ್ನು ಶಾಸಕ ಬಾಲಕೃಷ್ಣ ಕೂಡ ಸಂದ ಅಧಿಕಾರ ಹಿಡಿಯುವ ದೃಷ್ಟಿಯಿಂದ ಸೂಕ್ತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿದ್ದಾರೆ.
ಪಾಂತರ ಪರ್ವ
ಚುನಾವಣೆ ಯಾವುದೇ ಇರಲಿ ಮುಖಂಡರು ಮಾತ್ರ ಪಕ್ಷ ಬದಲಾಯಿಸುತ್ತಿರುತ್ತಾರೆ. ಇದು ಇಲ್ಲಿನ ಸಹಕಾರ ಸಂದ ನಿರ್ದೇಶಕರ ಚುನಾವಣೆಯಲ್ಲೂ ಮುಂದುವರಿದಿದೆ. ಎಚ್​.ಸಿ.ಬಾಲಕೃಷ್ಣ ಮಂಚನಾಯಕನಹಳ್ಳಿ ಭಾಗದಲ್ಲಿ ಕೆಲವು ಅನ್ಯ ಪದ ಮುಖಂಡರನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಅರ್ಲಟ್​ ಆದ ಎ.ಮಂಜುನಾಥ್​ ಬಿಡದಿ ಭಾಗದ ಹಲವು ಕೈ ಮುಖಂಡರನ್ನು ಜೆಡಿಎಸ್​ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಚುನಾವಣೆ ದೃಷ್ಟಿಯಿಂದಲೇ ಸಾಕಷ್ಟು ಅಸಮಾಧಾನಿತ ಕೈ ಮುಖಂಡರು ಜೆಡಿಎಸ್​ಗೆ ಜೈ ಎಂದಿದ್ದಾರೆ.
ಮೈತ್ರಿ ಧರ್ಮ ಪಾಲನೆ
ರಾಜ್ಯಮಟ್ಟದಲ್ಲಿ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯಾಗಿವೆ. ಈ ಮೈತ್ರಿ ಧರ್ಮ ಸಹಕಾರ ಸಂದ ಚುನಾವಣೆಯಲ್ಲೂ ಮುಂದುವರಿದಿದೆ. 12 ನಿರ್ದೇಶಕ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಇದರೊಂದಿಗೆ ಮೈತ್ರಿ ಧರ್ಮ ಪಾಲನೆ ಮಾಡಿಕೊಂಡು ಎರಡೂ ಪದ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
"

ರೈತಸೇವಾ ಸಹಕಾರ ಸಂದ ಅವಧಿ ಮುಗಿದಿದ್ದು, ರಾಜಕೀಯ ಪ್ರಭಾವ ಬಳಸಿ ಚುನಾವಣೆ ನಡೆಸಿರಲಿಲ್ಲ. ಇದೀಗ ತಡವಾಗಿಯಾದರೂ ಚುನಾವಣೆ ೂಷಣೆಯಾಗಿದೆ. ಮೈತ್ರಿ ಅಭ್ಯರ್ಥಿಗಳಾಗಿ 12 ಮಂದಿ ಸ್ಪರ್ಧೆಯಲ್ಲಿದ್ದಾರೆ. ಸಂದಲ್ಲಿ ಷೇರು ಹೊಂದಿರುವ ರೈತರು ಜೆಡಿಎಸ್​ ಬೆಂಬಲಿತರಾಗಿದ್ದು, ಈ ಬಾರಿಯೂ ನಮ್ಮನ್ನು ಕೈಬಿಡಲ್ಲ ಎನ್ನುವ ವಿಶ್ವಾಸ ನನಗಿದೆ. ಕಾಂಗ್ರೆಸ್​ ದುರಾಡಳಿತದಿಂದ ಬೇಸತ್ತು ಮುಖಂಡರು ಜೆಡಿಎಸ್​ಗೆ ಸೇರ್ಪಡೆಯಾಗುತ್ತಿದ್ದಾರೆ.

"

ಬಿಡದಿ ರೈತಸೇವಾ ಸಹಕಾರ ಸಂದ ನಿರ್ದೇಶಕರ ಚುನಾವಣೆಗೆ ನಮ್ಮ ಪದಿಂದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಹಣ ನೀಡುತ್ತಿದೆ. ಹಾಗಾಗಿ ಜನರು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ.