ಬಸವನಬೆಟ್ಟದ ಬಳಿ ಬೇಟೆಗೆ ಹೊಂಚುಹಾಕುತ್ತಿದ್ದ ಆರೋಪಿಯನ್ನು ನಾಡಬಾಂಬ್ನೊಂದಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದು. ಆರ್ಎಫ್ಓ ಬಾಲಕೃಷ್ಣ ಹಾಗೂ ಸಿಬ್ಬಂದಿ ಇದ್ದರು.
ಕನಕಪುರ: ಸಾತನೂರು ಸಮೀಪದ ಬಸವನಬೆಟ್ಟದಲ್ಲಿ ಕಾಡುಪ್ರಾಣಿ ಬೇಟೆಗೆ ಹೊಂಚುಹಾಕುತ್ತಿದ್ದ ಮುಳ್ಳಹಳ್ಳಿಯ ಶಶಿಕುಮಾರ್ (24) ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಜೀವಂತ ನಾಡಬಾಂಬ್ ಸಮೇತ ಹಿಡಿದು ಶನಿವಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾತನೂರು ಸಬ್ಇನ್ಸ್ಪೆಕ್ಟರ್ ಸಮಂತ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖೆ ಆರಂಭಿಸಿದ್ದಾರೆ.