ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿರುವುದು. ಸರ್ಕಲ್ ಇನ್ಸ್ಪೆಕ್ಟರ್ ಅನಂತರಾಮು, ಪಿಎಸ್ಐ ರತ್ನಮ್ಮ, ಸಿಬ್ಬಂದಿ ಶಿವಶಂಕರ್, ಸಿಬ್ಬಂದಿ ಇದ್ದಾರೆ.
ಕನಕಪುರ: ನಗರದ ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅಂತರ ಜಿಲ್ಲಾ ಸರಗಳ್ಳನನ್ನು ಬಂಧಿಸಿರುವ ನಗರ ಠಾಣೆ ಪೋಲಿಸರು, ಬಂಧಿತನಿಂದ 1.18 ಲಕ್ಷ ರೂ. ಮೌಲ್ಯದ 8 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಸಗಲಾಪುರ ಗ್ರಾಮದ ನಿವಾಸಿ, ತಾಲೂಕಿನ ಎರಗನಹಳ್ಳಿಯಲ್ಲಿ ವಾಸವಿದ್ದ ಮಂಜ (38) ಬಂಧಿತ. 2023ರ ಆಗಸ್ಟ್ 13ರಂದು ರಾತ್ರಿ ದೇವಾಲಯದ ಬಾಗಿಲು ಮುರಿದು 4 ಗ್ರಾಂ ಚಿನ್ನದ ಗುಂಡು, 4 ಗ್ರಾಂನ ಚಿನ್ನದ ಲಕ್ಷಿ$್ಮ ಕಾಸು ಹಾಗೂ 50 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರ ಠಾನೆ ಪೊಲೀಸರು ತನಿಖೆ ಕೈಗೊಂಡು, ಆರೋಪಿ ಮೈಸೂರಿನಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್ಗೌಡ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಅನಂತರಾಮು, ಪಿಎಸ್ಐ ರತ್ನಮ್ಮ, ಸಿಬ್ಬಂದಿ ಶಿವಶಂಕರ್, ರಮೇಶ್, ರವಿ, ವಿಶ್ವಾಸ್, ಮನು, ತ್ರಿವೇಣ್, ಚಾಲಕ ಶಂಕರಲಿಂಗಯ್ಯ ಕಾರ್ಯಾಚಣೆ ನಡೆಸಿದ್ದಾರೆ.