ಕಳ್ಳತನ ಪ್ರಕರಣದ ಬೇದಿಸಿದ ಹಾರೋಹಳ್ಳಿ ಪೊಲೀಸರ ತಂಡ.
- ಮೂರು ತಿಂಗಳ ಹಿಂದೆ ಕಳ್ಳತನ
- ಮೈಸೂರು ಮೂಲದವರ ಬಂಧನ
ಮೂರು ತಿಂಗಳ ಹಿಂದೆ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಖದೀಮನನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿ, 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಉದಯಗಿರಿಯ ಅಲೀಂ(35) ಬಂಧಿತ. 2025ರ ಡಿಸೆಂಬರ್ 13ರಂದು ಹಾರೋಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕೆರೆದೊಡ್ಡಿ ಆದಿಶಕ್ತಿ ಬಡಾವಣೆಯ ಮನೆಯೊಂದರ ಬಾಗಿಲನ್ನು ಮೀಟಿ ಒಳ ನುಗ್ಗಿದ ಖದೀಮ, ಮನೆಯಲ್ಲಿನ ಚಿನ್ನದ ಸರ ದೋಚಿದ್ದ. ಈ ಸಂಬಂಧ ಮನೆ ಮಾಲೀಕರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗಾಗಿ ಇನ್‌ಸ್ಪೆಕ್ಟರ್ ಮಲ್ಲೇಶ್ ನೇತೃತ್ವದ ತಂಡ ಬಲೆ ಬೀಸಿದ್ದರು.