ಚನ್ನಪಟ್ಟಣ: ದೇವರಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ್ಲೆಕ್ಸ್ಗೆ ಬೆಂಕಿ ಹಚ್ಚಿದ್ದವರ ಪೈಕಿ ಒಬ್ಬನನ್ನು ಎಂಕೆ ದೊಡ್ಡಿ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗ್ರಾಮದ ಡಿ.ಪಿ.ಶಶಾಂಕ್ (20) ಬಂಧಿತ. ಪ್ರಕರಣದಲ್ಲಿ ಪಾಲ್ಗೊಂಡಿದ್ದ ಇನ್ನಿಬ್ಬರ ಮಾಹಿತಿ ಲಭ್ಯವಾಗಿದ್ದು, ಅವರ ಬಂಧನಕ್ಕೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೂ.27ರಂದು ಕೆಂಪೇಗೌಡರ ಜಯಂತಿ ಅಂಗವಾಗಿ ಗ್ರಾಮದಲ್ಲಿ ಅಳವಡಿಸಿದ್ದ ಕೆಂಪೇಗೌಡರ ಬೃಹತ್ ಬ್ಯಾನರ್ಗೆ ಭಾನುವಾರ ಮಧ್ಯರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಲ್ಲೆ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದರು.
ಗ್ರಾಮಕ್ಕೆ ಪಾತೀತವಾಗಿ ಆಗಮಿಸಿದ ಒಕ್ಕಲಿಗ ಸಮಾಜ ಮುಖಂಡರು ಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ, ಈ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಲು ಆಗ್ರಹಿಸಿದ್ದರು. ಪ್ರತಿಭಟನಾಕಾರರ ಮನವೊಲಿಸಿದ ಡಿವೈಎಸ್ಪಿ ಕೆ.ಸಿ.ಗಿರಿ, ಸಿಪಿಐ ಪ್ರಕಾಶ್, ಪಿಎಸ್ಐಗಳಾದ ಸಹನಾ ಪಾಟೀಲ್, ಮನೋಹರ್ ಸೇರಿ ಇನ್ನಿತರ ಅಧಿಕಾರಿಗಳು ಮೂರು ದಿನದೊಳಗೆ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದರು. ಭರವಸೆ ನೀಡಿದ 24 ಗಂಟೆಯಲ್ಲೇ ಖಚಿತ ಮಾಹಿತಿ ಮೇರೆಗೆ ಡಿ.ಪಿ.ಶಶಾಂಕ್ ಎಂಬಾತನನ್ನು ಬಂಧಿಸಿದ್ದಾರೆ.