ಕನಕಪುರ ತಾಲೂಕು ಬೋಳಮಲ್ಲಪ್ಪನದೊಡ್ಡಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಲೆಮಹದೇಶ್ವರಸ್ವಾಮಿ ದೇಗುಲ. 
ಬೆಂಗಳೂರು ದಕ್ಷಿಣ

ಮಲೆ ಮಹದೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆಗೆ ಸಿದ್ಧ

ಕನಕಪುರ: ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಬೋಳಮಲ್ಲಪ್ಪನದೊಡ್ಡಿ ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಲೋಕಾರ್ಪಣಾ ನಿಮಿತ್ತ ನ.7ರಿಂದ 9ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಟ್ರಸ್ಟ್​ ಅಧ್ಯಕ್ಷ ಎಸ್​.ಉಮೇಶ್​ ತಿಳಿಸಿದ್ದಾರೆ.
ನ.7ರಂದು ಗಣಪತಿ ಪೂಜೆ, ಆಗ್ರೋದಕ ಮತ್ತು ಕುಂಭ ಸಹಿತ ಗೋಪೂಜೆಯೊಂದಿಗೆ ಮಹದೇಶ್ವರ ದೇವಾಲಯದ ಪ್ರವೇಶ, ಪ್ರಮುಖ ಆಲಯ ಪ್ರವೇಶ ಬಲಿ, ವಾಸ್ತು ಬಲಿ, ಶಿವ ಪುಣ್ಯಾಹ, ವಾಸ್ತು ಹೋಮ, ನ.8ರಂದು ಪಂಚ ಕಳಸ, ನವಗ್ರಹ, ಮೃತ್ಯುಂಜಯ ದಶದಿಕ್ಪಾಲಕರು, ಸಪ್ತಮಾತೃಕೆ, ಪ್ರಧಾನ ದೇವತೆಗಳ ಕಳಸ ಸ್ಥಾಪನೆ ಮತ್ತು ಆರಾಧನೆ, ವಿಗ್ರಹಗಳ ಶಿಲ್ಪ ಸಂಸ್ಕಾರ ಹಾಗೂ ಲಾದಿವಸ ಸೇರಿ ವಿವಿಧ ಕಾರ್ಯಗಳು ಜರುಗಲಿವೆ.
ಇನ್ನು ನ.9ರಂದು ಮಹದೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಪರಿವಾರದ ದೇವತೆಗಳ ಪ್ರತಿಷ್ಠಾಪನೆ ಸೇರಿ ರುದ್ರಾಭಿಷೇಕ, ಕುಂಭಾಭಿಷೇಕ, ಶ್ರೀ ಮಹದೇಶ್ವರ ಸ್ವಾಮಿ ವಿಶೇಷ ಅಲಂಕಾರ, ಬಿಲ್ವ ಅಷ್ಟೋತ್ತರ ಸೇರಿ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಸಾಲೂರು ಬೃಹನ್ಮಠ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮರಳೆಗವಿ ಮಠದ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಶಂಭುಲಿಂಗೇಶ್ವರ ಸ್ವಾಮಿ ೇತ್ರ ಶಂಭುಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಭಾಗವಹಿಸಲಿದ್ದು.
ಡಿಸಿಎಂ ಡಿ.ಕೆ.ಶಿವಕುಮಾರ್​ ಅಧ್ಯಕ್ಷತೆಯಲ್ಲಿ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಂಎಲ್​ಸಿ ಎಸ್​.ರವಿ, ಶಾಸಕ ಇಕ್ಬಾಲ್​ಹುಸೇನ್​ ಭಾಗವಹಿಸಲಿದ್ದಾರೆ.
ಖ್ಯಾತ ಜಾನಪದ ಕಲಾವಿದ ಶಿವರಾ ಉಮೇಶ್​ ತಂಡದವರಿಂದ ಭಕ್ತಿ ಗೀತೆಗಳ ಗಾಯನ, ಶ್ರೀ ಮಲೆ ಮಹದೇಶ್ವರ ಪಾದಯಾತ್ರೆ ತಂಡದಿಂದ ಕಂಸಾಳೆ, ಶಂಕರ್​ ನಾಯ್ಕ ತಂಡದಿಂದ ಭಜನೆ ಮತ್ತು ಹರಿಕಥೆ ಏರ್ಪಡಿಸಲಾಗಿದೆ. ಭಕ್ತರಿಗೆ ಅನ್ನಸಂತರ್ಪಣೆ ಇರಲಿದೆ ಎಂದು ಎಸ್​.ಉಮೇಶ್​ ತಿಳಿಸಿದ್ದಾರೆ.