ಕಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ಹಾರೋಹಳ್ಳಿ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನದ ಮಾಂಗಲ್ಯ ಸರ ಹಾಗೂ ಬೈಕ್.
ಹಾರೋಹಳ್ಳಿ: ಚಿನ್ನದ ಮಾಂಗಲ್ಯ ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲೂಕಿನ ತಿಮ್ಮರಾಯಸ್ವಾಮಿ ದಿಣ್ಣೆ ಕುವೆಂಪುನಗರದ ಆಟೋ ಚಾಲಕ ಲೋಕೇಶ (41), ಮಟ್ಟನಹಳ್ಳಿ ಲಾರಿ ಚಾಲಕ ರಮೇಶ್ ವಿ. ಬಿನ್ ಲೇಟ್ ವೆಂಕಟರಮಣಪ್ಪ (43) ಬಂಧಿತರು.
ಏನಿದು ಪ್ರಕರಣ?: ತಾಲೂಕಿನ ಆನೇಕಲ್&ಹಾರೋಹಳ್ಳಿ ಮುಖ್ಯರಸ್ತೆಯ ನರಿಪುರಗೇಟ್ ಬಳಿ ಸೋಮವಾರ ಸಂಜೆ ಲ್ಮಮ್ಮ ಎಂಬುವವರು ನೀರು ತೆಗೆದುಕೊಳ್ಳಲು ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಈ ಇಬ್ಬರು ಲಕ್ಷ$್ಮಮ್ಮ ಅವರನ್ನು ಅಡ್ಡಗಟ್ಟಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಲಕ್ಷ$್ಮಮ್ಮ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ 26ಗ್ರಾಂನ ಚಿನ್ನದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.
ಈ ಬೈಕ್ ಸಹ ಕಳ್ಳತನ ಮಾಡಿದ್ದು ಎಂದು ಖದೀಮರು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಪೊಲೀಸ್ ಉಪಅಧೀಕ ಶ್ರೀನಿವಾಸ್ ಬಿ.ಎಂ. ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಮಲ್ಲೆಶ್, ಪಿಎಸ್ಐ ಪ್ರಜ್ವಲ್, ಎಎಸ್ಐ ಆಯುಬ್ ಪಾಷಾ, ಸಿಬ್ಬಂದಿ ಅನಂತ್ ಕುಮಾರ್, ಎಲ್.ಬೋರೇಗೌಡ, ಶಂಕರಲಿಂಗ ಎಸ್. ಕುಂಬಾರ್, ಶರಣಬಸವ, ಕೃಷ್ಣಮೂರ್ತಿ, ವಿರೂಪಾಪ್ಪ, ಫೈರೋಜ್ ಪಾಷ ತಂಡ ಕಾರ್ಯಾಚರಣೆ ಕೈಗೊಂಡಿತ್ತು.