ಮಾಗಡಿ: ಸಾರ್ವಜನಿಕರಿಗೆ ಸಂಜೀವಿನಿಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆ ಸದ್ಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ರ್ನಿಲಕ್ಷ$್ಯದಿಂದಾಗಿ ಜನರು ಉತ್ತಮ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.
ಹೌದು... ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಕಳೆದ ತಿಂಗಳಷ್ಟೇ ಆಸ್ಪತ್ರೆ ಹಿಂದಿನ ಮ್ಯಾನ್ ಹೋಲ್ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಹಾಗೂ ಸಮರ್ಪಕ ಆಸನದ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುತ್ತಿರುವ ಕುರಿತಂತೆ ವರದಿ ಪ್ರಕಟಿಸಲಾಗಿತ್ತು. ಇದೀಗ, ಹಲವು ದಿನಗಳಿಂದ ಎಕ್ಸ್&ರೇ ಯಂತ್ರ ಕೆಟ್ಟು ಮೂಲೆ ಸೇರಿದ್ದರೂ, ಅದನ್ನು ಸರಿಪಡಿಸಲು ಮುಂದಾಗದೆ ಆರೋಗ್ಯ ಇಲಾಖೆ ಅಧಿಕಾರಿಗಳು ರ್ನಿಲಕ್ಷ$್ಯ ತೋರುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತ ಹಾಗೂ ಸಾಮಾನ್ಯ ಜನರಿಗೆ ಕೇವಲ 50 ರೂ.ನಲ್ಲಿ ಎಕ್ಸ್&ರೇ ಸೌಲಭ್ಯ ಸಿಗುತ್ತಿತ್ತು. ಆದರೆ, ವಾರಗಳೇ ಕಳೆದರೂ ಯಂತ್ರ ದುರಸ್ತಿಯಾಗದ ಕಾರಣ, ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಹಾಗೂ ಸ್ಕಾ$್ಯನಿಂಗ್ ಸೆಂಟರ್ಗಳತ್ತ ಮುಖ ಮಾಡಬೇಕಿದೆ. ಖಾಸಗಿ ಲ್ಯಾಬ್ಗಳಲ್ಲಿ ಒಂದು ಎಕ್ಸ್&ರೇಗೆ ಬರೋಬ್ಬರಿ 500 ರೂ.ವರೆಗೆ ವಸೂಲಿ ಮಾಡುತ್ತಾರೆ. ಇದರಿಂದ ದಿನದ ಕೂಲಿ ನಂಬಿ ಬದುಕುವ ಬಡ ಕುಟುಂಬಗಳು ತುರ್ತು ಸಂದರ್ಭಗಳಲ್ಲಿ ಸಾವಿರಾರು ರೂ.ನೀಡಿ ಎಕ್ಸ್&ರೇ ಮಾಡಿಸಲಾಗದೆ ಪರದಾಡುತ್ತಿದ್ದಾರೆ.
ಇನ್ನು ಮಾಗಡಿಯಿಂದ ಜಿಲ್ಲಾ ಆಸ್ಪತ್ರೆಗೆ ಹೋಗಿ ಬರಲು ಇಡೀ ದಿನ ವ್ಯಯಿಸಬೇಕಾಗುತ್ತದೆ. ರೋಗಿಗಳು ತಾಲೂಕಿನಿಂದ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಕ್ಸ್&ರೇ ಮಾಡಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಇತ್ತ ತಾಲೂಕು ಆಸ್ಪತ್ರೆಯ ಒಳರೋಗಿ ಹಾಗೂ ಹೊರರೋಗಿ ವಿಭಾಗದ ವೈದ್ಯರ ಕರ್ತವ್ಯದ ಅವಧಿ ಮುಗಿದಿರುತ್ತದೆ. ಇದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿಗಳ ಪ್ರಾಣಕ್ಕೆ ಕುತ್ತು ಬಂದರೂ ಅಚ್ಚರಿಯೇನಲ್ಲ.
ಆಸ್ಪತ್ರೆಯ ದುಸ್ಥಿತಿ ಕೇವಲ ಯಂತ್ರಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ಎಕ್ಸ್&ರೇ ತಂತ್ರರಾಗಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ್ ವರ್ಗಾವಣೆಯಾಗಿ ವರ್ಷವೇ ಕಳೆದಿದೆ. ಈವರೆಗೂ ಮತ್ತೊಬ್ಬ ತಂತ್ರರನ್ನು ನೇಮಕ ಮಾಡಿಲ್ಲ. ಯಂತ್ರ ಕಾರ್ಯ ನಿರ್ವಹಿಸುತ್ತಿದ್ದಾಗಲೂ ತಂತ್ರರಿಲ್ಲ. ಇದೀಗ, ಯಂತ್ರ ಕೆಟ್ಟಿದೆ ಎಂದರೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳ ಕಾಳಜಿ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳು ಇರುವುದು ಬಡವರ ಸೇವೆಗೋ ಅಥವಾ ಖಾಸಗಿ ಲ್ಯಾಬ್ಗಳಿಗೆ ಲಾಭ ಮಾಡಿಕೊಡಲೋ? ವರ್ಗಾವಣೆಯಾಗಿ ವರ್ಷ ಕಳೆದರೂ ಮತ್ತೊಬ್ಬ ತಂತ್ರರನ್ನು ನೇಮಿಸದೆ ಇರಲು ಕಾರಣವೇನು? ವಾರಗಳಿಂದ ಯಂತ್ರ ಕೆಟ್ಟಿದ್ದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಸ್ಥಳಿಯ ಆಡಳಿತ ವೈದ್ಯಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ತಾಲೂಕಿನ ಬಡವರ ರಕ್ತ ಹೀರುತ್ತಿರುವ ಖಾಸಗಿ ಆಸ್ಪತ್ರೆಗಳ ದಂಧೆಗೆ ಬ್ರೇಕ್ ಬೀಳಬೇಕಾದರೆ ಸರ್ಕಾರಿ ಆಸ್ಪತ್ರೆಯ ಎಕ್ಸ್&ರೇ ಯಂತ್ರವನ್ನು ಸಮರೋಪಾದಿಯಲ್ಲಿ ದುರಸ್ತಿ ಮಾಡಿಸಬೇಕು. ಜತೆಗೆ ತಕ್ಷಣವೇ ಖಾಲಿ ಇರುವ ತಂತ್ರರ ಹುದ್ದೆಗೆ ಕಾಯಂ ಸಿಬ್ಬಂದಿ ನೇಮಕ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರು ಹಾಗೂ ವಿವಿಧ ಸಂಟನೆಗಳ ನೇತೃತ್ವದಲ್ಲಿ ಆಸ್ಪತ್ರೆಯ ಮುಂಭಾಗ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
"
ಹಳೆಯ ಎಕ್ಸ್&ರೇ ಯಂತ್ರ ಆಗಿರುವುದರಿಂದ ಎಕ್ಸ್&ರೇ ಇನ್ ವಾಟರ್ ಚಿಪ್ಪು ಸುಟ್ಟುಹೋಗಿದೆ. ಕಂಪನಿಯವರಿಗೆ ಬಿಲ್ ಪಾವತಿಸಲಾಗಿದೆ. ಶ್ರೀವೇ ಯಂತ್ರ ಸರಿಪಡಿಸಲಾಗುವುದು. ಕಂಪ್ಯೂಟರ್ ಡಿಜಿಟಲ್ ಎಕ್ಸ್&ರೇ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ.
— > ಡಾ.ಹರ್ಷವರ್ಧನ್ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿ.