ಮಾಗಡಿ ಪಟ್ಟಣದ ಸರಸ್ವತಿ ವಿದ್ಯಾಮಂದಿರ ಶಾಲೆಯ ಕಿಶನ್.ವಿ.ಎನ್ ಹಾಗೂ ಜೀವನ್ ಗೌಡ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಕರ್ನಾಟಕ ಕುಸ್ತಿ ಸಂದ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಿವಾಸ್, ತಾಂತ್ರಿಕ ತರಬೇತಿ ಅಧ್ಯಕ್ಷ ವಿನೋದ್, ಸಿಇಒ ನಾಗೇಶ್.ಎಸ್ ಇದ್ದರು.
ಮಾಗಡಿ: ಪಟ್ಟಣದ ಸರಸ್ವತಿ ವಿದ್ಯಾಮಂದಿರ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಕಿಶನ್.ವಿ.ಎನ್. ಹಾಗೂ ಜೀವನ್ ಗೌಡ 2025ರ ಮಿನಿ ಒಲಿಂಪಿಕ್ಸ್ನ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಒಲಿಂಪಿಕ್ ಸಂಸ್ಥೆ ಹಾಗೂ ಕರ್ನಾಟಕ ಕುಸ್ತಿ ಸಂದ ಸಯುಂಕ್ತಾಶ್ರಯದಲ್ಲಿ ನ.2ರಿಂದ 9ರವರೆಗೆ 15 ವರ್ಷದೊಳಗಿನ ವಿದ್ಯಾರ್ಥಿಗಳ 2025ರ 4ನೇ ಮಿನಿ ಒಲಿಂಪಿಕ್ಸ್ ಆಯೋಜಿಸಲಾಗಿದ್ದು, ಕುಸ್ತಿಯಲ್ಲಿ ಗ್ರೀಕೋ ರೋಮನ್ ಶೈಲಿಯ 85ಕೆಜಿ ವಿಭಾಗದಿಂದ ಕಿಶನ್.ವಿ.ಎನ್ ಹಾಗೂ 57ಕೆಜಿ ವಿಭಾಗದಿಂದ ಜೀವನ್ ಗೌಡ ಭಾಗವಹಿಸಿ, ಕಂಚಿನ ಪದಕ ಗಳಿಸಿದ್ದಾರೆ ಎಂದು ಜಿಲ್ಲಾ ಕುಸ್ತಿ ಸಂದ ಅಧ್ಯ ನಾಗೇಶ್.ಎಸ್ ತಿಳಿಸಿದ್ದಾರೆ. ಭಾರತೀಯ ಕುಸ್ತಿ ಸಂದ ಜಂಟಿ ಕಾರ್ಯದರ್ಶಿಗಳೂ ಆದ ರಾಜ್ಯ ಕುಸ್ತಿ ಸಂದ ಅಧ್ಯ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಮಹಾ ಕಾರ್ಯದರ್ಶಿ ಅನಂತರಾಜು ಇದ್ದಾರೆ.