ಲೋಕಾಯುಕ್ತ ಎಸ್ಪಿ ಸ್ನೇಹ ಪಿ.ವಿ ಅವರು ಕಾರ್ಮಿಕ ಅಧಿಕಾರಿ ಕಚೇರಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
- ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಲೋಕಾಯುಕ್ತ ಎಸ್ಪಿ ದಿಢೀರ್ ಬೇಟಿ
- ಕಡತಗಳ ಪರಿಶೀಲನೆ ಸರಿಯಾಗಿ ದೊರೆಯದ ಮಾಹಿತಿ
- ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿಲ್ಲ
ರಾಮನಗರ: ಜಿಲ್ಲೆಯ ಲೋಕಾಯುಕ್ತ ಎಸ್ ಪಿ ಸ್ನೇಹ ಪಿ.ವಿ ಅವರು ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಬೇಟಿ ವೇಳೆ ಕಾರ್ಮಿಕ ಕಚೇರಿಗೆ ಸಂಬಂಧ ಪಟ್ಟ ಕರ್ತವ್ಯ ಹಂಚಿಕೆ ಕಡತ, ಹಾಜರಾತಿ ಪುಸ್ತಕ, ಚಲನ ವಹಿ, ನಗದು ಘೋಫಿಣ ವಹಿ, ವಿವಿಧ ಇಲಾಖೆ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ /ಕಾರ್ಮಿಕರ ಮಾಹಿತಿ, ಮಾಹಿತಿ ಹಕ್ಕಿಗೆ ಸಂಬಂದಿಸಿದ ಮಾಹಿತಿ, ಗ್ಯಾಸ್ ಏಜನ್ಸಿ ಮೇಲೆ ದಾಖಲಿಸಿರುವ ಪ್ರಕರಣ ಬಗ್ಗೆ, ಕಟ್ಟಡ ಕಾರ್ಮಿಕರ ವಿವಾಹ ನೋಂದಣಿಗೆ ಸಹಾಯಧನ ಬಗ್ಗೆ, ಪರಿಶೀಲನೆ ನಡೆಸಿದರು.
ದೊರಕದ ಸಂಪರ್ಕ
ಇದೇ ವೇಳೆ ಇಲಾಕೆವತಿಯಿಂದ ಆರಂಭಿಸಲಾಗಿರುವ ಬಾಲ ಕಾರ್ಮಿಕರ ಹೆಲ್ಪ್ ಲೈನ್ ಗೆ 1098, ಕಾರ್ಮಿಕರ ಹೆಲ್ಪ್ ಲೈನ್ 155214 ಸಂಖ್ಯೆಗೆ ಲೋಕಾಯುಕ್ತ ಎಸ್ ಪಿ ಅವರೇ ಕರೆಮಾಡಿದರೆ ಕರೆಯು ಕನೆಕ್ಟ್ ಆಗದೆ ಇರುವುದು ಕಂಡು ಬಂತು.
ಭಾರತ ರತ್ನ ಡಾ ಬಿ. ಆರ್. ಅಂಬೇಡ್ಕರ್ ಸಂಚಾರಿ ಕಾರ್ಮಿಕ ಸೇವಾ ಕೇಂದ್ರದ ವಾಹನ ಬಗ್ಗೆ ಹಾಗೂ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಕರ್ತವ್ಯದ ಬಗ್ಗೆ ವಿಚಾರಿಸಿದರು. ಈ ವೇಳೆ ಸಂಬಂಧ ಪಟ್ಟ ಅಧಿಕಾರಿಗಳಾದ ಶ್ರೀಕಾಂತ್ ನಾಯ್ಕ, ಕಿರಣ್ ಕುಮಾರ್ (ಚಾಲಕ ) ರವರುಗಳು ಕರ್ಕರ್ತವ್ಯದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟರು.
ಲೋಕಾಯುಕ್ತ ಎಸ್.ಪಿ ರವರು ಕಾರ್ಮಿಕ ಅಧಿಕಾರಿಗಳಿಗೆ ಸರ್ಕಾರವು ಕಾರ್ಮಿಕರಿಗೆ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮ ಗಳು ನಿಗದಿತ ಸಮಯಕ್ಕೆ ಕಾರ್ಮಿಕರಿಗೆ ತಲುಪುವಂತಹ ಕಾರ್ಯವಾಗ ಬೇಕು ಎಂದರು.
ಈ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಬಿ. ಎನ್, ಮತ್ತು ಸಿಬ್ಬಂದಿಗಳು, ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ, ಕಾರ್ಮಿಕ ನೀರಿಕ್ಷಕ ಪ್ರದಿಪ್ ಎಂ ಮುಂತಾದವರು ಇದ್ದರು.