ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದ ಪಿಡಿಒ ತಿಮ್ಮಯ್ಯ ಅವರಿಗೆ ಸೇರಿದ ಫಾರಂ ಹೌಸ್​.  
ಬೆಂಗಳೂರು ದಕ್ಷಿಣ

ಕುಂಬಳಗೂಡು ಪಿಡಿಒಗೆ ಲೋಕಾ ಶಾಕ್​

ಮಾಗಡಿ: ಅಕ್ರಮ ಹಣ ಸಂಪಾದನೆ ಮತ್ತು ಆಸ್ತಿ ಗಳಿಕೆ ಆರೋಪದ ಮೇರೆಗೆ ಕುಂಬಳಗೂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೆ.ತಿಮ್ಮಯ್ಯ ಅವರ ಮಾಗಡಿ ತಾಲೂಕಿನ ಬೆಳಗವಾಡಿಯ ಾರಂ ಹೌಸ್​, ಸಂಬಂಧಿಕರ ಮನೆಯ ಮೇಲೆ ಜಿಲ್ಲಾ ಲೋಕಾಯುಕ್ತ ಪೊಲೀಸ್​ ಅಧೀಕ್ಷಕಿ ಸ್ನೇಹಾ ನೇತೃತ್ವದ ತಂಡ ದಾಳಿ ನಡೆಸಿತು.
ಬೆಳಗವಾಡಿ ಗ್ರಾಮದ ತಿಮ್ಮಯ್ಯ ಅವರ ಫಾರಂ ಹೌಸ್​ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳು ಸೇರಿ ಹಲವು ಕಡೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು 7 ತಂಡಗಳಲ್ಲಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಒಟ್ಟು ಮೂರಕ್ಕೂ ಹೆಚ್ಚು ಪ್ರಮುಖ ಸ್ಥಳಗಳು ಹಾಗೂ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಅಂಧ್ರಹಳ್ಳಿಯ ಡಿ&ಗ್ರೂಪ್​ ಲೇಔಟ್​ನಲ್ಲಿರುವ ನಿವಾಸದ ಮೇಲೂ ದಾಳಿ ಮಾಡಲಾಗಿದ್ದು, ಪಿಡಿಒ ತಿಮ್ಮಯ್ಯ ಅವರ ಅಣ್ಣ ಹಾಗೂ ಅಕ್ಕನ ಮಗನ ಮನೆಗಳಲ್ಲಿ ಅಧಿಕಾರಿಗಳು ಜಾಲಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಬಿ.ಕೆ.ತಿಮ್ಮಯ್ಯ ಅವರ ಅಕ್ರಮ ಆಸ್ತಿಪಾಸ್ತಿ, ನಗದು, ಚಿನ್ನಾಭರಣ ಹಾಗೂ ಬ್ಯಾಂಕ್​ ಖಾತೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆ ನಂತರ ಹೊರಬರಬೇಕಿದೆ.