ಚನ್ನಪಟ್ಟಣದ ಬೊಂಬೆಗಳು ಕನ್ನಡ ಅಸ್ಮಿತೆ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು.
- ಡಾ.ಪಿ.ವಿ.ನಿರಂಜನಾರಾಧ್ಯ ಕರೆ
- ಮಾರುಕಟ್ಟೆ ವಿಸ್ತಾರಣೆಯೂ ಅಗತ್ಯ
ಯಾವುದೇ ಉದ್ಯಮ ಆಧುನಿಕತೆಗೆ ತೆರೆದುಕೊಳ್ಳದಿದ್ದರೆ, ಉಳಿಯುವುದು ಕಷ್ಟ. ಬೊಂಬೆ ಉದ್ಯಮ ಸಹ ಇದರಿಂದ ಹೊರತಾಗಿಲ್ಲ. ಉತ್ಪಾದನೆ ಜತೆಗೆ ಮಾರುಕಟ್ಟೆ ವಿಸ್ತಾರಕ್ಕೂ ಹೆಚ್ಚಿನ ನೆರವು ನೀಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಪಿ.ವಿ.ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.
ಜಾನಪದ ಲೋಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿದ್ದ "ಚನ್ನಪಟ್ಟಣದ ಬೊಂಬೆ: ಕರ್ನಾಟಕದ ಅಸ್ಮಿತೆ ' ಒಂದು ದಿನದ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಾತಿನಿಂದ ಸೌಧಕಟ್ಟಲು ಸಾಧ್ಯವಿಲ್ಲ. ನಮ್ಮ ಕಲೆ ಮತ್ತು ಸಂಸತಿಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಉತ್ಪಾದನೆಗೆ ಒತ್ತು ನೀಡುವ ಜತೆಗೆ, ಮಾರುಕಟ್ಟೆ ಸೌಲಭ್ಯದ ವಿಸ್ತಾರದ ಬಗ್ಗೆಯೂ ಚಿಂತನೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಜಾನಪದ ಲೋಕದ ಮತ್ತು ಬೊಂಬೆ ಉದ್ಯಮದ ತಜ್ಞರು, ಕುಲಶ ಕರ್ಮಿಗಳು ದೂರದೃಷ್ಟಿಯುಳ್ಳ ಬಲವಾದ ಪ್ರಸ್ತಾವನೆಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿದರೆ, ಮುಖ್ಯಮಂತ್ರಿ ಅವರ ಗಮನಕ್ಕೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಿಬಿರದಲ್ಲಿ ಉಪನ್ಯಾಸ ನೀಡಿದ ಡಾ.ಶಿವರಾಜ್ ಬ್ಯಾಡರಹಳ್ಳಿ, ಶತಮಾನಗಳ ಹಿಂದೆ ಟಿಪ್ಪು ಸುಲ್ತಾನನಿಂದ ಪರಿಚಯಸ್ಪಟ್ಟ ಚನ್ನಪಟ್ಟಣದ ಬೊಂಬೆಗಳು, ಕಾಲಾನಂತರ ಮೈಸೂರು ರಾಜರ ನೆರವಿನೊಂದಿಗೆ ಸಾಕಷ್ಟು ಬೆಳೆದು ಬಂದು ಸಾವಿರಾರು ಕುಟುಂಬಗಳ ಬದುಕುಕಟ್ಟಿಕೊಳ್ಳುವಂತೆ ಮಾಡಿದೆ. ಮಕ್ಕಳ ಸಣ್ಣ ಆಟಿಕೆಗಳಿಂದ ಆರಂಭಗೊಂಡು ದೊಡ್ಡ ಕಲಾಕೃತಿಗಳನ್ನು ಸಿದ್ಧಪಡಿಸುವ ನೈಪುಣ್ಯತೆಯನ್ನು ಕುಶಲಕರ್ಮಿಗಳು ಪಡೆದುಕೊಂಡಿದ್ದಾರೆ.
ಆದರೆ, ಇಂದಿನ ಪೀಳಿಗೆ ಈ ಉದ್ಯಮದಿಂದ ವಿಮುಖರಾಗುತ್ತ ಸಾಗಿದೆ. ಸ್ವಾಭಿಮಾನದ ಬದಕುಕಟ್ಟಿಕೊಳ್ಳಲು ಈ ಉದ್ಯಮವನ್ನು ಯುವ ಸಮುದಾಯ ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರ ಇವರ ನೆರವಿಗೆ ಧಾವಿಸಬೇಕು. ಉದ್ಯಮವನ್ನು ತೆರಿಗೆಮುಕ್ತವನ್ನಾಗಿ ಮಾಡಬೇಕು ಮತ್ತು ಮಧ್ಯವರ್ತಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ತಮ್ಮ ಒಂದು ಸಂಟನೆ ಮಾಡಿಕೊಂಡು ವ್ಯಾಪಾರವನ್ನು ವಿಸ್ತಾರ ಮಾಡಿಕೊಳ್ಳಲು ನೆರವು ನೀಡಬೇಕು. ಜತೆಗೆ ಸಿಎಸ್ಆರ್ ನಿಧಿ ಬಳಕೆ ಮಾಡಿಕೊಂಡು ಚನ್ನಪಟ್ಟಣ ಬೊಂಬೆ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೊಂಬೆ ತಯಾರಿಕೆಯಲ್ಲಿ ಪಟ್ರಿ ಪಾರಂಪರಿಕೆ ಜ್ಞಾನದ ಕುರಿತು ಹಿರಿಯ ಕುಶಲ ಕರ್ಮಿ ಸಿದ್ದರಾಮಯ್ಯ, ಮಹಿಳೆಯರಿಗೆ ಬೊಂಬೆ ತಗಳ ತರಬೇತಿ ಮತ್ತು ಉದ್ಯೋಗ ಅವಕಾಶಗಳ ಕುರಿತಂತೆ ಅರ್ಟಿಸನ್ ಪೆಡ್ ಪ್ರೊಡ್ಯೂಸರ್ ಕಂಪನಿಯ ಸಿಇಒ ಶಾಹೆದಾ ನೂರಿ, ಬೊಂಬೆಗಳ ನೂತನ ಕಲ್ಪನೆ, ವಿನ್ಯಾಸ, ಹೊಸ ಸಾಧ್ಯತೆಗಳ ಕುರಿತಂತೆ ಕುಶಲ ಕರ್ಮಿ ಬಿ.ವೆಂಕಟೇಶ್, ಬದಲಾಗುತ್ತಿರುವ ಕಾಲಟ್ಟದಲ್ಲಿ ಚನ್ನಪಟ್ಟಣದ ಬೊಂಬೆಗಳು ಕುರಿತಂತೆ ಶಿಲ್ಪ ಟ್ರಸ್ಟ್ ಎಂ.ಭೂಪತಿ, ಜಾಗತಿಕಮಟ್ಟದಲ್ಲಿ ಬೊಂಬೆಗಳ ಮಾರುಕಟ್ಟೆ ಕುರಿತಂತೆ ಡಿ.ಶ್ರೀನಿವಾಸ್ ಶಿಬಿರದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಇದ್ದರು.