ಕನಕಪುರ ಸುಂಡಘಟ್ಟ ಗ್ರಾಮದ ತೋಟದ ಮನೆ ನಾಡಬಾಂಬ್ ಸ್ಪೋಟದಲ್ಲಿ ಹಾಯಗೊಂಡಿರುವ ಮೋಹನ್‌ನನ್ನು ಡಿ.ವೈ.ಎಸ್.ಪಿ ಗಿರಿ ಆಸ್ಪತ್ರೆಯಲ್ಲಿ ವಿಚಾರಣೆ ಮಾಡುತ್ತಿರುವುದು.
- ಕನಕಪುರದ ಸುಂಡಘಟ್ಟದಲ್ಲಿ ಘಟನೆ
- ಬನ್ನೇರುಘಟ್ಟ ರಾಷ್ಟ್ರಿಯ ಉದ್ಯಾನ ವ್ಯಾಪ್ತಿಯ ಅರಣ್ಯದಂಚಲ್ಲಿ ಘಟನೆ
ಕನಕಪುರ : ನಾಡಬಾಂಬ್ ಸ್ಪೋಟಗೊಂಡು ವಕೀಲರೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ಕೋಡಿಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಸುಂಡಘಟ್ಟ ಗ್ರಾಮದಲ್ಲಿ ನಡೆದಿದೆ.
ಉಚ್ಚನ್ಯಾಯಾಲಯದ ನ್ಯಾಯವಾದಿ ಎನ್.ಸಿ.ಮೋಹನ್(53) ಗಾಯಗೊಂಡವರು. ತಾಲೂಕಿನ ಕಸಬಾ ಹೋಬಳಿ ಸುಂಡಘಟ್ಟ ಗ್ರಾಮದ ರಂಗನಾಥಸ್ವಾಮಿ ಬೆಟ್ಟದ ದಾರಿಯಲ್ಲಿ ಬೆಂಗಳೂರಿನ ವಕೀಲ ಎನ್.ಸಿ.ಮೋಹನ್ ತಮ್ಮ ತೋಟದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಶುಕ್ರುವಾರ ಮುಂಜಾನೆ 6 ಗಂಟೆ ಸಮಯದಲ್ಲಿ ಫಾರ್ಮ್ ಹೌಸ್ ಗೇಟ್ ತೆಗೆಯುತ್ತಿದ್ದ ವೇಳೆ ನಾಡಬಾಂಬ್ ಸ್ಪೋಟಗೊಂಡು ಬೆನ್ನು, ಕತ್ತು ಸೇರಿದಂತೆ ಹಲವೆಡೆ ತೀವ್ರ ಗಾಯಗೊಂಡು ಅವರನ್ನು ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರು ಮಣಿಪಾಲ್ ಆಸಪ್ತೆçಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೋಹನ್‌ರವರ ಫಾರ್ಮ್ ಹೌಸ್ ಗೇಟ್ ಬಳಿ ದುಷ್ಕರ್ಮಿಗಳು ನಾಡಬಾಂಬ್ ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಡಿವೈ.ಎಸ್.ಪಿ ಗಿರಿ, ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್‌ಗೌಡ, ಕೋಡಿಹಳ್ಳಿ ಸಬ್‌ಇನ್ಸ್ಪೆಕ್ಟರ್ ಪ್ರದೀಪ್ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಬಾಂಬ್ ನಿಶ್ಕಿçಯ ದಳ ಪರಿಶೀಲಿಸಿ ಎಫ್.ಎಸ್.ಎಲ್ ಪರೀಕ್ಷೆಗೆ ಒಳಪಡಿಸಿದ್ದಾರೆ.