ಮಾಗಡಿ ತಾಲೂಕಿನ ಕರೇನಹಳ್ಳಿ ಕೃಷ್ಣಪ್ಪ ಗೆಣಸಿನ ಬೆಳೆಯನ್ನು ದಾಯಾದಿಗಳು ಕಿತ್ತುಹಾಕಿರುವುದು. 
ಬೆಂಗಳೂರು ದಕ್ಷಿಣ

ಜಮೀನು ವಿವಾದ ಗೆಣಸು ಬೆಳೆ ನಾಶ

ಮಾಗಡಿ: ತಾಲೂಕಿನ ಕರೇನಹಳ್ಳಿಯಲ್ಲಿ ಜಮೀನು ವಿವಾದ ಕಾರಣ ಗುರುವಾರ ಗೆಣಸಿನ ಬೆಳೆ ನಾಶಮಾಡಲಾಗಿದೆ.
ಗ್ರಾಮದ ಕೃಷ್ಣಪ್ಪ ಅವರ ಸರ್ವೇ ನಂ.127/2ರ 1.29 ಎಕರೆಯಲ್ಲಿನ ಗೆಣಸಿನ ಬೆಳೆಯನ್ನು ದಾಯಾದಿಗಳಾದ ದಿ.ತಿಮ್ಮಕ್ಕ ಕಾಳಯ್ಯ ಅವರ ಕುಟುಂಬಸ್ಥರು ಟ್ಯಾಕ್ಟರ್​ನಿಂದ ಕಿತ್ತುಹಾಕಿಸಿದ್ದಾರೆ ಎನ್ನಲಾಗಿದೆ.
58 ವರ್ಷಗಳ ಹಿಂದೆಯೇ ಜಮೀನು ನಮ್ಮ ಹೆಸರಿಗೆ ನೋಂದಣಿಯಾಗಿದೆ, ಅಂದಿನಿಂದ ಉಳಿಮೆ ಮಾಡುತ್ತಿದ್ದೇವೆ. ಈ ನಡುವೆ ಜಮೀನು ವಿಚಾರವಾಗಿ ಹೈಕೋರ್ಟ್​ನಲ್ಲಿದ್ದ ತಡೆಯಾೆ ತೆರವಾಗಿದ್ದರಿಂದ ಪಹಣಿ ತಿಮ್ಮಕ್ಕ ಕಾಳಯ್ಯ ಅವರ ಹೆಸರಿಗೆ ಬಂದಿದೆ. ಇವರು ಜೀವಂತವಾಗಿಲ್ಲ. ಆದರೂ ದಾಯಾದಿಗಳು ಏಕಾಏಕಿ ಟ್ರಾ$್ಯಕ್ಟರ್​ ತಂದು ಬೆಳೆಯನ್ನು ಕಿತ್ತುಹಾಕಿದ್ದಾರೆ ಎಂದು ಕೃಷ್ಣಪ್ಪ ಅವರು ದೂರಿನಲ್ಲಿ ಆರೋಪಿಸಿದ್ದಾರೆ.