ಮಾಗಡಿಯ ಕಾಂಗ್ರೆಸ್​ ಕಚೇರಿಯಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಉತ್ಸವದ ಆಹ್ವಾನ ಪತ್ರಿಕೆಯನ್ನು ಶಾಸಕ ಎಚ್​.ಸಿ.ಬಾಲಕೃಷ್ಣ ಬಿಡುಗಡೆ ಮಾಡಿದರು.ಬಮುಲ್​ ನಿರ್ದೇಶಕ ಎಚ್​.ಎನ್​.ಅಶೋಕ್​, ಜೆ.ಪಿ.ಚಂದ್ರೇಗೌಡ, ಬಿಎಂಆರ್​ಡಿಎ ಮಾಜಿ ಅಧ್ಯ ಕೆ.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಬಿ.ಎಸ್​.ಕುಮಾರ್​ ಇತರರು ಇದ್ದರು.  
ಬೆಂಗಳೂರು ದಕ್ಷಿಣ

28ರಿಂದ ಮಾಗಡಿಯಲ್ಲಿ ಕೆಂಪೇಗೌಡರ ಉತ್ಸವ

ಪ್ರತಿಭಾ ಪ್ರದರ್ಶನಕ್ಕೆ ಆಧಾರ್​ ನೋಂದಣಿ ಕಡ್ಡಾಯ

ಮಾಗಡಿ: ಪಟ್ಟಣದ ಕೋಟೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಉತ್ಸವವನ್ನು ನ.22ರಿಂದ ಡಿ.28ರವರೆಗೆ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕಾಂಗ್ರೆಸ್​ ಕಚೇರಿಯಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕರು, ಕನಕಪುರದ ಕನಕೋತ್ಸವದಂತೆ ಮಾಗಡಿಯಲ್ಲಿ ಕೆಂಪೇಗೌಡರ ಉತ್ಸವ ಆಯೋಜಿಸಲಾಗಿದ್ದು, ತಾಲೂಕಿನ ಪ್ರತಿಭಾನ್ವಿತರಿಗೆ ಮಾಗಡಿ ಕೆಂಪೇಗೌಡರ ಉತ್ಸವ ವೇದಿಕೆಯಾಗಲಿದೆ. ನ.22ರಿಂದ ಡಿ.28ರವರೆಗೆ ವಿವಿಧ ಕ್ರೀಡಾಕೂಟ, ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನೋಂದಣಿ ಕಡ್ಡಾಯ

ಉತ್ಸವದಲ್ಲಿ ಪ್ರದರ್ಶನ ನೀಡುವ ಪ್ರತಿಯೊಬ್ಬರೂ ಕ್ರೀಡೆ ಮತ್ತು ಸಾಂಸತಿಕ ಕಾರ್ಯಕ್ರಮದ ಮಾಹಿತಿ, ಆಧಾರ್​ ಸಂಖ್ಯೆ ಹಾಗೂ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದ ಬಾಲಕೃಷ್ಣ, ಉತ್ಸವಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಬಮುಲ್​ ಅಧ್ಯ ಡಿ.ಕೆ.ಸುರೇಶ್​ ಮಾರ್ಗದರ್ಶನ ಇರಲಿದ್ದು, ಎಲ್ಲರೂ ಪಾತೀತವಾಗಿ ಭಾಗವಹಿಸಬಹುದು. ಸರ್ಕಾರಿ ಅಧಿಕಾರಿಗಳನ್ನು ಒಮ್ಮತದಿಂದ ಸೇರಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ವಿವಿಧ ಸ್ಪರ್ಧೆ

ಕ್ರಿಕೆಟ್​, ವಾಲಿಬಾಲ್​, ಥ್ರೋಬಾಲ್​, ಶೆಟಲ್​ ಬ್ಯಾಡ್ಮಿಂಟನ್​, ಪಂದ್ಯಾವಳಿಯ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ & 15 ಸಾವಿರ ರೂ., ದ್ವೀತಿಯ 10 ಸಾವಿರ ರೂ., ತೃತೀಯ 5 ಸಾವಿರ ರೂ. ನೀಡಲಾಗುತ್ತದೆ.

ವಾಯ್ಸ್​ ಆಫ್​ ಮಾಗಡಿ

(16 ವರ್ಷದ ಒಳಗಿನವರಿಗೆ, ಮೇಲ್ಪಟ್ಟವರಿಗೆ ಪ್ರತಿ ಹೋಬಳಿಮಟ್ಟದಲ್ಲಿ ನಡೆಯುತ್ತದೆ) ರಂಗ ಗೀತೆ, ಸೋಲೋ ಸಿಂಗಿಂಗ್​, (ಜಾನಪದ, ಚಲನಚಿತ್ರ, ಭಕ್ತೀಗಿತೆ)ಸಮೂಹ ಗಾಯನ, ಸಮೂಹ ನೃತ್ಯ (ಜಾನಪದ, ಚಲನಚಿತ್ರ, ಭಕ್ತೀಗಿತೆ) ಸ್ಪರ್ಧೆಗಳಿವೆ.


ಶ್ರೀನಿವಾಸ ಕಲ್ಯಾಣ

ಡಿ.27ರಂದು ದಂಪತಿಗಳ ಫ್ಯಾಷನ ಶೋ (ಸಾಂಪ್ರದಾಯಿಕ ಉಡುಗೆ) ಆಯೋಜಿಸಲಾಗಿದ್ದು, ರಂಗೋಲಿ ಸ್ಪರ್ಧೆ, ದೇಹದಾರ್ಢ್ಯ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಅಂದೇ ದೇವರ ಉತ್ಸವ, ವಾದ್ಯ ಗೋಷ್ಠಿ, ದೇವರ ಭಜನೆ, ತಿರುಪತಿ ತಿರುಮಲ ಟ್ರಸ್ಟ್​ನಿಂದ ದೇವರ ದರ್ಶನ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದ್ದು, ಅಂದು ತಿರುಪತಿ ಲಡ್ಡುಪ್ರಸಾದ ವಿತರಿಸಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
ಬಮುಲ್​ ನಿರ್ದೇಶಕ ಎಚ್​.ಎನ್​.ಅಶೋಕ್​, ಜೆ.ಪಿ.ಚಂದ್ರೇಗೌಡ, ಬಿಎಂಆರ್​ಡಿಎ ಮಾಜಿ ಅಧ್ಯ ಕೆ.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಬಿ.ಎಸ್​.ಕುಮಾರ್​, ಪುರಸಭೆ ಸದಸ್ಯರಾದ ಶಿವಕುಮಾರ್​, ವಿಜಯ ರೂಪೇಶ್​ ಕುಮಾರ್​, ಅಶ್ವತ್ಥ್​,  ಸ್ಥಾಯಿ ಸಮಿತಿ ಮಾಜಿ ಅಧ್ಯ ಚಿಲಿಪಿಲಿ ಗಂಗರಾಜು, ಬಿಎಂಆರ್​ಡಿಎ ನಿರ್ದೆಶಕ ತೇಜೇಶ್​ ಕುಮಾರ್​, ಟಿಎಪಿಸಿಎಂಎಸ್​ ನಿರ್ದೇಶಕ ಎಂ.ಆರ್​. ಮಂಜುನಾಥ್​,  ಡೂಂ ಲೈಟ್​ ಮೂರ್ತಿ, ಕೆಂಪೇಗೌಡ, ಸುನೀಲ್​, ಶಶಾಂಕ್​ ಇದ್ದರು.

ಮ್ಯಾರಥಾನ್​

ಡಿಸೆಂಬರ್​ 25ರಂದು ಪುರುಷರಿಗಾಗಿ ನಮ್ಮ ಚಿತ್ತ ಅಭಿವೃದ್ಧಿ ಪಥದತ್ತ ಶೀರ್ಷಿಕೆಯಡಿ ಮ್ಯಾರಥಾನ್​ ಓಟ ಹಮ್ಮಿಕೊಂಡಿದ್ದು, ಹೊಸಪೇಟೆ ವೃತ್ತದಿಂದ ನಾಯಕನಪಾಳ್ಯ ಗೇಟ್​ವರೆಗೆ ಸಾಗಲಿದೆ. ಇನ್ನು ಡಿ.26 ಹಸಿರೇ ಉಸಿರು, ನಮ್ಮ ಪ್ರಕೃತಿಗಾಗಿ ನಮ್ಮ ಓಟ ಶೀರ್ಷಿಕೆಯಡಿ ಮಹಿಳೆಯರಿಗೆ ಮ್ಯಾರಥಾನ್​ ಓಟ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 6ಕ್ಕೆ ಚಾಲನೆಗೊಳ್ಳುವ ಓಟ ಮಾಗಡಿ ಸೋಮೇಶ್ವರ ದೇವಾಲಯದಿಂದ ಕಲ್ಯಾ ಗೇಟ್​, ಡೂಮ್​ ಲೈಟ್​ ವೃತ್ತ, ಕೆಂಪೇಗೌಡ ವೃತ್ತದ ಮಾರ್ಗವಾಗಿ, ಎನ್​ಇಎಸ್​ ವೃತ್ತದ ಮೂಲಕ ತಿರುಮಲೆ ರಂಗನಾಥಸ್ವಾಮಿ ದೇವಾಲಯದ ಸನ್ನಿಧಿವರೆಗೆ ಸಾಗಲಿದೆ.

ಸಾಧಕರಿಗೆ ಸನ್ಮಾನ

ಡಿ.28ರಂದು ಪ್ರಗತಿಪರ ರೈತರು, ವಿವಿಧ ೇತ್ರಗಳ ಸಾಧಕರಿಗೆ ಸನ್ಮಾನ, ಕ್ರೀಡೆ ಮತ್ತು ಸಾಂಸತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಅಂದು ರಾತ್ರಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ಹೇಮಂತ್​, ಅನುರಾಧಾ ಭಟ್​ ಗಾಯನ ಇರಲಿದ್ದು, ಅನುಶ್ರೀ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.