ಪ್ರಮುಖ ಮುಖ್ಯಾಂಶಗಳು
ಚನ್ನಪಟ್ಟಣ
ವಿಷಮುಕ್ತ ಭೂಮಿಯಿಂದ ವಿಷಮುಕ್ತ ಆಹಾರ ಉತ್ಪನ್ನ ಬೆಳೆದು ಜನರಿಗೆ ನೀಡಬೇಕುಸರ್... ನಮ್ಮ ಸ್ವಾರ್ಥಕ್ಕೆ ಭೂತಾಯಿಗೆ ವಿಷ ಉಣಿಸುವುದು ಧರ್ಮವಲ್ಲ... ರೈತರಿಗೆ ಹೆಣ್ಣು ಕೊಡುವುದಿಲ್ಲಎಂಬುದು ಇತ್ತೀಚಿನ ಸಾಮಾನ್ಯ ಆರೋಪವಾಗಿದೆ. ಆದರೆ, ನನ್ನ ಕೃಷಿ ಚಟುವಟಿಕೆ ನೋಡಿಯೇ ನನಗೆ ಹೆಣ್ಣುನೀಡಿರುವುದು ಸರ್... ಎಂದು ಕೃಷಿ ಕಾಯಕದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಿಡಗೋಡಿ ಗ್ರಾಮದ ಮಾದರಿಯುವರೈತ ಕೆಂಪರಾಜು ಎನ್.ಸಿ. ಇತರರಿಗೆ ಮಾದರಿಯಾಗಿದ್ದಾರೆ.
ಕೃಷಿ ಹಾಗೂ ಕೃಷಿಕ ಎಂಬ ಎಡರಕ್ಷರ ಕಂಡರೇ ಪ್ರಸುತ್ತ ಮೂಗುಮುರಿಯುವವರೇಹೆಚ್ಚು. ಆದರೂ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡಿರುವ ಹಲವಾರು ಸಾಧಕರು ನಮ್ಮ ನಡುವೆ ಇದ್ದಾರೆ. ಅಂಥವರಸಾಲಿನಲ್ಲಿ ತಾಲೂಕಿನ ನಿಡಗೋಡಿ ಗ್ರಾಮದ ಕೆಂಪರಾಜು ಸಹ ಒಬ್ಬರು. ಸಮಗ್ರ ಹಾಗೂ ವೈಜ್ಞಾನಿಕ ಕೃಷಿಯನ್ನುಅಳವಡಿಸಿಕೊಂಡು ಕೃಷಿಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಸಾಧನೆಯ ಹಾದಿಯಲ್ಲಿ ತಂದೆಚಿಕ್ಕಣ್ಣಗೌಡ, ತಾಯಿ ಭಾಗ್ಯಾ, ಸಹೋದರ ಲೋಕೇಶ್ ಸಾಥ್ ನೀಡುತ್ತಿದ್ದಾರೆ.
ಹತ್ತನೇ ತರಗತಿವರೆಗೂ ವ್ಯಾಸಂಗ ಮಾಡಿರುವ ಕೆಂಪರಾಜು, ಎಲ್ಲರಂತೆ ಮುಂದಿನಬದುಕು ಕಟ್ಟಿಕೊಳ್ಳಲು ಬೆಂಗಳೂರು ಮಹಾನಗರ ಸೇರಿಕೊಳ್ಳುತ್ತಾರೆ. ಕ್ಯಾಬ್ ಚಾಲನೆ, ುಡ್ ಡೆಲಿವರಿ ಸೇರಿದಂತೆವಿವಿಧ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಅವರು, ಕಷ್ಟದ ಸಂದರ್ಭದಲ್ಲಿ ಅನಿವಾರ್ಯವಾಗಿ ಊರು ಸೇರುತ್ತಾರೆ.ಊರಿಗೆ ಮರಳಿದವರಿಗೆ ಅಂಟಿಕೊಂಡಿದ್ದೇ ಈ ಮಣ್ಣಿನ ಸೆಳೆತ. ಪೂರ್ವಿಕರ ಕಾಲದಿಂದ ಕೆಂಪರಾಜು ಕುಟುಂಬವ್ಯವಸಾಯವನ್ನೇ ನೆಚ್ಚಿಕೊಂಡಿದ್ದು, ತಾನೂ ಸಹ ಭೂತಾಯಿಯಿಂದಲೇ ಬದುಕು ಕಟ್ಟಿಕೊಳ್ಳಬೇಕು ಎಂಬ ದೃಢನಿರ್ಧಾರ ಕೈಗೊಳ್ಳುತ್ತಾರೆ. ಅದರಂತೆಯೇ ಸಂಪೂರ್ಣವಾಗಿ ಸಾವಯವ ಕೃಷಿ ನಡೆಸಿ ಸೈ ಎನಿಸಿಕೊಂಡಿದ್ದಾರೆ.ಇವರಿಗೆ ಪತ್ನಿ ಸಹ ಬೆನ್ನೆಲುಬಾಗಿದ್ದಾರೆ.
ಕೆಂಪರಾಜು ಕುಟುಂಬಕ್ಕೆ ಮೂರೂವರೆ ಎಕರೆ ಸ್ವಂತ ಜಮೀನಿದ್ದು, ಮೂರು ಎಕರೆಭೂಮಿಯನ್ನು ಭೋಗ್ಯಕ್ಕೆ ಪಡೆದು ಇಡೀ ಕುಟುಂಬ ಭೂತಾಯಿಯ ಸೇವೆಯಲ್ಲಿ ತೊಡಗಿದೆ. ಇವರ ಜಮೀನಿನಲ್ಲಿ ಯಾವಬೆಳೆ ಇದ್ದಾವೆ ಎಂಬುದಕ್ಕಿಂತ ಯಾವ ಬೆಳೆಯಿಲ್ಲ ಎಂಬುದನ್ನು ಹುಡುಕಬೇಕಿದೆ. ಬಾಳೆ, ಅಡಿಕೆ, ತೆಂಗು,ಮಾವು, ಬಟರ್ ್ರೂಟ್, ಚಕ್ಕೆ, ಲವಂಗ, ಏಲಕ್ಕಿ, ಜಾಯಿಕಾಯಿ, ಸೇಬು, ಕಿತ್ತಳೆ, ಹಲಸು, ಅರಿಶಿಣ, ಕೋಕ್ಸೇರಿದಂತೆ ಇನ್ನು ಹಲವಾರು ಬೆಳೆಗಳಿವೆ. ತೋಟಗಾರಿಕೆ ಬೆಳೆಗಳ ಜತೆಗೆ ಮಸಾಲ ಪದಾರ್ಥಗಳು ಹಾಗೂ ವಾಣಿಜ್ಯಬೆಳೆಗಳ ಸಾಲು ಸಾಲಿವೆ. ಕೇವಲ ಕೃಷಿಯಷ್ಟೇ ಅಲ್ಲದೇ ರೇಷ್ಮೆ, ಜೇನುಕೃಷಿ, ನಾಟಿಕೋಳಿ, ಆಡು, ಕುರಿ,ಸೀಮೆ ಹಸುಗಳ ಸಾಕಾಣಿಕೆ ನಡೆಸುವ ಮೂಲಕ ಸಮಗ್ರ ಕೃಷಿ ಅರ್ಥವನ್ನು ಸಾಕಾರಗೊಳಿಸಿದ್ದಾರೆ. ಜಮೀನಿನ ಸುತ್ತಲ್ಲೂನುಗ್ಗೆ, ಅಗಸೆ, ಗೊಬ್ಬರಗಿಡಗಳನ್ನು ನೆಡುವ ಮೂಲಕ ಆದಾಯ ರೂಢಿಸಿಕೊಂಡಿದ್ದಾರೆ.
ಕೆಂಪರಾಜು ಕೃಷಿ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿಗೌರವಿಸುವ ಕೆಲಸ ಮಾಡಿವೆ. ಕೃಷಿ ವಿಶ್ವವಿದ್ಯಾನಿಲಯ ಇವರ ಸಾಧನೆಯನ್ನು ಗುರುತಿಸಿ ಕೃಷಿ ಮೇಳದಲ್ಲಿತಾಲೂಕುಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿದೆ. ಇದಲ್ಲದೇ ತಾಲೂಕು ಆಡಳಿತ ಸೇರಿ ವಿವಿಧ ಸಂಘ-ಸಂಸ್ಥೆಗಳಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಕೃಷಿ ಪ್ರೀತಿಯನ್ನು ಕಂಡು ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳುಸಹ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ.
ಓದಿರುವುದು ಕೇವಲ ಹತ್ತದಾರೂ, ಕೃಷಿ ಬಗ್ಗೆ ಅಪಾರ ಜ್ಞಾನ ದಕ್ಕಿಸಿಕೊಂಡಿರುವಕೆಂಪರಾಜು, ತಮ್ಮ ತೋಟಕ್ಕೆ ತಮ್ಮ ಮುತ್ತಾತ ಪೂಜಾರಿ ಕೆಂಪೇಗೌಡ ಪ್ರಕೃತಿ ತೋಟ ಎಂದು ಹೆಸರಿಟ್ಟಿದ್ದು,ಯುವ ಹಾಗೂ ಆಸಕ್ತ ರೈತರಿಗೆ ತರಬೇತಿ ಹಾಗೂ ಮಾಹಿತಿ ನೀಡುವ ಸಾಮಾಜಿಕ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.ಇವರ ಜಮೀನಿನಲ್ಲಿಯೇ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿಯಲ್ಲಿ ಪ್ರಕೃತಿ ಜೈವಿಕ ಸಂಪನ್ಮೂಲಕೇಂದ್ರ ತೆರೆದಿದ್ದು, ವಿಷಮುಕ್ತ ಸಾವಯವ ಜೈವಿಕವನ್ನು ಮಾರಾಟ ಸಹ ಮಾಡುತ್ತಿದ್ದಾರೆ. ನೂರಾರು ಮಂದಿಇವರ ತೋಟಕ್ಕೆ ಬಂದು ಸಮಗ್ರ ಕೃಷಿ ಪ್ರಾತ್ಯಕ್ಷಿಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ..., ಎಲ್ಲರಂತೆಸಾಮಾನ್ಯ ರೈತ ಎನಿಸಿಕೊಳ್ಳುವ ಬದಲು ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳುವ ಜತೆಗೆ ಕೃಷಿಯನ್ನು ಉದ್ಯಮವಾಗಿಸುವಮೂಲಕ ತಾನೊಬ್ಬ ಮಾದರಿ ರೈತ ಎನಿಸಿಕೊಂಡಿದ್ದಾರೆ.
ಕೃಷಿಯಲ್ಲಿ ಖರ್ಚು ಕಮ್ಮಿ ಮಾಡಿ ಹೆಚ್ಚು ಲಾಭ ಮಾಡುವ ಅವಕಾಶಗಳಿವೆ. ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಸೂಕ್ತ ಮಾರ್ಗದರ್ಶನದೊಂದಿಗೆ ಕೆಲಸ ಮಾಡಿದರೆ ಸಾಕಷ್ಟು ಲಾಭ ಮಾಡಬಹುದು. ತಿನ್ನುವವರಿಗೆ ವಿಷಮುಕ್ತ ಆಹಾರ ನೀಡಬೇಕು ಎಂಬ ಕಾರಣಕ್ಕಾಗಿ ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದೇವೆ. ಎಲ್ಲ ರೀತಿಯ ಬೆಳೆಗಳು ನಮ್ಮ ಜಮೀನಿನಲ್ಲಿವೆ. ಮಾರುಕಟ್ಟೆಯನ್ನೂ ನಾವೇ ಸೃಜಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ವಿಸ್ತಾರ ಮಾಡಲು ಚಿಂತಿಸಿದ್ದೇವೆ. ಇಡೀ ಕುಟುಂಬ ಕೃಷಿಯಲ್ಲಿ ತೊಡಗಿಕೊಂಡಿದ್ದೇವೆ. ಕೆಂಪರಾಜುಮಾದರಿ ರೈತ
ನಮ್ಮ ತಾಲೂಕಿನಲ್ಲಿ ಹಲವಾರು ಮಂದಿ ಮಾದರಿ ಕೃಷಿಕರಿದ್ದಾರೆ. ಅಂತವರ ಸಾಲಿನಲ್ಲಿಕೆಂಪರಾಜು ಸಹ ಒಬ್ಬರು. ನಮ್ಮ ಇಲಾಖೆಯ ಸವಲತ್ತುಗಳು ಸೇರಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಾರ್ಗದರ್ಶನಪಡೆಯುತ್ತಿದ್ದಾರೆ. ಸಮಗ್ರ ಕೃಷಿಯೇ ಸಾಧನೆಗೆ ಕಾರಣ. ಇಂತಹ ಯುವಕರ ಸಂತತಿ ಇನ್ನಷ್ಟು ಹೆಚ್ಚಾಗಬೇಕು.
ಶಂಕರ್
ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
* ಕೆಂಪರಾಜು ಸಂಪರ್ಕ ಸಂಖ್ಯೆ
99169-45597