ಮಾಗಡಿಯಲ್ಲಿ ಪರ್ತಕರ್ತರ ಹಾಗೂ ಕನ್ನಡ ಭವನದ ನಿರ್ಮಾಣಕ್ಕೆ ಉಸ್ತವಾರಿ ಸಚಿವ ರಾಮಲಿಂಗರೆಡ್ಡಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಬಾಲಕೃಷ್ಣ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಟಿ.ಕೆ.ರಾಮು, ಪ್ರಧಾನ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್​, ಉಪಾಧ್ಯಕ್ಷ ಜಿ.ನರಸಿಂಹಮೂರ್ತಿ, ಖಜಾಂಚಿ ತೇಜಮೂರ್ತಿ, ಕಾರ್ಯದರ್ಶಿ ಮಂಜುನಾಥ್​, ಕಸ್ತೂರಿ ಕಿರಣ್​ ಇತರರಿದ್ದರು. 
ಬೆಂಗಳೂರು ದಕ್ಷಿಣ

ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪತ್ರಕರ್ತರ ಭವನ

ಮಾಗಡಿ: ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಸ್ತವಾರಿ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಪಟ್ಟಣದ ತಿರುಮಲೆ ಮಾಗಡಿ ಮುಖ್ಯರಸ್ತೆಯ ಗುಂಡಯ್ಯನಬಾವಿ ಎದುರು ನೂತನ ಪತ್ರಿಕಾ ಭವನ ಹಾಗೂ ಕನ್ನಡ ಭವನದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾರಂಗ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರಿಗೆ ಪ್ರತಿ ಜಿಲ್ಲೆ, ತಾಲೂಕುಮಟ್ಟದಲ್ಲಿ ಸೂಕ್ತ ಪತ್ರಿಕಾ ಭವನ ಅವಶ್ಯಕ ಎಂದು ಸಚಿವರು, ಜಿಲ್ಲಾ ವ್ಯಾಪ್ತಿಯಲ್ಲಿ ಪತ್ರಕರ್ತರು ಬಸ್​ಗಳಲ್ಲಿ ಸಂಚರಿಸಲು ಉಚಿತ ಪಾಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ವಿಮೆಗೂ ಚಿಂತಿಸಲಾಗಿದೆ ಎಂದರು.
ಶಾಸಕ ಎಚ್​.ಸಿ.ಬಾಲಕೃಷ್ಣ ಮಾತನಾಡಿ, ಹಲವು ವರ್ಷಗಳಿಂದಲೂ ಭವನ ನಿರ್ಮಿಸಿಕೊಡುವಂತೆ ಪತ್ರಕರ್ತರು ಬೇಡಿಕೆ ಇಟ್ಟಿದ್ದರು. ಅವರ ಮನವಿಗೆ ಸ್ಪಂದಿಸಲಾಗಿದೆ. ಅದರಲ್ಲೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಪದಾಧಿಕಾರಿಗಳು ಪ್ರತಿದಿನ ನನ್ನ ಬೆನ್ನು ಹತ್ತಿದ್ದರಿಂದ ಸೂಕ್ತ ಸ್ಥಳವನ್ನೇ ಗುರುತಿಸಿ ಕನ್ನಡ ಮತ್ತು ಪತ್ರಕರ್ತರ ಭವನ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಲಾಗಿದೆ. ಕನ್ನಡಮ್ಮನ ಗುಡಿ ಪಕ್ಕದಲ್ಲಿಯೇ ಪತ್ರಕರ್ತರ ಭವನವೂ ಇದ್ದರೆ ಕನ್ನಡಮ್ಮನ ಸೇವೆ ನಿರಂತರವಾಗಿರುತ್ತದೆ. ಕಟ್ಟಡ ನಿರ್ಮಾಣಕ್ಕೆ 2.5 ಕೋಟಿ ರೂ. ಅನುದಾನ ಮಂಜೂರಾತಿ ತಂದಿದ್ದು, ವರ್ಷದೊಳಗೆ ಕಟ್ಟಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ ಬಾಲಕೃಷ್ಣ, ಇದು ಕಾಂಗ್ರೆಸ್​ನ ಶ್ರಮ ಎಂದು ನೆನಪಿಸಿಕೊಂಡರೆ ಸಾಕು ಎಂದರು.
ಮಾಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಟಿ.ಕೆ.ರಾಮು ಮಾತನಾಡಿ, ಪತ್ರಕರ್ತರ ಸಂಕ್ಕೆ ಸ್ವಂತ ಸ್ಥಳವಿರಲಿಲ್ಲ, ಈಗ ನಿವೇಶನ ದೊರಕಿದೆ ಎಂದು ಹರ್ಷವ್ಯಕ್ತಪಡಿಸಿದರು. ಬಿಡಿಸಿಸಿ ಬ್ಯಾಂಕ್​ ಜಿಲ್ಲಾಧ್ಯಕ್ಷ ಎಚ್​.ಎನ್​.ಅಶೋಕ್​, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಉಪಾಧ್ಯಕ್ಷ ಟಿ.ಶಿವರಾಜು, ಕಾರ್ಯದರ್ಶಿ ಎಂ.ಎಸ್​.ಸಿದ್ದಲಿಂಗೇಶ್ವರ್​, ಮಾಗಡಿ ಕಾರ್ಯನಿರತ ಪತ್ರಕರ್ತರ ಸಂದ ನಿರ್ದೇಶಕರಾದ ಶ್ರೀಧರ್​, ತಿಲಕರಾಜು, ಕಸಾಪ ಜಿಲ್ಲಾಧ್ಯಕ್ಷ ನಾಗೇಶ್​, ತಾಲೂಕು ಅಧ್ಯಕ್ಷ ತಿ.ನಾ. ಪದ್ಮನಾಭ್​, ಪುರಸಭೆ ಅಧ್ಯೆ ಶಿವರುದ್ರಮ್ಮ ವಿಜಯಕುಮಾರ್​, ರಮ್ಯಾ ನರಸಿಂಹಮೂರ್ತಿ, ಗುರುಸ್ವಾಮಿ, ಶಿವಪ್ರಸಾದ್​, ಎಂ.ಆರ್​.ಮಂಜುನಾಥ್​, ಟಿ.ಆರ್​.ರಾಮಕೃಷ್ಣಯ್ಯ, ಶಿವಕುಮಾರ್​, ಕಡೆಮನೆ ಕುಮಾರ್​, ರೂಪೇಶ್​ ಇದ್ದರು.