ಕುದೂರು ಬಸ್​ ನಿಲ್ದಾಣದಲ್ಲಿರುವ ಹೈಮಾಸ್ಟ್​ ದೀಪ. 
ಬೆಂಗಳೂರು ದಕ್ಷಿಣ

ಕುದೂರು ಪಟ್ಟಣದಲ್ಲಿ 10ದಿನಗಳಿಂದ ಕತ್ತಲು!

ಕುದೂರು: ಬಸ್​ ನಿಲ್ದಾಣದಲ್ಲಿರುವ ಹೈಮಾಸ್ಟ್​ ದೀಪ ಕಳೆದ 10 ದಿನಗಳಿಂದ ದುರಸ್ತಿ ಕಾಣದೆ ಕತ್ತಲಲ್ಲ್ಲಿ ಕಾಲ ಕಳೆಯುವಂತಾಗಿದೆ.
ಹೈಮಾಸ್ಟ್​ ದೀಪ ಮಾತ್ರವಲ್ಲದೆ, ಮುಖ್ಯರಸ್ತೆ ಸೇರಿ ವಿವಿಧ ಬಡಾವಣೆಗಳಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಎಲ್​ಇಡಿ ಬಲ್ಬ್​ಗಳು ಸಹ ವಾರ ತುಂಬುವುದರೊಳಗೆ ಹಾಳಾಗುತ್ತಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರೂ ಇಂದು&ನಾಳೆ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ವಿನ@ ಸಮಸ್ಯೆಗೆ ಮುಕ್ತಿ ನೀಡುತ್ತಿಲ್ಲ ಎನ್ನಲಾಗಿದೆ.
ಪಂಚಾಯಿತಿ ಕಚೇರಿಯ ಪಕ್ಕದಲ್ಲೆ ಇರುವ ಬಸ್​ ನಿಲ್ದಾಣದ ದೀಪವೇ ಕೆಟ್ಟು ಹೋಗಿದ್ದರೂ ಅಧಿಕಾರಿಗಳು ಗಮನ ಹರಿಸದಿರುವುದು ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಹಗಲಿನಲ್ಲಿ ಬೆಳಕು, ರಾತ್ರಿಯಲ್ಲಿ ಕತ್ತಲು: ಜಿಲ್ಲೆಯಲ್ಲೆ ಅತ್ಯಂತ ಶ್ರೀಮಂತ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಕುದೂರಿನಲ್ಲಿ ರಾತ್ರಿ ಬೆಳಗಬೇಕಾದ ಬಸ್​ ನಿಲ್ದಾಣದ ದೀಪಗಳು ಬೆಳಕು ನೀಡುತ್ತಿಲ್ಲ, ಹಲವು ಕಡೆಗಳಲ್ಲಿ ಹಗಲಿನ ವೇಳೆಯೂ ಬೀದಿ ದೀಪಗಳು ಉರಿಯುತ್ತಿರುತ್ತವೆ!. ಅಧಿಕಾರಿಗಳ ಈ ಉದಾಸೀನತೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆೇಪ ವ್ಯಕ್ತವಾಗಿದೆ.
ಸುರತೆ ಆತಂಕ
ಕುದೂರು ಬಸ್​ ನಿಲ್ದಾಣದಲ್ಲಿ ರಾತ್ರಿ ಹತ್ತಾರು ಬಸ್​ಗಳು ನಿಲ್ಲುತ್ತವೆ. ಅಲ್ಲದೆ, ನಸುಕಿನಲ್ಲೆ ಸಾವಿರಾರು ರೂಪಾಯಿ ಮೌಲ್ಯದ ಹಾಲಿನ ಕ್ಯಾನ್​ಗಳು, ದಿನಪತ್ರಿಕೆಗಳ ಬಂಡಲ್​ಗಳು ಇಲ್ಲಿಗೆ ಬಂದು ಬೀಳುತ್ತವೆ. ಕತ್ತಲೆಯ ಸಾಮ್ರಾಜ್ಯವಾಗಿರುವ ಕಾರಣ ಇಲ್ಲಿ ಕಳ್ಳತನದ ಭೀತಿ ಎದುರಾಗಿದ್ದು, ಸುರತೆಯ ದೃಷ್ಟಿಯಿಂದ ಅಧಿಕಾರಿಗಳು ತಣವೇ ಎಚ್ಚೆತ್ತುಕೊಂಡು ಹೈಮಾಸ್ಟ್​ ಹಾಗೂ ಕೆಟ್ಟಿರುವ ಬೀದಿ ದೀಪಗಳನ್ನು ಸರಿಪಡಿಸಬೇಕು ಮತ್ತು ಹಗಲಿನಲ್ಲಿ ಉರಿಯುವ ದೀಪಗಳನ್ನು ಆರಿಸಲು ವ್ಯವಸ್ಥೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಕಳಪೆ ಕಾಮಗಾರಿ ಆರೋಪ
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವೈಟ್​ ಟಾಪಿಂಗ್​ ಮುಖ್ಯ ರಸ್ತೆಯ ಬದಿಗಳಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ತೀರಾ ಕಳಪೆ ಎಲ್​ಇಡಿ ಬಲ್ಬ್​ಗಳನ್ನು ಬಳಸಿರುವುದರಿಂದ ಅವು ದೀರ್ಕಾಲ ಬಾಳಿಕೆ ಬರುತ್ತಿಲ್ಲ ಎನ್ನುವುದು ಸ್ಥಳಿಯರ ಆರೋಪವಾಗಿದೆ. ಇನ್ನಾದರೂ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಪಿಡಿಒ ಎಚ್ಚೆತ್ತುಕೊಂಡು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಿದೆ.
"

ಒಂದು ವಾರದಿಂದ ಬಸ್​ ನಿಲ್ದಾಣದಲ್ಲಿನ ಹೈಮಾಸ್ಟ್​ ದೀಪ ಬೆಳಗುತ್ತಿಲ್ಲ. ಸ್ಥಳಿಯ ಆಡಳಿತ ನಿಷ್ಕ್ರಿಯವಾಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ.

— > ಮಂಜುನಾಥ್​, ಅಂಗಡಿ ಮಾಲೀಕ, ಕುದೂರು.
"

ಕುದೂರಿನಲ್ಲಿ ಬೀದಿ ದೀಪದ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು.

— > ಸತೀಶ್​, ಪಿಡಿಒ, ಕುದೂರು ಗ್ರಾಪಂ.