ಅಮೃತಾ ಇನ್​ಸ್ಟಿಟ್ಯೂಟ್​ ಆ್​ ಇಂಜಿನಿಯರಿಂಗ್​ ಆ್ಯಂಡ್​ ಮ್ಯಾನೇಜ್ಮೆಂಟ್​ ಸೈನ್ಸ್​ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಡಾ.ಸಂತೋಷ್​ ಎಂ. ಮುರನಾಳ, ರಾಜೇಶ್ವರ್​ ಕಾಡದೇವರಮಠ, ಡಾ.ವೀರೇಶ್​ ಪಾಟೀಲ, ಡಾ.ಅತಾ ಮುಳಗುಂದ ಇತರರಿದ್ದರು. 
ಬೆಂಗಳೂರು ದಕ್ಷಿಣ

ತಿಮ್ಮೇಗೌಡನದೊಡ್ಡಿ ಎಐಇಎಂಎಸ್​ನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

ಬಿಡದಿ: ಪಟ್ಟಣ ಸಮೀಪದ ತಿಮ್ಮೇಗೌಡನದೊಡ್ಡಿ ಅಮೃತ ಇನ್​ಸ್ಟ್ಟಿಟ್ಯೂಟ್​ ಆ್​ ಇಂಜಿನಿಯರಿಂಗ್​ ಆ್ಯಂಡ್​ ಮ್ಯಾನೇಜ್ಮೆಂಟ್​ ಸೈನ್ಸ್​ ಕಾಲೇಜಿನಲ್ಲಿ ಮೇ 29 ಹಾಗೂ 30ರಂದು "ಟ್ರಸ್ಟ್​ವರ್ಥ್​ ಎಐ ಫಾರ್​ ಇಂಟಿಲಿಜೆಂಟ್​ ಕಂಪ್ಯೂಟಿಂಗ್​ ಸಿಸ್ಟಮ್​' ಶೀರ್ಷಿಕೆಯಡಿ ಅಂತರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಶೈಣಿಕ ಮುಖ್ಯಸ್ಥ ರಾಜೇಶ್ವರ್​ ಕಾಡದೇವರಮಠ ತಿಳಿಸಿದರು.
ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಮುಂಬೈನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆ್​ ಇಂಡಸ್ಟ್ರೀಯಲ್​ ಇಂಜಿನಿಯರಿಂಗ್​ ಸಹಯೋಗದಲ್ಲಿ ಸಂಸ್ಥೆಯ ಕಂಪ್ಯೂಟರ್​ ಸೈನ್ಸ್​, ಇಂಜಿನಿಯರಿಂಗ್​, ಎಲೆಕ್ಟ್ರಾನಿಕ್​ ಆ್ಯಂಡ್​ ಕಮ್ಯುನಿಕೇಶನ್​ ಇಂಜಿನಿಯರಿಂಗ್​ ಮತ್ತು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆ್ಯಂಡ್​ ಮಷಿನ್​ ಲರ್ನಿಂಗ್​ ವಿಭಾಗದಿಂದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಐಇಎಂಎಸ್​ ಪ್ರಾಂಶುಪಾಲ ಡಾ.ಸಂತೋಷ್​ ಎಂ. ಮುರನಾಳ ಮಾತನಾಡಿ, ಸಮ್ಮೇಳನದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯದವರಲ್ಲದೇ ಅಮೆರಿಕ, ನೈಜೀರಿಯಾ, ಓಮನ್​, ತೈವಾನ್​ ದೇಶದಿಂದಲೂ ವಿದ್ಯಾರ್ಥಿಗಳು ಬಂದು ಎಐಗೆ ಸಂಭಂದಿಸಿದಂತೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಒಟ್ಟಾರೆ 183 ಪ್ರಬಂಧಗಳು ಎರಡು ದಿನದಲ್ಲಿ ಮಂಡನೆಯಾಗಲಿವೆ. ಬೆಂಗಳೂರಿನ ರೇವಾ, ಪಿಇಎಸ್​, ಆರ್​.ವಿ. ಕಾಲೇಜು, ಬಿಎಂಎಸ್​, ತುಮಕೂರಿನ ಸಿದ್ಧಾರ್ಥ ಅಕಾಡೆಮಿ ಆ್​ ಹೈಯರ್​ ಎಜುಕೇಷನ್​, ಕಲ್ಬುರ್ಗಿಯ ಶರಣ ಬಸವ ವಿವಿ ಸೇರಿದಂದೆ ರಾಜ್ಯದ ಹಲವು ಕಾಲೇಜುಗಳು ಸಮ್ಮೇಳನದಲ್ಲಿ ಭಾಗವಹಿಸಲಿವೆ ಎಂದು ವಿವರಿಸಿದರು.
ಸಮ್ಮೇಳನವನ್ನು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂದ ಕಾರ್ಯಾಧ್ಯ ಡಾ.ವೀರಣ್ಣ ಸಿ. ಚರಂತಿಮಠ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಿಎಂಎಸ್​ ವಿವಿ ರಿಜಿಸ್ಟಾರ್​ ಡಾ.ಗೌರಿ ಶಂಕರ್​, ಬಿವಿವಿ ಬಿಡದಿ ಕ್ಯಾಂಪಸ್​ ಕಾರ್ಯಾಧ್ಯ ಮಹಾಂತೇಶ್​ ಎಸ್​. ಶೆಟ್ಟರ್​ ಉಪಸ್ಥಿತಲಿರಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಉಪನ್ಯಾಸಕರಾಗಿ ಇಸ್ರೇಲ್​ನ ಎನ್​ಡಿಐ ಕಮ್ಯುನಿಕೇಷನ್ಸ್​ ಮುಖ್ಯ ತಾಂತ್ರಿಕ ಅಧಿಕಾರಿ ಯೋರಮ್​ ಒರರ್ಕ್​, ಅಷ್ಟರ ಲ್ಯಾಬ್ಸ್​ ಪೆ ಲಿ. ಸ್ಥಾಪಕ ಅಧ್ಯ ನಂದಿ ಧರ್ಮ ಕಿಶೋರ್​ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಲೆಕ್ಟ್ರಾನಿಕ್​ ಮತ್ತು ಸಂವಹನ ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಡಾ.ವೀರೇಶ್​ ಪಾಟೀಲ, ಕಂಪ್ಯೂಟರ್​ ಸೈನ್ಸ್​ ಎಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್​, ಮಾಹಿತಿ ವಿಾನ ವಿಭಾಗದ ಡಾ.ಕುಮಾರ್​, ಡಾ.ಮಂಜುನಾಥ್​, ಡಾ.ಅತಾ ಮುಳಗುಂದ ಹಾಗೂ ಇತರರು ಇದ್ದರು.