ಕನಕಪುರದ ಮೆಳೇಕೋಟೆ ರಾಗಿ ಖರೀದಿ ಕೇಂದ್ರದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಮಾರಾಟ ಮಾಡಬೇಕಿದ್ದ ರಾಗಿಯನ್ನು ತಡೆದಿರುವ ರೈತ ಸಂಘದ ಪದಾಧಿಕಾರಿಗಳು. ಸ್ಥಳದಲ್ಲಿ ಆಹಾರ ಇಲಾಖೆಯ ಜಯಸಿಂಹ, ಕೃಷಿ ಇಲಾಖೆ ಅಧಿಕಾರಿ ರಾಧಾಕೃಷ್ಣ, ಕೃಷಿಕ ಸಮಾಜದ ಅಧ್ಯಕ್ಷ ದೊಡ್ಡವಿರೇಗೌಡ ಇದ್ದರು. 
ಬೆಂಗಳೂರು ದಕ್ಷಿಣ

ಪಡಿತರ ರಾಗಿ ಅಕ್ರಮ ಮಾರಾಟ?

ಕನಕಪುರ: ಬಡತನ ರೇಖೆಯಿಂದ ಕೆಳಗಿರುವ ಜನರು ಹಸಿವಿನಿಂದ ನರಳಬಾರದೆಂಬ ಉದ್ದೇಶದಿಂದ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಮಾರಾಟ ಮಾಡಬೇಕಿದ್ದ ರಾಗಿಯನ್ನು ಮಂಗಳವಾರ ಕನಕಪುರದ ಮೆಳೇಕೋಟೆ ರಾಗಿ ಖರೀದಿ ಕೇಂದ್ರಕ್ಕೆ ಸೀಲ್​ ಸಮೇತ ಲೋಡ್​ಗಟ್ಟಲೆ ಮಾರಾಟ ಮಾಡಲು ತರಲಾಗಿತ್ತು. ವಿಷಯ ತಿಳಿದ ರೈತ ಸಂ ಹಾಗೂ ಇತರ ಸಂಟನೆಗಳ ಮುಖಂಡರು ರಾಗಿ ಖರೀದಿ ಕೇಂದ್ರಕ್ಕೆ ತೆರಳಿ ಲಾರಿಯನ್ನು ತಡೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿಗಳಿಗೆ ೋಟೋ, ವಿಡಿಯೋ ಸಮೇತ ಮಾಹಿತಿ ನೀಡಿದ್ದಾರೆ.
ಇಷ್ಟಾದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ರಾಗಿ ಕೇಂದ್ರದ ವ್ಯವಸ್ಥಾಪಕರು ರಾಗಿ ತುಂಬಿಕೊಂಡು ಬಂದಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ರಾಜ್ಯ ರೈತ ಹಿತ ರಕ್ಷಣಾ ಸಮಿತಿ ಸಲಹೆಗಾರ ಪ್ರಶಾಂತ್​ ಹೊಸದುರ್ಗ ಆರೋಪಿಸಿದರು. ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಮಾರಾಟ ಮಾಡಬೇಕಿದ್ದ ಪಡಿತರ ರಾಗಿಯನ್ನು ಗ್ರಾಹಕರಿಗೆ ವಿತರಣೆ ಮಾಡದೆ ಸೀಲ್​ ಸಮೇತ ಲಾರಿಗಳಲ್ಲಿ ತುಂಬಿಕೊಂಡು ನಗರದ ರಾಗಿ ಕೇಂದ್ರದಲ್ಲಿ ಲೋಡ್​ಗಟ್ಟಲೆ ಮರುಮಾರಾಟ ಮಾಡುತ್ತಿದ್ದವರನ್ನು ತಡೆದು ಅಧಿಕಾರಿಗಳಿಗೆ ಒಪ್ಪಿಸಿದರೂ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಸದಸ್ಯ ಬೊಮ್ಮನಹಳ್ಳಿ ಕುಮಾರಸ್ವಾಮಿ ಮಾತನಾಡಿ, ದಲ್ಲಾಳಿಗಳು ನಕಲಿ ಪಹಣಿ ಸೃಷ್ಟಿಮಾಡಿಕೊಂಡು ನಿತ್ಯ ಲೋಡುಗಟ್ಟಲೆ ರಾಗಿಯನ್ನು ರಾಗಿ ಕೇಂದ್ರಕ್ಕೆ ತಂದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಗೊತ್ತಾಗದ ರೀತಿಯಲ್ಲಿ ರೈತರ ಪಹಣಿಯಲ್ಲಿ ರಾಗಿ ಬೆಳೆಯಲಾಗಿದೆ ಎಂದು ನಮೂದಿಸಿ ರಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಸಂಘದ ಸಂಪತ್​ ಮಾತನಾಡಿ, ಪಹಣಿ ಸರ್ವೇ ನಂಬರ್​ಗಳಲ್ಲಿ ಪರಿಶೀಲಿಸಿದರೆ ಹಿಪು$್ಪನೇರಳೆ ಬೆಳೆದಿರುವುದು ಕಂಡು ಬಂದಿದೆ. ನಕಲಿ ಪಹಣಿಗಳನ್ನು ಹಿಡಿದು ರಾಗಿ ಕೇಂದ್ರದ ಅಧಿಕಾರಿಗೆ ನೀಡಿದರೂ ರ್ನಿಲಕ್ಷ$್ಯ ವಹಿಸುತ್ತಾರೆ. ಈ ಧೋರಣೆಯಿಂದ ಪಡಿತರ ವಿತರಣೆ ವ್ಯವಸ್ಥೆ ಹಾಳಾಗುತ್ತಿದೆ. ಇಂತಹ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.