ಮಾಗಡಿ ಕೆಂಪೇಗೌಡ ಕೋಟೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಎಚ್​.ಸಿ.ಬಾಲಕೃಷ್ಣ ಚಾಲನೆ ನೀಡಿದರು. ತಹಸೀಲ್ದಾರ್​ ಶರತ್​ ಕುಮಾರ್​, ಬಿಇಒ ಚಂದ್ರಶೇಖರ್​, ಮಹಿಳಾ ನಾಯಕಿ ಶೈಲಜಾ, ಕಲ್ಕೆರೆ ಶಿವಣ್ಣ ಇತರರಿದ್ದರು. 
ಬೆಂಗಳೂರು ದಕ್ಷಿಣ

ಆಡುಭಾಷೇಲಿ ಬೈಯ್ದೆ... ಕ್ಷಮೆ ಇರಲಿ...

ತಹಸೀಲ್ದಾರ್​ಗೆ ಜನರಿಂದ ಹೊಡೆಸುವೆ ಹೇಳಿಕೆ ಸಮರ್ಥಿಸಿ, ವಿಷಾದಿಸಿದ ಬಾಲಕೃಷ್ಣ

ಮಾಗಡಿ: "ಸರ್ಕಾರಿ ನೌಕರರ ಬಗ್ಗೆ ನನಗೆ ಭೇದ&ಭಾವವಿಲ್ಲ. ಕೆಲಸ ಮಾಡುವವರ ಬಗ್ಗೆ ಖುಷಿ, ಪ್ರಶಂಸೆ ವ್ಯಕ್ತಪಡಿಸುವವ ನಾನು. ಯುವ ತಹಸೀಲ್ದಾರ್​ ಎಂದು ಮಾಗಡಿಗೆ ತಂದು ಕೂರಿಸಿದೆ. ಅದಕ್ಕೆ ನ್ಯಾಯ ಒದಗಿಸುವವರು ಯಾರು? ಅಧಿಕಾರಿ ತಪ್ಪು ಮಾಡಿದರೂ ಜನ ಬೈಯುವುದು ನನ್ನನ್ನು... ನಾನು ಕರೆತಂದ ತಹಸೀಲ್ದಾರ್​ ತಪ್ಪು ಮಾಡಿದ್ದಾರೆ ಎಂದಾಗ ಮುಜುಗರವಾಯಿತು. ಅದಕ್ಕೆ ಆಡುಭಾಷೆಯಲ್ಲಿ ಬೈಯ್ದಿದ್ದೇನೆ... ಕ್ಷಮೆ ಇರಲಿ...'
ತಹಸೀಲ್ದಾರ್​ಗೆ ಜನರಿಂದ ಹೊಡೆಸುವೆ ಎಂದು ಹೇಳಿಕೆ ನೀಡಿ ಚರ್ಚೆಗೆ ಆಸ್ಪದ ನೀಡಿದ್ದ ಶಾಸಕ ಬಾಲಕೃಷ್ಣ, ಹೇಳಿಕೆಯನ್ನು ಸಮರ್ಥಿಸಿಕೊಂಡರಲ್ಲದೇ ಅಧಿಕಾರಿಯ ಕ್ಷಮೆಯನ್ನೂ ಯಾಚಿಸಿದರು.
ಇಲ್ಲಿನ ಕೆಂಪೇಗೌಡ ಕೋಟೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಾಲಕೃಷ್ಣ, "ಸರ್ಕಾರಿ ನೌಕರರು ಸಹ ರೈತರ ಮಕ್ಕಳೇ. ಆದರೆ ಅದೇ ರೈತರು ಕೆಲಸ&ಕಾರ್ಯಕ್ಕಾಗಿ ಕಚೇರಿಗೆ ಬಂದರೆ ಕೆಲಸ ಮಾಡಿಕೊಡದಿದ್ದರೆ ಹೇಗೆ? ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಡಿದರೆ ನಿಮ್ಮ ಪಾದಕ್ಕೆ ದೀರ್ದಂಡ ನಮಸ್ಕರಿಸುವೆ, ಅದುಬಿಟ್ಟು ಭ್ರಷ್ಟಾಚಾರದಲ್ಲಿ ಮುಳುಗಿದರೆ ಜನಸಾಮಾನ್ಯರ ಗತಿ ಏನು? ನೀವು ಕೆಲಸ ಮಾಡದಿದ್ದರೂ ಸಂಬಳ ಬರುತ್ತದೆ. ತಪ್ಪು ಮಾಡದಂತೆ ಹಲವು ಬಾರಿ ತಿಳಿಸಲಾಗಿದೆ. ಆದರೂ ಪದೇಪದೆ ಅದೇ ತಪ್ಪು ಮಾಡಿದರೆ ನಾನು ಬೈಯದೆ ಏನು ಮಾಡಬೇಕು? ನೀವೇ ಹೇಳಿ.. ನನ್ನ ಮೇಲೆ ಕ್ಷೇತ್ರದ ಜನ ಭಾರಿ ನಿರೀೆ ಇಟ್ಟಿದ್ದಾರೆ' ಎಂದು ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರಲ್ಲಿ ಬಾಲಕೃಷ್ಣ ಅಲವತ್ತುಕೊಂಡರು.
ತಹಸೀಲ್ದಾರ್​ ತಪ್ಪು ಮಾಡಿದರು ಎಂದು ಜನ ಹೇಳಿದಾಗ ಮುಜುಗರವಾಯಿತು. ಈ ವೇಳೆ ಗ್ರಾಮೀಣ ಭಾಗದ ಶಾಸಕನಾಗಿ ಆಡು ಭಾಷೆಯಲ್ಲಿ ತಹಸೀಲ್ದಾರ್​ಗೆ ಆ ರೀತಿ ಮಾತನಾಡಿದ್ದೇನೆ ಕ್ಷಮೆ ಇರಲಿ ಎಂದರು.
ದೈಹಿಕ, ಮಾನಸಿಕವಾಗಿ ಶಕ್ತಿಯುತರಾಗಿದ್ದಾಗ ಮಾತ್ರ ಒತ್ತಡ ಹೊಗಲಾಡಿಸಲು ಸಾಧ್ಯ. ನನಗೂ 61 ವರ್ಷ ವಯಸ್ಸಾಗಿದೆ. ಈಗ ಅರ್ಜಿ ಹಾಕಿದರೆ ವೈಎಪಿಯೂ ಪಡೆಯಬಹುದು, ನೌಕರರಿಗಿಂತ ನಮಗೂ ಒತ್ತಡ ಹೆಚ್ಚಿದೆ. ನಮ್ಮ ಕರ್ತವ್ಯವನ್ನು ನಾವು ಮಾಡಿದರೆ ಆರೋಗ್ಯದ ಜತೆಗೆ ಮನಸ್ಸೂ ಚೆನ್ನಾಗಿರುತ್ತದೆ. ದುರಾಲೋಚನೆ ಮಾಡುವವರ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಸರ್ಕಾರಿ ನೌಕರರು ಒಳ್ಳೆಯ ಆಲೋಚನೆ ಮಾಡಬೇಕು ಎಂದು ಬಾಲಕೃಷ್ಣ ಆಶಿಸಿದರು.
ತಾಲೂಕು ಅಧ್ಯಕ್ಷ ಬಿ.ಎನ್​.ಜಯರಾಮು ಮಾತನಾಡಿ, ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದು, ಪ್ರತಿ ವರ್ಷ ರಾಜ್ಯ(3 ದಿನ), ಜಿಲ್ಲೆ(2ದಿನ), ತಾಲೂಕುಮಟ್ಟದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಸುಲ್ತಾನ್​ ಬಾಬು, ಜಯರಾಮು, ವಿಜಯಲಕ್ಷಿ$್ಮ, ರುನಾಥ್​ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ೆಬ್ರವರಿಯಲ್ಲಿ 1 ಸಾವಿರ ನೌಕರರನ್ನು ಸೇರಿಸಿ ಮಾಗಡಿಯಲ್ಲಿ ಸಮಾವೇಶ ಮಾಡಲು ಶಾಸಕರು ಕ್ರಮವಹಿಸಬೇಕು. ಸರ್ಕಾರಿ ನೌಕರರ ಭವನ ನಿರ್ಮಾಣ, ಎನ್​ಪಿಎಸ್​ ಒಪಿಎಸ್​ಆಗಿ ಪರಿವರ್ತಿಸಲು, ಕೇಂದ್ರ ಮಾದರಿಯ ವೇತನ ಕೊಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಮುಂದೆ ಗೌರವ ಕೊಡಿ
ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಸತೀಶ್​ ಮಾತನಾಡಿ, 2 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳ ಮೇಲೆ ಕೋಪ ತೋರಿಸುವುದಾದರೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿ, ಸಾರ್ವಜನಿಕರ ಮುಂದೆ ಗೌರವ ಕೊಡಿ. ಬೇರೆ ಶಾಸಕರಾಗಿದ್ದರೆ ಪ್ರತಿಭಟಿಸುತ್ತಿದ್ದೆವು ಎಂದು ಶಾಸಕರಿಗೆ ತಿಳಿಹೇಳಿದರು. ಹುದ್ದೆಗಳು ಖಾಲಿ ಇರುವುದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ರಾಜ್ಯದಲ್ಲಿ 2 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಕ್ರಮವಹಿಸಲಿದ್ದಾರೆ ಎಂದು ಭರವಸೆ ನೀಡಿದರು.
ಡಿ.ಕೆ.ರವಿಗಾಗಿ ಜನ ಮರುಗಿದ್ದರು!
ಡಿ.ಕೆ.ರವಿ ಮೃತಪಟ್ಟಾಗ ಇಡೀ ಜಿಲ್ಲೆಯ ಜನ ಮರುಗಿದ್ದರು. ಅಂತಹವರನ್ನು ದುರ್ಬಿನು ಹಾಕಿ ಹುಡುಕುವ ಪರಿಸ್ಥಿತಿ ಇದೆ. ವ್ಯವಸ್ಥೆ ಹದಗೆಟ್ಟಿದ್ದು, ನನ್ನ ೇತ್ರದ ಜನರಿಗೆ ನ್ಯಾಯ ಸಿಗಬೇಕು ಅಷ್ಟೇ... ಎಂದ ಬಾಲಕೃಷ್ಣ, ನಾನು ಯಾರಿಂದಲೂ 1 ರೂ. ಕೇಳುವವನಲ್ಲ. ತಾಲೂಕು ಆಡಳಿತದ ಅವ್ಯವಹಾರದಿಂದಾಗಿ ತಹಸೀಲ್ದಾರ್​ಗೆ ಬೈಯ್ದಿದ್ದೇನೆ. ಒಳ್ಳೆಯ ಕೆಲಸ ಮಾಡಿದರೆ ಗೌರವಿಸುವೆ, ಸನ್ಮಾನಿಸುವೆ. ಹಾಗಾಗಿ ಇನ್ನಾದರೂ ಅಧಿಕಾರಿಗಳು, ನೌಕರರು ಕೆಲಸಕ್ಕೆ ನ್ಯಾಯ ಒದಗಿಸಬೇಕು ಎಂದು ಸೂಚಿಸಿದರು.
ಪಿಡಿಒ ಕಾಂತರಾಜು, ಪದ್ಮನಾಭ, ಅಕ್ಷರ ದಾಸೋಹ ರೇಣುಕೇಶ್​, ಡಾ.ರಮೇಶ್​ ಗೌಡ, ಮಾಜಿ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ, ಸಿ.ಪ್ರಕಾಶ್​, ಗುಣಶೇಖರ್​, ರಾಜೇಗೌಡ, ಜಗದೀಶ್​, ಮಲ್ಲಿಕಾರ್ಜುನ ಸ್ವಾಮಿ, ಸಿ.ಬಸವರಾಜು, ಗೌರಿಶಂಕರ್​, ಟಿ.ವೆಂಕಟೇಶ್​, ಧರಣೇಶ್​, ರಮೇಶ್​ ಗೌಡ, ಸುಲ್ತಾನ್​ ಬಾಬು, ಜಗದೀಶ್​, ಯೋಗೇಶ್​, ಗೋವಿಂದರಾಜು ಇದ್ದರು.