ಕೈಲಾಂಚ: ರಾಮನಗರ ತಾಲೂಕು ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಪತ್ನಿಯನ್ನೇ ಪತಿ ಕೊಲೆ ಮಾಡಿದ್ದಾನೆ.
ದಾಸರಹಳ್ಳಿ (ನೆಲಮಲೆ ತವರುಮನೆ)ಯ ನಾಗಮ್ಮ (42) ಹತ್ಯೇಗಿಡಾದವರು. ಕಣಿಮಾದಯ್ಯ (50) ಕೊಲೆ ಆರೋಪಿ.
ಮಾದಯ್ಯ ದನದ ವ್ಯಾಪಾರಿ, ದಲ್ಲಾಳಿಯಾಗಿದ್ದು, ಪತ್ನಿ ಮೇಲೆ ಸಂಶಯ ಪಡುತ್ತಿದ್ದ. ನಾಗಮ್ಮ ಅವರನ್ನು ಯಾರೇ ಮಾತನಾಡಿಸಿದರೂ ಅವರ ಮೇಲೆ ಅನುಮಾನ ಪಡುತ್ತಿದ್ದ. ಇದೇ ಕಾರಣಕ್ಕೆ 3 ಮೂರು ವರ್ಷದಿಂದ ದಂಪತಿ ಒಂದೇ ಮನೆಯಲ್ಲಿದ್ದರೂ ಮನೆ ಹಿಂದೆ ಹೆಂಡಂತಿ&ಮಕ್ಕಳು, ಮನೆ ಮುಂದೆ ಮಾದಯ್ಯ ಹಾಗೂ ತಾಯಿ ವಾಸ ಮಾಡುತ್ತಿದ್ದರು.
ಒಂದೂವರೆ ವರ್ಷದ ಹಿಂದೆ ಇದೇ ರೀತಿ ಮನೆಯಲ್ಲಿ ಗಲಾಟೆಯಾಗಿ ನಾಗಮ್ಮ ರಾಮನಗರ ಮಹಿಳಾ ಠಾಣೆಯಲ್ಲಿ ಗಂಡನ ವಿರುದ್ಧ ದೂರು ಸಹ ನೀಡಿದ್ದರು. ಈ ಮಧ್ಯೆ ಮೂರು ದಿನಗಳ ಹಿಂದೆ ಒಬ್ಬ ವ್ಯಕ್ತಿಯ ಮೇಲೆ ಸಂಶಯ ವ್ಯಕ್ತಪಡಿಸಿದ ಮಾದಯ್ಯ, ಮನೆ ಬಳಿ ಬಂದಿದ್ದ ಆತನ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಇಬ್ಬರೂ ಗಾಯಗೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಾದಯ್ಯ ಭಾನುವಾರ ಬೆಳಗ್ಗೆ ಮನೆಯಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಭೀಕರವಾಗಿ ಕೊಲೆಗೈದು, ಬಳಿಕ ತಾನೇ ರಾಮನಗರ ಗ್ರಾಮಾಂತರ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ರಾಮನಗರ ಜಿಲ್ಲಾಸ್ಪತ್ರೆಗೆ ರವಾನಿಸಿದರು.
ಮರಣೋತ್ತರ ಪರೀೆ ಬಳಿಕ ಮೃತದೇಹವನ್ನು ವಾರಸ್ಸುದಾರರಿಗೆ ಹಸ್ತಾಂತರಿಸಲಾಯಿತು. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದು, ತಾಯಿ ಶವದ ಮುಂದೆ ಮಕ್ಕಳ ರೋಧನ ಮುಗಿಲುಮುಟ್ಟಿತ್ತು. ಆರೋಪಿ ಮಾದಯ್ಯ ಸದ್ಯ ಪೊಲೀಸರ ವಶದಲ್ಲಿದ್ದಾನೆ.
1 ಪತಿಯಿಂದಲೇ ಕೊಲೆಯಾದ ನಾಗಮ್ಮ (42)
ಪೋಟೋ : 2 ಪತ್ನಿ ನಾಗಮ್ಮನನ್ನು ಭೀಕರವಾಗಿ ಕೊಲೆ ಮಾಡಿದ ಪತಿ ಕಣಿ ಮಾದಯ್ಯ (50)