ಕನಕಪುರ ಬಸವೇಶ್ವರನಗರದಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿಯಿಂದ 1.80 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿರುವುದು. 
ಬೆಂಗಳೂರು ದಕ್ಷಿಣ

ಮನೆ ಕಳವು ಮಾಡಿದ್ದವನ ಬಂಧನ

ಕನಕಪುರ: ಬಸವೇಶ್ವರ ನಗರದ ನಾರಾಯಣಗೌಡರ ಬೀದಿಯ ಮನೆಯೊಂದರಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದವನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಕಲ್ಯಾಣಗೆರೆ ನಿವಾಸಿ ಅಸ್ಲಂ (40) ಬಂಧಿತ. 2025ರ ಸೆ.6ರಂದು ಮನೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ ಎಂದು ನಗರದ ರೇಣುಕಾ ಎಂಬುವವರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸರ್ಕಲ್​ ಇನ್​ಸ್ಪೆಕ್ಟರ್​ ಅನಂತರಾಮು, ಎಸ್​ಐ ರತ್ನಮ್ಮ, ಪಿಎಸ್​ಐ ಶಿವಶಂಕರ್​, ಸಿಬ್ಬಂದಿ ರಮೇಶ್​, ರವಿ, ವಿಶ್ವಾಸ್​, ಮನು, ತ್ರಿವೇಣ್​, ವಾಹನ ಚಾಲಕ ಶಂಕರಲಿಂಗಯ್ಯ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ, ಆತನಿಂದ 1.80 ಲಕ್ಷ ರೂ. ಮೌಲ್ಯದ 12ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಅಸ್ಲಂ ಮೇಲೆ ಕನಕಪುರವಲ್ಲದೇ, ರಾಜ್ಯದ ವಿವಿಧ ಠಾಣೆಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.