ಕನಕಪುರ ತಾಲೂಕು ಹೊಸಕೋಟೆ ಮುರಾರ್ಜಿ ವಸತಿ ಶಾಲೆಗೆ ದಿಶಾ ಕಮಿಟಿ ಸದಸ್ಯೆ ಶೋಭಾ ಮತ್ತು ಅಲ್ಲಿನ ಮೇಲ್ವಿಚಾರಕರು ಭೆಟಿ ನೀಡಿದರು.
ಕನಕಪುರ: ತಾಲೂಕಿನ ಕಸಬಾ ಹೋಬಳಿ ಹೊಸಕೋಟೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದಿಶಾ ಕಮಿಟಿ ಸದಸ್ಯೆ ಶೋಭಾ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಕೋಟೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ನಲುಗುತ್ತಿದೆ. ಮೂಲ ಸೌಕರ್ಯಗಳ ಕೊರತೆ, ಶೌಚಗೃಹ ಹಾಗೂ ನೀರಿನ ಟ್ಯಾಂಕ್ಗಳು ಸ್ವಚ್ಛತೆ ಇಲ್ಲದಿರುವುದು, ಜತೆಗೆ ಟ್ಯಾಂಕ್ಗಳು ಸೋರಿ ಮೇಲ್ಛಾವಣಿಯಲ್ಲಿ ನೀರು ನಿಂತು ಇಡೀ ಕಟ್ಟಡವೇ ಶಿಥಿಲಾವಸ್ಥೆ ತಲುಪಿದೆ. ಈ ಬಗ್ಗೆ ವಾರ್ಡನ್ ಮತ್ತು ಶಿಕ್ಷಕರ ಬಳಿ ವಿಚಾರಿಸಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ.
ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲತ್ತು ಪೂರೈಸುತ್ತಿದ್ದರೂ ಸಹ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಸರ್ಕಾರ ಕೂಡಲೇ ಈ ಅವ್ಯಸ್ಥೆಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.