ಬಿಡದಿ ಹಳೇ ಪುರಸಭೆ ಕಚೇರಿಯಲ್ಲಿ ಅಧ್ಯೆ ಭಾನುಪ್ರಿಯಾ ಸಂಪತ್ ಕುಮಾರ್ ಅಧ್ಯತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಉಪಾಧ್ಯೆ ಆಯಿಷಾ ಖಲೀಲ್, ಮುಖ್ಯಾಧಿಕಾರಿ ಮೀನಾ ಇದ್ದರು.
ಬಿಡದಿ: ಪುರಸಭೆ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಾವುದೇ ಗಂಭೀರ ವಿಷಯಗಳ ಚರ್ಚೆ ಇಲ್ಲದೆ ಸಣ್ಣ&ಪುಟ್ಟ ಗದ್ದಲಗಳೊಂದಿಗೆ ಬರಖಾಸ್ತಾಯಿತು.
ಪುರಸಭೆ ಹಳೆಯ ಕಟ್ಟಡದ ಸಭಾಂಗಣದಲ್ಲಿ ಅಧ್ಯೆ ಭಾನುಪ್ರಿಯಾ ಸಂಪತ್ಕುಮಾರ್ಅಧ್ಯತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ 7ನೇ ವಾರ್ಡ್ನ ಜೆಡಿಎಸ್ ಸದಸ್ಯ ಸೋಮಶೇಖರ್ ಅವರು, ಕೋಟ್ಯಂತರ ರೂ. ವ್ಯಯಿಸಿ ಹೊಸ ಕಟ್ಟಡ ನವೀಕರಣ ಮಾಡಿದ್ದೀರಿ, ಅಲ್ಲಿ ಸಭೆ ಮಾಡುವುದು ಬಿಟ್ಟು ಹಳೇ ಕಟ್ಟಡದಲ್ಲೇ ಸಭೆ ಕರೆದಿರುವುದು ಏಕೆ ಎಂದು ಪ್ರಶ್ನಿಸಿದರು. ಹಾಜರಿರಬೇಕಾದ ಇಂಜಿನಿಯರ್ಗಳು ಬಂದಿಲ್ಲ ಏಕೆ? ಸಭೆ ಅಂದರೆ ಅವರಿಗೆ ಅಷ್ಟು ಅಗೌರವವೇ ಎಂದು ಧ್ವನಿ ಎತ್ತಿದರು. ಆಗ ಅಧ್ಯೆ ಭಾನುಪ್ರಿಯಾ, ಇಂಜಿನಿಯರ್ ಶ್ಯಾಮ್ಗೆ ೋನ್ ಮಾಡಿ ಸಭೆಗೆ ಏಕೆ ಬಂದಿಲ್ಲ...ನೋಟಿಸ್ ಕೊಡಬೇಕಾ ಎಂದು ತರಾಟೆಗೆ ತೆಗೆದುಕೊಂಡರು.
ಪೌರ ಕಾರ್ಮಿಕರ ಕನಿಷ್ಠ ವೇತನ ಚರ್ಚೆ: ಸಭೆಯ ಅಜೆಂಡಾದಲ್ಲಿ ಪೌರ ಕಾರ್ಮಿಕ ಕನಿಷ್ಠ ವೇತನದ ಬಾಕಿ ಹಣ ನೀಡುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ನಾಗರಾಜು, ಕಾರ್ಮಿಕ ಇಲಾಖೆಯ ಆದೇಶದಂತೆ 71 ಮಂದಿ ಕಾರ್ಮಿಕರಿಗೆ ಹಂತ ಹಂತವಾಗಿ ಬಾಕಿ ಕನಿಷ್ಠ ವೇತನವನ್ನುನೀಡಿ ಎಂದು ಹೇಳಿದ್ದರು. ನೀವು 23 ಮಂದಿಗೆ ಏಕೆ ಬಾಕಿ ವೇತನವನ್ನುಒಂದೇ ಕಂತಿನಲ್ಲಿ ನೀಡಿದ್ದೀರಿ? ಎಲ್ಲರಿಗೂ ಸಮನಾಗಿ 2&3 ಕಂತುಗಳಲ್ಲಿ ನೀಡಬಹುದಿತ್ತು ಎಂದರು. ಕಾರ್ಮಿಕರ ಸೇವೆಯ ಅಧಾರದ ಮೇಲೆ ವೇತನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಮೀನಾ ಸಮಜಾಯಿಷಿ ನೀಡಿದರು.
ಪುರಸಭೆ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಪ್ರತಿ 3 ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಆದರೆ, ಇಲ್ಲಿ ಅವಶ್ಯಕತೆ ಇದ್ದಾಗ ಸಭೆ ಕರೆಯುವುದು ಎಷ್ಟು ಸರಿ ಎಂದಿ ಜೆಡಿಎಸ್ ಸದಸ್ಯ ಬಿ.ಜೆ.ಲೋಹಿತ್ ಕುಮಾರ್ ತರಾಟೆಗೆ ತೆಗೆದುಕೊಂಡರು. ಕುಡಿವ ನೀರಿನ ಸಮಸ್ಯೆ ಬಗ್ಗೆ ಈ ಹಿಂದೆ ಕರೆಯಲಾಗಿದ್ದ ತುರ್ತುಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದೆ. ಆದರೆ, ಅಜೆಂಡಾದಲ್ಲಿ ಲೋಹಿತ್ ಕುಮಾರ್ ಗೈರು ಎಂದು ಬರೆದಿದ್ದೀರಿ. ಅಧಿಕಾರಿಗಳ ಅಸಡ್ಡೆ ಎಷ್ಟಿದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಗರಂ ಆದರು.
ಈ ಹಿಂದಿನ ಅಧ್ಯರ ಅವಧಿಯಲ್ಲಿ ಕರೆಯಲಾಗಿದ್ದ ಟೆಂಡರ್ಗಳ ಕೆಲಸಗಳೇ ಮುಗಿದಿಲ್ಲ. ಹೀಗಿರುವಾಗ ಯಾರ ಗಮನಕ್ಕೂ ಬಾರದೆ ಕೆಲ ವಾರ್ಡ್ಗಳಲ್ಲಿ ಟೆಂಡರ್ ಕರೆದಿದ್ದೀರಿ.ಅಧ್ಯರು ಟೆಂಡರ್ ಕರೆಯಬೇಡಿ ಎಂದು ಪತ್ರ ಬರೆದಿದ್ದರೂಟೆಂಡರ್ ಕರೆದಿದ್ದಾರೆ ಎಂದರೆ ಇಲ್ಲಿನ ಅಧಿಕಾರಿಗಳಿಗೆ ಯಾರ ಭಯವಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಸದಸ್ಯ ಲೋಹಿತ್ಕುಮಾರ್ ತರಾಟೆಗೆ ತೆಗೆದುಕೊಂಡರು.
5ನೇ ವಾರ್ಡ್ ಸದಸ್ಯೆ ಲಲಿತಾ ನರಸಿಂಹಯ್ಯ ಅವರು ನಮ್ಮ ವಾರ್ಡ್ನಲ್ಲಿ ಬೋರ್ವೆಲ್ ಒಳಗೆ ಪಂಪ್ ಮೋಟರ್ ಬಿದ್ದು ಹೋಗಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದರಿಂದ ವಾರ್ಡ್ನಲ್ಲಿಕುಡಿವ ನೀರಿನ ಸಮಸ್ಯೆ ಇದೆ ಎಂದಾಗ, ಮಧ್ಯಪ್ರವೇಶಿಸಿದ ಇಂಜಿನಿಯರ್ ಶ್ಯಾಮ್ ನಿಮ್ಮ ಬಳಿ ಚರ್ಚೆ ಮಾಡಲುಆಗಲ್ಲ. ನಿಮ್ಮ ಪತಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಪ್ರಶ್ನೆ ಮಾಡಿದ ಸದಸ್ಯೆಯನ್ನೇ ಸುಮ್ಮನಾಗಿಸಿದರು.
ಕಿಕ್ ಬ್ಯಾಕ್ ದೂರು ಎಲ್ಲಿಗೆ ಬಂತು?
ಸಭೆಯಲ್ಲಿ ಪೌರ ಕಾರ್ಮಿಕರ ಬಾಕಿ ಕನಿಷ್ಠ ವೇತನದಲ್ಲಿ ಮುಖ್ಯಾಧಿಕಾರಿಗಳು ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಎಲ್ಲ ಸದಸ್ಯರು ಒಟ್ಟಾಗಿ ಯುಡಿ ಅವರಿಗೆ ದೂರು ನೀಡಿ ತಿಂಗಳುಗಳೇ ಕಳೆದರೂ ಯಾವುದೇ ತನಿಖೆಯಾಗಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ರೇಣುಕಪ್ಪ ಅಧ್ಯರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯೆ ಭಾನುಪ್ರಿಯಾ, ತನಿಖೆ ಬಗ್ಗೆ ಶಾಸಕರು, ಯೋಜನಾ ನಿರ್ದೇಶಕರ ಕಚೇರಿಗೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಪತ್ರ ಬರೆದಿದ್ದಾರಂತೆ ಎಂದು ಉತ್ತರ ಕೊಟ್ಟರು.
ಪೌರ ಕಾರ್ಮಿಕರ ಬಾಕಿ ಕನಿಷ್ಠ ವೇತನನೀಡುವುದರಲ್ಲಿ ಕಮಿಷನ್ ಪಡೆಯಲಾಗಿದೆ ಎಂದು ನನ್ನ ಮೇಲೆ ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗಿದೆ ಎಂದು ಪುರಸಭಾ ವಿಪ ನಾಯಕ ಸಿ.ಉಮೇಶ್ ತಿಳಿಸಿದರು. ಪ್ರತಿ ಸಭೆಯಲ್ಲೂ ಇದೇ ವಿಚಾರವಾಗಿ ಚರ್ಚೆ ಮಾಡುತ್ತೀರಿ, ಇದೀಗ ಮತ್ತೆ ಉಳಿದ ಕಾರ್ಮಿಕರಿಗೆ ವೇತನ ನೀಡುವ ಬಗ್ಗೆ ಅಜೆಂಡಾದಲ್ಲಿ ಸೇರಿಸಿದ್ದೀರಿ. ನಾನು ಅಕ್ರಮ ಮಾಡಿದ್ದೇನೆ ಎಂದು ನನ್ನ ಸದಸ್ಯತ್ವ ರದ್ದು ಮಾಡಿ ಎಂದು ಸಹಿ ಮಾಡಿ ಕೊಟ್ಟರಲ್ಲ ಏಕೆ? ಎಂದು ಪ್ರಶ್ನಿಸಿದರು.
ಸಭೆಯಿಂದ ಹೊರ ಹೋದರೆ ಉತ್ತರ ಸಿಗಲ್ಲ!
ಸಭೆಯ ನಂತರ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯ ದೇವರಾಜು, ಹಲವು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ, ಸದಸ್ಯರು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡದೆ ಅನವಶ್ಯಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಶಾಸಕಬಾಲಕೃಷ್ಣ ಅವರು ಪುರಸಭೆಗೆ ಕಾಮಗಾರಿ ನಡೆಸುವಂತೆ ಪತ್ರ ಬರೆದಿದ್ದರು. ಅದರಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೂ ಕೆಲ ಸದಸ್ಯರು ಪ್ರಸ್ತಾಪಿತ ವಿಚಯಗಳ ಬಗ್ಗೆ ಚರ್ಚಿಸದೆ ಸಭೆಯಿಂದ ಹೊರ ನಡೆದರೆ ಉತ್ತರ ಎಲ್ಲಿ ಸಿಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.