ಶಾಸಕ ಸಿ.ಪಿ.ಯೋಗೇಶ್ವರ್​  
ಬೆಂಗಳೂರು ದಕ್ಷಿಣ

ಬೊಂಬೆನಾಡಲ್ಲಿ ಗಂಗೋತ್ಸವ ಶ್ರೀಘ್ರ

ಚನ್ನಪಟ್ಟಣ: ರಾಮನಗರದಲ್ಲಿ ರಾಮೋತ್ಸವ, ಕನಕಪುರದಲ್ಲಿ ಕನಕೋತ್ಸವ, ಮಾಗಡಿಯಲ್ಲಿ ಕೆಂಪೇಗೌಡ ಉತ್ಸವದಂತೆ ಬೊಂಬೆನಾಡು ಚನ್ನಪಟ್ಟಣದಲ್ಲೂ ಗಂಗೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ನಗರದಲ್ಲಿನ ಶಾಸಕರ ಗೃಹಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅದ್ದೂರಿ ಗಂಗೋತ್ಸವದ ತೀರ್ಮಾನ ಕೈಗೊಂಡು, ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿಸತವಾಗಿ ಚರ್ಚಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಈ ವೇಳೆ ಶಾಸಕ ಸಿ.ಪಿ.ಯೋಗೇಶ್ವರ್​ ಮಾತನಾಡಿ, ಜಿಲ್ಲೆಯ ಮೂರು ತಾಲೂಕುಗಳಲ್ಲಿ ಈಗಾಗಲೇ ಉತ್ಸವಗಳನ್ನು ಆರಂಭಿಸಲಾಗಿದೆ. ಈ ಉತ್ಸವಗಳು ಆಯಾ ತಾಲೂಕಿನ ಇತಿಹಾಸವನ್ನು ಸಾರುವ ಕಾರ್ಯಕ್ರಮಗಳಾಗಿದ್ದು, ಅವುಗಳಂತೆ ಚನ್ನಪಟ್ಟಣವೂ ತನ್ನ ಒಡಲಿನಲ್ಲಿ ಸಾಕಷ್ಟು ಇತಿಹಾಸವನ್ನು ಹೊಂದಿದೆ. ಗಂಗ ಸಾಮ್ರಾಜ್ಯದ ಕುರುಹುಗಳು ನಮ್ಮ ನೆಲದಲ್ಲಿವೆ. ಈ ಹಿನ್ನೆಲೆಯಲ್ಲಿ ಗಂಗೋತ್ಸವ ಹೆಸರಿನಲ್ಲಿ ಅದ್ದೂರಿ ಉತ್ಸವ ಆಚರಿಸೋಣ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್​ ಅಧ್ಯ ಹಾಗೂ ರೇಷ್ಮೆ ಮಾರಾಟ ಮಂಡಳಿ ಅಧ್ಯ ಎಚ್​.ಗಂಗಾಧರ್​, ನಗರಸಭೆ ಅಧ್ಯ ವಾಸಿಲ್​ ಆಲಿಖಾನ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಎಸ್​.ಆರ್​.ಪ್ರಮೋದ್​, ಸುನೀಲ್​ ಕುಮಾರ್​, ಮುಖಂಡರಾದ ದುಂತೂರು ವಿಶ್ವನಾಥ್​, ಸಿ.ವಿ.ಚಂದ್ರಸಾಗರ್​, ಕೆ.ಟಿ.ಲ್ಮಮ್ಮ, ಮಲವೇಗೌಡ, ಎಲೆಕೇರಿ ಮುದ್ದುಕೃಷ್ಣ, ವಿ.ಬಿ.ಚಂದ್ರು ಇದ್ದರು.
ಒಂದು ತಿಂಗಳ ಕಾರ್ಯಕ್ರಮ!
ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಒಂದು ತಿಂಗಳು ನಿರಂತರ ಕಾರ್ಯಕ್ರಮವಾಗಿರಲಿದೆ. ಹಾಗಾಗಿ ಉತ್ಸವ ಪ್ರತಿಮನೆಮನಗಳನ್ನೂ ತಲುಪಬೇಕು. ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಪಾತೀತವಾಗಿ ಉತ್ಸವವನ್ನು ಯಶಸ್ವಿಗೊಳಿಸೋಣ. ಅದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ, ಜವಾಬ್ದಾರಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ಕರೆಯಲಾಗುವುದು ಎಂದರು.