ಮಾಗಡಿ ಗಾಂಧೀಜಿ ವೃತ್ತದಲ್ಲಿ 14 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ನಿರ್ಮಿಸಿರುವುದು.
14 ಅಡಿ ಎತ್ತರ > 1300 ಕೆಜಿ ತೂಕ > ಡಿ.25ಕ್ಕೆ ಅನಾವರಣ
ಮಾಗಡಿ: ಪರ&ವಿರೋಧದ ನಡುವೆ ಪಟ್ಟಣದಲ್ಲಿ ಗಾಂಧೀಜಿಯ ಬೃಹತ್ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ.
ಇಲ್ಲಿನ ಗಾಂಧಿನಗರ ವೃತ್ತದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಅವರ ಅವಧಿಯಲ್ಲಿ ಅಂದರೆ 7 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದ ಪುತ್ಥಳಿಯನ್ನು ವೃತ್ತದಿಂದ&ಪಟ್ಟಣದ ಖಾಸಗಿ ಬಸ್ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿ ಕಾರಣ 3 ತಿಂಗಳ ಹಿಂದೆ ಸ್ಥಳಾಂತರಿಸಲಾಗಿತ್ತು.
ಈವೇಳೆ ಜೆಡಿಎಸ್ ಮುಖಂಡರು ಭಾರಿ ವಿರೋಧ ವ್ಯಕ್ತಪಡಿಸಿದ್ದರೂ ಪ್ರತಿಮೆಯನ್ನು ತೆರವುಗೊಳಿಸಿದ್ದಲ್ಲದೇ ಪ್ರತಿಭಟಿಸಿದ್ದ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದರು. ಈಗ ಅದೇ ಸ್ಥಳದಲ್ಲಿ ಗಾಂಧೀಜಿಯ 14 ಅಡಿ ಎತ್ತರ 1,300 ಕೆಜಿ ತೂಕದ ಕಂಚಿನ ಬೃಹತ್ ಪ್ರತಿಮೆಯನ್ನು ಸೋಮವಾರ ಮಧ್ಯಾಹ್ನ ಅಳವಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿನ ಬೃಹತ್ ಚಾಮುಂಡೇಶ್ವರಿ ಪ್ರತಿಮೆ ಮಾಡಿದ ಶಿಲ್ಪಿ ಜೀವನ್ ಅವರೇ ಗಾಂಧೀಜಿ ಪ್ರತಿಮೆ ತಯಾರಿಸಿದ್ದು, ಡಿ.25ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ.ಸುರೇಶ್ ಅನಾವರಣಗೊಳಿಸಲಿದ್ದಾರೆ. ಅಂದಹಾಗೆ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ವೈಯಕ್ತಿಕವಾಗಿ 35 ಲಕ್ಷ ರೂ. ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಬೃಹತ್ ಕಂಚಿನ ಪ್ರತಿಮೆಯನ್ನು ಗಾಂಧಿ ನಗರದ ವೃತ್ತದಲ್ಲಿ ಆಳವಡಿಸಲು ತರುತ್ತಿದ್ದಂತೆ ಸಾಕಷ್ಟು ಮಂದಿ ಕಣ್ತುಂಬಿಕೊಂಡರು.
ಟೀಕೆಗಳು ಸಾಯುತ್ತವೆ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ.. ಜೈ ಬಾಲಣ್ಣ... ಎಂಬ ಪೋಸ್ಟರ್ಗಳನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಗಾಂಧಿ ಪ್ರತಿಮೆಯ ೋಟೋಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ವೈಯಕ್ತಿಕವಾಗಿ 35 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಗಾಂಧೀಜಿ ಪ್ರತಿಮೆ ನಿರ್ಮಿಸುವುದಾಗಿ ನುಡಿದಂತೆ ನಡೆದಿದ್ದೇವೆ. ಡಿ.25ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ವಿರೋಧ ಪಕ್ಷದವರ ಕಪಟ, ನಾಟಕ ಹಾಗೂ ನಮ್ಮನ್ನು ಜನ ಹೋಲಿಕೆ ಮಾಡಲಿ, ಯಾರು ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಅವರೇ ತೀರ್ಮಾನಿಸಲಿ.