ಕನಕಪುರ: ಹಳೆಯ ದ್ವೇಷದಿಂದ ಹುಲಿಬೆಲೆ ಗ್ರಾಮದ ಯುವಕನನ್ನು ಶನಿವಾರ ಮಾದಪ್ಪನದೊಡ್ಡಿ ಗೇಟ್ ಬಳಿ ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪದ ಮೇಲೆ ನಾಲ್ವರನ್ನು ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.
ಹುಲಿಬೆಲೆ ಗ್ರಾಮದ ಅರುಣ(36)ನನ್ನು ಅದೇ ಗ್ರಾಮದ ಪವನ್, ಕಿರಣ, ದಿಲೀಪ, ಕೀರ್ತಿ ದೊಡ್ಡಾಲಹಳ್ಳಿ ರಸ್ತೆ ಮಾದಪ್ಪನದೊಡ್ಡಿ ಗೇಟ್ ಸಮೀಪ ಅಡ್ಡಗಟ್ಟಿ, ಮುಖ ಸೇರಿದಂತೆ ಹಲವೆಡೆ ತುಳಿದು ಹಲ್ಲೆ ಹಲ್ಲೆ ಮಾಡಿದ್ದಲ್ಲದೇ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಗಾಯಾಳುವನ್ನು ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾತನೂರು ಗ್ರಾಮಾಂತರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಆಕಾಶ್ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.