ಚನ್ನಪಟ್ಟಣ: ತಾಲೂಕಿನ ಪುಟ್ಟಪ್ಪನದೊಡ್ಡಿ ಬೆಂಗಳೂರು&ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಸೋಮವಾರ ನಸುಕಿನಲ್ಲಿ ಖಾಸಗಿ ಬಸ್ ರಸ್ತೆ ಬದಿಯ ತಡೆಬೇಲಿಗೆ ಡಿಕ್ಕಿಯಾಗಿ ನಾಲ್ವರು ಉಸಿರು ಚೆಲ್ಲಿದ್ದಾರೆ.
ಬೆಂಗಳೂರಿನ ಕಲಾಸಿಪಾಳ್ಯದ ರಶೀದ್ (45), ಆನೆಪಾಳ್ಯದ ಸಕೀರ್ ಹುಸೇನ್ (27), ಕೇರಳದ ಕ್ಯಾಲಿಕಟ್ ನಿವಾಸಿ ಮಹಮದ್ ಫರಹಾನ್ (22), ಪಾಂಡಿಚೇರಿಯ ಮಾಹಿಯ ನಿವಾಸಿ ಆದಿತ್ಯ ಸುರೇಶ್ (18) ಮೃತರು.
ಇಬ್ಬರೂ ಸ್ಥಳದಲ್ಲೆ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಕೇರಳ ಮೂಲದ ಅಬ್ದುಲ್ ಹಾಗೂ ಆಲೇನ್ ಗಾಯಗೊಂಡಿದ್ದಾರೆ.
ಖಾಸಗಿ ಟ್ರಾವೆಲ್ಸ್ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಭಾನುವಾರ ರಾತ್ರಿ 8.30ಕ್ಕೆ ಕೇರಳದ ಕ್ಯಾಲಿಕಟ್ನಿಂದ ಬೆಂಗಳೂರಿಗೆ ಹೊರಟಿತ್ತು. ಬೆಳಗಿನ ಜಾವ 4.10ರ ಸುಮಾರಿಗೆ ತಾಲೂಕಿನ ಪುಟ್ಟಪ್ಪನದೊಡ್ಡಿ ಗ್ರಾಮದ ಬಳಿ ಚಾಲಕ ನಿದ್ರೆ ಮಂಪರಿನಲ್ಲಿ ಬಸ್ಅನ್ನು ರಸ್ತೆ ಬದಿಯ ತಡೆಬೇಲಿಗೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿ ರಭಸಕ್ಕೆ ಮೊದಲಿಗೆ ಬಸ್ನ ಮುಂಭಾಗದ ಎಡಭಾಗದ ಟಯರ್ ಸ್ಫೋಟಗೊಂಡಿದೆ. ನಂತರ, ಸುಮಾರು ನೂರು ಮೀಟರ್ನಷ್ಟು ದೂರ ತಡೆಬೇಲಿಯನ್ನು ಉಜ್ಜಿಕೊಂಡು ಬಸ್ ಚಲಿಸಿದೆ. ಹೀಗಾಗಿ ಬಸ್ನ ಮುಂಭಾಗ (ಕ್ಯಾಬಿನ್)ದಲ್ಲಿ ಕುಳಿತಿದ್ದವರಿಗೆ ತಡೆಬೇಲಿಯ ಕಬ್ಬಿಣದ ಕಂಬಿಗಳು ಚುಚ್ಚಿಕೊಂಡು ಮೃತಪಟ್ಟಿದ್ದಾರೆ. ಬಸ್ ಚಾಲಕ ಮಹಮದ್ ಲಿಶಾದ್ನ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಡಿವೈಎಸ್ಪಿ ಕೆ.ಸಿ.ಗಿರೀಶ್ ಸೇರಿ ಇನ್ನಿತರ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ, ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
ಹೆಚ್ಚುವರಿಯಾಗಿ ಬಂದು ಸಾವಿನ ದಾರಿ ಹಿಡಿದರು!
ಅಪಘಾತವಾದ ಬಸ್ನಲ್ಲಿ 36 ಸೀಟ್ಗಳಿಗಷ್ಟೇ ಅವಕಾಶವಿತ್ತು. ಆದರೆ, ಚಾಲಕ ಹೆಚ್ಚುವರಿಯಾಗಿ ಏಳು ಪ್ರಯಾಣಿಕರನ್ನು ಕೂರಿಸಿಕೊಂಡು ಕ್ಯಾಲಿಕಟ್ನಿಂದ ಬಂದಿದ್ದಾನೆ. ಮೃತಪಟ್ಟ ನಾಲ್ವರು ಸೇರಿ ಏಳು ಮಂದಿ ಬುಕ್ಕಿಂಗ್ ಇಲ್ಲದ ಹಿನ್ನೆಲೆಯಲ್ಲಿ ಚಾಲಕನಿಗೆ ಟಿಕೆಟ್ ಹಣವಾಗಿ 1000 ರೂಪಾಯಿ ನೀಡಿ, ಡೆವರ್ ಕ್ಯಾಬಿನ್ನಲ್ಲಿ ಕುಳಿತುಕೊಂಡಿದ್ದರು. ಈ ಏಳು ಮಂದಿ ಪೈಕಿ ನಾಲ್ವರು ಮೃತಪಟ್ಟರೆ, ಇಬ್ಬರು ಗಾಯಗೊಂಡಿದ್ದಾರೆ. ಇನ್ನೋರ್ವ ಅಪಾಯದಿಂದ ಪಾರಾಗಿದ್ದಾನೆ. ರಂಜಾನ್ ಕಾರಣ ಕೇರಳದಿಂದ ಬೆಂಗಳೂರಿಗೆ ಬರುವ ಬಹುತೇಕ ಖಾಸಗಿ ಬಸ್ಗಳಲ್ಲಿ ಸೀಟುಗಳು ಭರ್ತಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವ ಧಾವಂತದಲ್ಲಿ ಇವರು ಆಸನಗಳು ಇಲ್ಲದಿದ್ದರೂ ಪರವಾಗಿಲ್ಲ ಎಂದು ಹೆಚ್ಚುವರಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು. ಆದರೆ, ದುರದೃಷ್ಟವಶಾತ್ ತಮ್ಮದಲ್ಲದ ತಪ್ಪಿಗೆ ಸಾವಿನ ದಾರಿ ತುಳಿಯುವಂತಾಗಿದೆ.
ಕೆಲವೇ ಹೊತ್ತಿನಲ್ಲಿ ಗೂಡು ಸೇರುತ್ತಿದ್ದರು!
ಮೃತರೆಲ್ಲರೂ ವಿವಿಧ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಾಗಿದ್ದು, ಪಾಂಡಿಚೇರಿಯ ಮಾಯಿಯ ನಿವಾಸಿ ಆದಿತ್ಯ ಸುರೇಶ್ ಮಾತ್ರ ವಾಯುವಿಹಾನ ವಿಾನ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ. ಎಲ್ಲವೂ ಸುಗಮವಾಗಿದ್ದರೆ ಕೇವಲ ಒಂದೂವರೆ ತಾಸಿನಲ್ಲಿ ಗೂಡುಗಳನ್ನು ಸೇರಿಕೊಳ್ಳುತ್ತಿದ್ದರು. ಆದರೆ, ವಿಧಿಯಾಟದಿಂದ ಮಾರ್ಗಮಧ್ಯೆ ಹೆದ್ದಾರಿಯಲ್ಲಿ ಸಾವಿನ ದಾರಿ ತುಳಿದಿದ್ದು ವಿಪರ್ಯಾಸ.
ಈ ಅವಡದಲ್ಲಿ ಇನ್ನಷ್ಟು ಪ್ರಾಣಾಪಾಯಗಳು ಆಗುವ ಸಾಧ್ಯತೆಯಿತ್ತು. ಆದರೆ, ಅದೃಷ್ಟವಶಾತ್ ಅದು ತಪ್ಪಿತು ಎನ್ನುವುದು ಪ್ರತ್ಯದರ್ಶಿಗಳ ಮಾತು. ಬಸ್ ತಡೆಬೇಲಿಯನ್ನು ದಾಟಿ ಸರ್ವೀಸ್ ರಸ್ತೆಯತ್ತ ಬಂದಿದ್ದರೆ ರಸ್ತೆಯ ಪಕ್ಕದ ಮನೆಗಳ ಮೇಲೆ ನುಗ್ಗುವ ಸಾಧ್ಯತೆ ಇತ್ತು. ಇದರೊಂದಿಗೆ, ಡಿಕ್ಕಿಯ ರಬ್ಬಸಕ್ಕೆ ಬಸ್ ಪಲ್ಟಿಯಾಗಿದ್ದರೆ ಬಸ್ನಲ್ಲಿ ನಿದ್ರೆಯಲ್ಲಿದ್ದ ಹಲವರ ಪ್ರಾಣಪ ಹಾರಿಹೋಗುವ ಸಂಭವವಿತ್ತು. ಅಪಘಾತವಾದ ಕೂಡಲೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರ ಪ್ರಯಾಣಿಕರು ಹಾಗೂ ಸ್ಥಳಿಯರು ತುರ್ತು ಕಿಟಕಿ ಮೂಲಕ ಎಲ್ಲ ಪ್ರಯಾಣಿಕರನ್ನು ರಸಿದ್ದಾರೆ.
ಚಾಲಕನ ಅಜಾಗರೂಕತೆಯೇ ಈ ಟನೆಗೆ ಕಾರಣ. ಬಸ್ನಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬುವ ಜತೆಗೆ, ರ್ನಿಲ್ಯದ ಚಾಲನೆಯೇ ಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಟನೆಗೆ ಸಂಬಂಧಿಸಿದಂತೆ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.