ಕನಕಪುರ ತಾಲೂಕು ಗಡಿಭಾಗದ ಹೊನಗನಹಳ್ಳಿ ಬಳಿ ಜಿಂಕೆ ಬೇಟೆಯಾಡಿ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು.  
ಬೆಂಗಳೂರು ದಕ್ಷಿಣ

ಜಿಂಕೆ ಬೇಟೆಯಾಡಿದ ನಾಲ್ವರ ಬಂಧನ

ಕನಕಪುರ: ಕಾಡು ಪ್ರಾಣಿಗಳ ಹತ್ಯೆ ಯತ್ನ ಪ್ರಕರಣದಲ್ಲಿ ಬೇಲ್​ ಪಡೆದು ಹೊರಬಂದ ಆರೋಪಿಗಳೇ ಮತ್ತೆ ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ನಲ್ಲಹಳ್ಳಿಯ ರು (30), ಪವನ್​ಕುಮಾರ್​ (19), ಕೃಷ್ಣ (20) ಹಾಗೂ ಮಾದೇಶ (19) ಬಂಧಿತರು.
ಈ ನಾಲ್ವರು ಮಂಗಳವಾರ ಮಳವಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ, ಬುಧವಾರ ಮುಂಜಾನೆ ಸ್ವಗ್ರಾಮಕ್ಕೆ ಸಾಗಣೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸಾತನೂರು ವಲಯ ಅರಣ್ಯ ಅಧಿಕಾರಿ ಬಾಲಕೃಷ್ಣ, ಕಾವೇರಿ ವನ್ಯಜಿವಿ ವಿಭಾಗದ ಅಧಿಕಾರಿ ಅನಿಲ್​, ಸಿಬ್ಬಂದಿ ಗೋಪಾಲ, ಹನುಮಂತ, ಸತೀಶ್​ ತಂಡ ತಾಲೂಕಿನ ಗಡಿ ಭಾಗದ ಹೊನಗನಹಳ್ಳಿ ಸಮೀಪ ಆರೋಪಿಗಳನ್ನು ಬಂಧಿಸಿ, ಕಾರು, ಬೈಕ್​, 2 ನಾಡ ಬಂದೂಕು ಹಾಗೂ 2 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.