ಬೆಂಗಳೂರಿನ ವಿಜಯನಗರದಲ್ಲಿ ಆಯೋಜಿಸಿದ್ದ ಬೆಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಬ್ಯಾಡ್ಮಿಂಟನ್ನಲ್ಲಿ ಕುದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ತಂಡ ಪ್ರಥಮ ಬಹುಮಾನ ಪಡೆಯಿತು.
ಕುದೂರು: ಬೆಂಗಳೂರಿನ ವಿಜಯನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಬೆಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕುದೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ತಂಡವು ಪ್ರಥಮ ಸ್ಥಾನ ಪಡೆದಿದೆ.
ಅಂತಿಮ ಪಂದ್ಯದಲ್ಲಿ ಕುದೂರು ತಂಡ ಬೆಂಗಳೂರಿನ ಟಿ.ದಾಸರಹಳ್ಳಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರನ್ನು ಸೋಲಿಸಿದ್ದಾರೆ. ತಂಡದಲ್ಲಿ ವಿದ್ಯಾರ್ಥಿಗಳಾದ ಶೈಲಜಾ, ಭೂಮಿಕಾ, ಕಲ್ಪನಾ, ಪಲ್ಲವಿ, ವನಿತಾ, ಕೀರ್ತನಾ, ಪೂರ್ಣಿಮಾ, ಚೈತನ್ಯಾ ಮತ್ತು ಹರ್ಷಿತಾ ಇದ್ದರು. ತಂಡದ ನೇತೃತ್ವವನ್ನು ಹಿರಿಯ ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ.ನಟರಾಜ್ ಮತ್ತು ಕಾಲೇಜಿನ ದೈಹಿಕ ಶಿಣ ನಿರ್ದೇಶಕ ವಿಜಯ್ ಕುಮಾರ್ ವಹಿಸಿದ್ದರು.