ಮಾಗಡಿ ತಾಲೂಕು ಬೊಮ್ಮನಹಳ್ಳಿ ರೈತ ವಸಳಯ್ಯ, ದೊಡ್ಡಭದ್ರಯ್ಯ ಅವರ ರಾಗಿ ಮೆದೆ ಬೆಂಕಿಗೆ ಸುಟ್ಟು ಕರಕಲಾಗಿದೆ. 
ಬೆಂಗಳೂರು ದಕ್ಷಿಣ

ರಾಗಿ ಮೆದೆಗೆ ಬೆಂಕಿ

ಮಾಗಡಿ: ತಾಲೂಕಿನ ಬೊಮ್ಮನಹಳ್ಳಿ ರೈತ ವಸಳಯ್ಯ, ದೊಡ್ಡಭದ್ರಯ್ಯ ಹಾಗೂ ಇನ್ನೊಬ್ಬ ರೈತರು ಒಕ್ಕಣೆ ಮಾಡಲು ಹಾಕಿದ್ದ ರಾಗಿಮೆದೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಸಂಪೂರ್ಣ ಸುಟ್ಟುಬೂದಿಯಾಗಿದೆ.
ಬೊಮ್ಮನಹಳ್ಳಿ ರೈತ ವಸಳಯ್ಯ, ದೊಡ್ಡಭದ್ರಯ್ಯ ಕಟಾವು ಮಾಡಿ ಒಂದೆಡೆ ಮೆದೆ ಹಾಕಿದ್ದರು. ಇನ್ನೆರಡು ದಿನದಲ್ಲಿ ಒಕ್ಕಣೆ ಮಾಡಲು ಸಿದ್ಧತೆಯನ್ನೂ ಕೈಗೊಂಡಿದ್ದರು. ಅಷ್ಟರಲ್ಲಿ ಯಾರೋ ಕಿಡಿಗೇಡಿಗಳು ರಾಗಿ ಮೆದೆಗೆ ಬೆಂಕಿಹಚ್ಚಿದ್ದಾರೆ ಎನ್ನಲಾಗಿದೆ.
ರಾಗಿ ಮೆದೆ ಉರಿಯುತ್ತಿದ್ದನ್ನು ಕಂಡ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿ, ಅದನ್ನು ಆರಿಸಲು ನೀರು ಹಾಕಿ ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಅವಲತ್ತುಕೊಂಡಿದ್ದಾರೆ.