ಬೆಟ್ಟಹಳ್ಳಿ ವಾಡೆ ಅರಣ್ಯಕ್ಕೆ ಬಿದ್ದ ಬೆಂಕಿಯನ್ನು ಅರಣ್ಯ ಸಿಬ್ಬಂದಿ ನಂದಿಸಿದರು. 
ಬೆಂಗಳೂರು ದಕ್ಷಿಣ

ಬೆಟ್ಟಹಳ್ಳಿ ವಾಡೆ ಅರಣ್ಯಕ್ಕೆ ಬೆಂಕಿ

ಕನಕಪುರ: ತಾಲೂಕಿನ ಕೋಡಿಹಳ್ಳಿ ರಸ್ತೆ ನಾರಾಯಣಪುರ ಸಮೀಪದ ಬೆಟ್ಟಹಳ್ಳಿ ವಾಡೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಸುಮಾರು ಎಕರೆ ಎಷ್ಟು ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ.
ಗುರುವಾರ ರಾತ್ರಿ 7.30ರ ಸಮಯದಲ್ಲಿ ನಾರಾಯಣಪುರ ಮುಖ್ಯ ರಸ್ತೆ ಬಳಿ ಇರುವ ಬೆಟ್ಟ ಹಳ್ಳಿವಾಡೆ ಸಿ ಬ್ಲಾಕ್​ ಅರಣ್ಯ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ರೈತರ ಜಮೀನಿನಲ್ಲಿರುವ ಗಿಡ ಗಂಟಿ, ಮರಗಳೂ ಸುಟ್ಟಿವೆ. ರಸ್ತೆ ಬದಿಯಲ್ಲಿಯೇ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ೋಟೋ ಹಾಗೂ ವಿಡಿಯೋ ತೆಗೆದು ಆತಂಕ ವ್ಯಕ್ತಪಡಿಸಿದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು ಎಂದು ವಲಯ ಅರಣ್ಯ ಅಧಿಕಾರಿ ರವಿ ವಿಜಯವಾಣಿಗೆ ತಿಳಿಸಿದ್ದಾರೆ.