ಬಿಡದಿ: ಪಟ್ಟಣದ ಕೇತಗಾನಹಳ್ಳಿಯಲ್ಲಿ ಮನೆ ಮೇಲೆ ಪಡೆದಿದ್ದ ಸಾಲವನ್ನು ಪಾವತಿಸುವುದಾಗಿ ನಂಬಿಸಿ ಬಳಿಕ ಮನೆ ಮಾರಾಟ ಮಾಡಿ ಮಹಿಳೆಗೆ ವಂಚಿಸಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇತಗಾನಹಳ್ಳಿ ನಿವಾಸಿ ಛಾಯಾದೇವಿ ಅವರು 86.50 ಲಕ್ಷ ರೂ.ಗೆ ರಾಮನಗರ ತಾಲೂಕಿನ ಬಸವನಪುರ ನಿವಾಸಿ ಸುಮಂತ್ ಬಳಿ ಮನೆ ಖರೀದಿಸಿದ್ದರು. ಆ ಮನೆ ಮೇಲೆ ೈನಾನ್ಸ್ನಲ್ಲಿ 30 ಲ ರೂ. ಮನೆ ಸಾಲ ಇತ್ತು. ಸಾಲ ಕ್ಲೀಯರ್ ಮಾಡಿ ಎನ್ಒಸಿ ಕೊಡುವುದಾಗಿ ಸುಮಂತ್ ಛಾಯಾದೇವಿಗೆ ಹೇಳಿದ್ದ. ಅಂತೆಯೇ ಬ್ಯಾಂಕ್ ಮ್ಯಾನೇಜರ್ ರಾಕೇಶ್ ಅವರಿಗೆ ಕರೆ ಮಾಡಿ, ಬಳಿಕ 45 ದಿನಗಳಲ್ಲಿ ಲೋನ್ ಕ್ಲೀಯರ್ ಲೇಟರ್ ಕೊಡಿಸುವುದಾಗಿ ತಿಳಿಸಿದ್ದ. ಆದರೆ 8 ತಿಂಗಳಾದರೂ ಲೋನ್ ಕ್ಲೀಯರನ್ಸ್ ಲೆಟರ್ ಬಂದಿರಲಿಲ್ಲ.
ಈ ಮಧ್ಯೆ ಲೋನ್ ರಿಕವರಿ ಮಾಡುವವರು ಮನೆ ಬಳಿ ಬಂದು ಲೋನ್ ಕಟ್ಟದಿದ್ದರೆ ಮನೆ ಮೇಲೆ ಸಾಲ ಇದೆ ಎಂದು ಬರೆಯುತ್ತೇವೆ ಎಂದು ಛಾಯಾದೇವಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಗಾಬರಿಗೊಂಡ ಛಾಯಾದೇವಿ, ಸುಮಂತ್ಗೆ ಕರೆ ಮಾಡಿದಾಗ ೋನ್ ಸ್ವಿಚ್ಡ್ ಆ್ ಆಗಿತ್ತು. ಆತನ ಪತ್ನಿ ಅಕ್ಷತಾಗೆ ಕರೆ ಮಾಡಿದರೆ ನನಗೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದರು. ಇನ್ನು ಬ್ಯಾಂಕ್ ಮ್ಯಾನೇಜರ್ ರಾಕೇಶ್ ಕೂಡ, ಯಾವುದೇ ಸಂಬಂಧ ಇಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಛಾಯಾದೇವಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರ ವಿರುದ್ಧವೂ ಎ್ಐಆರ್ ದಾಖಲಿಸಲು ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.