ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಹಲ್ಲೆ, ಜಾತಿ ನಿಂದನೆ ನಾಲ್ವರ ವಿರುದ್ಧ ಎ್​ಐಆರ್​

ಕನಕಪುರ: ಸಾತನೂರು ಪೊಲೀಸ್​ ಠಾಣಾ ವ್ಯಾಪ್ತಿ, ಮಳವಳ್ಳಿ ತಾಲೂಕು ನಿಡಗಟ್ಟು ಗ್ರಾಮದ ಸಿದ್ದರಾಜು ಎಂಬುವವರ ಮೇಲಿನ ದೈಹಿಕ ಹಲ್ಲೆ ಹಾಗೂ ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಹೋಬಳಿಯ ಹರಿಹರ ಗ್ರಾಮದ ಕೆಂಚೇಗೌಡ ಮತ್ತವರ ಮಕ್ಕಳಾದ ಕೃಷ್ಣ, ಲೋಕೇಶ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಭಾನುವಾರ ಮಹದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಸಮಾರಂಭ ಹಿನ್ನೆಲೆಯಲ್ಲಿ ಸೀರಿಯಲ್​ ಸೆಟ್​ ಬಿಡಲು ಹಾಗೂ ದ್ವಾರಬಾಗಿಲು ಅಲಂಕಾರ ಮಾಡುತ್ತಿರುವ ವೇಳೆ ಸಿದ್ದರಾಜು ಅವರ ಬಳಿ ಬಂದ ಕೆಂಚೇಗೌಡ ನೀನು ಹಿಂದುಳಿದ ಸಮಾಜದವ, ದೇವರ ಕೆಲಸದಲ್ಲಿ ಭಾಗವಹಿಸಬಾರದು. ಕೂಡಲೇ ಇಲ್ಲಿಂದ ಹೋಗು ಎಂದು ಧಮ್ಕಿ ಹಾಕಿದ್ದಲ್ಲದೇ ಹಲ್ಲೆಗೂ ಮುಂದಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಸಾತನೂರು ಠಾಣೆಯಲ್ಲಿ ಸಿದ್ದರಾಜು ಅವರು ಸೋಮವಾರ ದೂರು ದಾಖಲಿಸಿದ್ದರು. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.