ಡಾ.ಸಿ.ಎನ್​.ಮಂಜುನಾಥ್​  
ಬೆಂಗಳೂರು ದಕ್ಷಿಣ

ಖಾಲಿ ಹುದ್ದೆ ಭರ್ತಿ ಮಾಡಿ

ರೇಷ್ಮೆ ನಗರ ಡೆಸ್ಕ್
ಚನ್ನಪಟ್ಟಣ: ಕೇವಲ ಕಟ್ಟಡಗಳಿಂದ ಕೆಲಸ ಆಗಲ್ಲ, ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶ್ರೀವಾಗಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಂಸದ ಡಾ.ಸಿ.ಎನ್​.ಮಂಜುನಾಥ್​ ಆಗ್ರಹಿಸಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಶ್ರೀ ವಿಜಯನಗರದ ಅರಸು ಸಮುದಾಯ ಭವನ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಹುದ್ದೆ ವಿಚಾರವಾಗಿ ಯುವಕರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದು ಬಹಳ ಗಂಭೀರ ಸಮಸ್ಯೆ. ರಾಜ್ಯದಲ್ಲಿ ಎಲ್ಲ ಇಲಾಖೆಗಳು ಸೇರಿ 2.84 ಲ ಹುದ್ದೆಗಳು ಖಾಲಿ ಇವೆ. ಇದು ಸಾರ್ವಜನಿಕ ಸೇವೆಗಳಿಗೆ ಸಾಕಷ್ಟು ಅನಾನುಕೂಲ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅವುಗಳನ್ನು ಭರ್ತಿ ಮಾಡಬೇಕು ಎಂದರು.
ಪ್ರಮುಖವಾಗಿ ಆರೋಗ್ಯ, ಕೃಷಿ ಇಲಾಖೆ ಸೇರಿದಂತೆ ಹಲವಾರು ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಆಡಳಿತ ಯಂತ್ರ ಕುಸಿದು ಹೋಗುತ್ತದೆ. ಅಲ್ಲದೆ ಜನರ ಕೆಲಸ ಆಗಲ್ಲ, ಈಗಲೇ ಕೆಲಸಗಳು ವಿಳಂಬ ಆಗುತ್ತಿವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಆಡಳಿತ ಚುರುಕಾಗಲಿದೆ. ಸರ್ಕಾರ ಶಾಶ್ವತ ಯೋಜನೆಗಳಿಗೆ ಹೆಚ್ಚು ಹಣವನ್ನು ಕೊಡಬೇಕು, ಮುಂಬರುವ ಬಜೆಟ್​ನಲ್ಲಿ ಹುದ್ದೆಗಳ ಭರ್ತಿಗಾಗಿ ಪ್ರತ್ಯೇಕ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಮಾರ್ಚ್​ 6ಕ್ಕೆ ರಾಜ್ಯ ಬಜೆಟ್​ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ನಮ್ಮ ನಿರೀೆ ಶಾಶ್ವತ ಯೋಜನೆಗಳಿಗೆ ಹಣ ಕೊಡಬೇಕು, ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಗೆ ಹಣ ಕೊಡಬೇಕು. ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಭೂಸ್ವಾಧಿನಕ್ಕೆ ಹೆಚ್ಚಿನ ಹಣ ಕೊಡಬೇಕು ಎಂದು ಅಭಿಪ್ರಾಯಪಟ್ಟರು.