ನಾಡ ಬಾಂಬ್ ತಿಂದು ಹಸು ಬಾಯಿ ಛಿದ್ರಗೊಂಡಿರುವುದು
- ನಾಡ ಬಾಂಬ್ ತಿಂದ ಹಸು
- ಬಾಯಿ ಛಿದ್ರದಿಂದ ನರಳಿದ ಹಸು
- ಸುದ್ಧಿ ತಿಳಿದು ರೈತನಿಗೆ ಹೃದಯಾಘಾತ
ಕನಕಪುರ: ಕಾಡುಹಂದಿ ಬೇಟೆಗೆಂದು ಇಟ್ಟಿದ್ದ ನಾಡಬಂಬ್ ಸ್ಪೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ಸುದ್ದಿ ಕೇಳಿ ರೈತನಿಗೆ ಹೃದಯಾಘಾತವಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಸೋಮವಾರ ತಾಲೂಕಿನ ಕಬಸಾ ಹೋಬಳಿ ಸೋಮೇದ್ಯಾಪನಹಳ್ಳಿ ಗ್ರಾಮದ ಬಳಿ ಈ ಅವಘಡ ನಡೆದಿದೆ, ಹಸು ಬಾಯಲ್ಲಿ ನಾಡ ಬಾಂಬ್ ಸ್ಪೋಟಗೊಂಡು ಛಿದ್ರಗೊಂಡಿದ್ದರಿಂದ ತೀವ್ರ ನರಳಾಟ ಅನುಭವಿಸಿದೆ. ಗ್ರಾಮದ ಕಾಡಲಿಂಗೇಗೌಡ ಎಂಬ ರೈತನಿಗೆ ಸೇರಿದ ಈ ಹಸು ಗರ್ಭದರಿಸಿತ್ತು. ಇಂದೋ ಅಥವಾ ನಾಳೆ ಕರುವಿಗೆ ಜನ್ಮ ನೀಡಬೇಕಿತ್ತು. ಒಂದು ಲಕ್ಷ ರೂ ಬೆಲೆಬಾಳುವ ಹಸುವನ್ನು ಕಾಡಲಿಂಗೇಗೌಡರ ಸಂಬಂದಿ ಶಿವಣ್ಣ ಎಂಬುವವರು ಮೇಯಿಸಲು ಊರಿನ ಹೊರಭಾಗಕ್ಕೆ ಕರೆದೊಯ್ದಿದ್ದರು.
ಹಸು ಮೇಯಿಸಿಕೊಂಡು ಸಂಜೆ ಮನೆಗೆ ವಾಪಸ್ಸು ಬರುವ ವೇಳೆ ಬಾಡಬಾಂಬ್ ತಿಂದು ಘಟನೆ ಸಂಭವಿಸಿದೆ. ಹಸುವಿನ ನರಳಾಟದಿಂದ ಮಾಲೀಕರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೋಲಿಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ ರುದ್ರಪ್ಪ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹೃದಯಾಘಾತ: ಹಸುವಿನ ಮಾಲೀಕ ಕಾಳಲಿಂಗೇಗೌಡರಿಗೆ ನಾಡಬಾಂಬ್ ತಿಂದ ಹಸುವಿನ ಅವಘಡವನ್ನು ತಿಳಿದು ಕಂಗಾಲಾದ ಅವರು ಮನೆಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಬೆಂಗಳೂರು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ತಾಲೂಕಿನಲ್ಲಿ ಕಾಡುಪ್ರಾಣಿಗಳ ಬೇಟೆಗಾಗಿ ನಾಡಬಾಂಬ್ ಬಳಸುವುದು ಅತಿಹೆಚ್ಚಾಗಿ ಕಂಡುಬಂದಿದೆ. ರೈತರ ಜಾನುವಾರುಗಳು ಕಾಡಂಚಿನ ಬಯಲು ಪ್ರದೇಶಗಳಲ್ಲಿ ಮೇವು ಹರಿಸಿ ಹೋದಾಗ ಇಂತಹಂ ಅವಘಡಗಳು ಸಂಭಿವಸುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮುರುಕಣಿ, ಬಸವನಹಳ್ಳಿ, ಅರಳಕಟ್ಟೆದೊಡ್ಡಿ, ಸೋಮೇದ್ಯಾಪನಹಳ್ಳಿ ಈ ಗ್ರಾಮಗಳಲ್ಲಿ ನಾಡಬಾಂಬ್ ಬಳಸುವ ಮಾಹಿತಿ ಇದೆ. ಇವುಗಳನ್ನು ನಿಯಂತ್ರಿಸಲು ಅರಣ್ಯ, ಪೋಲಿಸ್ ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
ರವಿಕುಮಾರ್, ಕಂಚನಹಳ್ಳಿ, ಸಾಮಾಜಿಕ ಕಾರ್ಯಕರ್ತ.