ಕನಕಪುರ ತಾಲೂಕಿನ ಮುಗ್ಗೂರು ಅರಣ್ಯ ಪ್ರದೇಶದ ಮಡಿವಾಳ ಸಮೀಪ ಬಸವನವಾಡೆ ಬಿಟ್​ನ ಯಲ್ಲಮ್ಮ ದೇವಾಲಯದ ಬಳಿ ಮೃತಪಟ್ಟ ಆನೆ ಮರಣೋತ್ತರ ಪರೀೆ ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಣಾಧಿಕಾರಿ ನಾಗೇಂದ್ರ ಪ್ರಸಾದ್​, ವಲಯ ಅಧಿಕಾರಿ ರಾಜೇಂದ್ರ ಸ್ವಾಮಿ, ಉಪವಲಯ ಅರಣ್ಯ ಅಧಿಕಾರಿ ಸುನಿಲ್​ ಇದ್ದರು. 
ಬೆಂಗಳೂರು ದಕ್ಷಿಣ

ಅಂಗಾಂಗ ವೈಲ್ಯದಿಂದ ಆನೆ ಸಾವು

ಕನಕಪುರ: ಅಂಗಾಂಗ ವೈಫಲ್ಯ, ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷದ ಹೆಣ್ಣಾನೆಯೊಂದು ತಾಲೂಕಿನ ಮುಗ್ಗೂರು ಅರಣ್ಯ ಪ್ರದೇಶದ ಮಡಿವಾಳ ಸಮೀಪ ಬಸವನವಾಡೆ ಬಿಟ್​ನ ಯಲ್ಲಮ್ಮ ದೇವಾಲಯದ ಬಳಿ ಸೋಮವಾರ ಸಂಜೆ ಮೃತಪಟ್ಟಿದೆ.
ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಾಡಾನೆ ನೀರು, ಆಹಾರ ಸೇವನೆ ಮಾಡದೆ ನಿತ್ರಾಣಗೊಂಡು ಓಡಾಡಲು ಸಾಧ್ಯವಾಗದಂತಾಗಿತ್ತು. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಬನ್ನೇರುಟ್ಟ ಪಶುವೈದ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀೆ ನಡೆಸಿದ್ದಾರೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಣಾಧಿಕಾರಿ ನಾಗೇಂದ್ರ ಪ್ರಸಾದ್​, ವಲಯ ಅಧಿಕಾರಿ ರಾಜೇಂದ್ರ ಸ್ವಾಮಿ, ಉಪವಲಯ ಅರಣ್ಯ ಅಧಿಕಾರಿ ಸುನಿಲ್​, ಬೀಟ್​ ಫಾರೆಸ್ಟ್​ ಶಶಿಧರ್​ ಹಾಗೂ ಸಿಬ್ಬಂದಿ ಇದ್ದರು.
ಮರಿ ಆನೆ ರೋದನ
ಅಮ್ಮನಿಂದ ದೂರವಾದ ಮರಿಯಾನೆಯ ರೋದನ ಕರುಳು ಹಿಂಡುವಂತಿತ್ತು. ಮೃತ ಆನೆಯ ಮರಣೋತ್ತರ ಪರೀೆ ನಡೆಯುವವರೆಗೂಅಮ್ಮನ ಕಳೇಬರ ಸಮೀಪವೇ ಅತ್ತಿಂದಿತ್ತ ಓಡಾಡುತ್ತಿದ್ದದ್ದು ಎಲ್ಲರಲ್ಲೂ ಕಣ್ಣೀರು ತರಿಸಿತು.