ಚನ್ನಪಟ್ಟಣ ತಾಲೂಕಿನ ಬೇವೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆ ಪ್ರಕ್ರಿಯೆ ರದ್ದುಗೊಳಿಸಲು ಒತ್ತಾಯಿಸಿ ಸದಸ್ಯರು ಸಂದ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬೇವೂರಿನ ಗುರುಕುಮಾರ್, ಬೈರಾನಾಯ್ಕನಹಳ್ಳಿ ಬಿ.ಸಿ.ಗಂಗಾಧರ್, ಹಾರೋಹಳ್ಳಿದೊಡ್ಡಿ ಗಂಗಾಧರ್, ಬೋರಯ್ಯ, ಅಶೋಕ್ ಕುಮಾರ್, ಸುನೀಲ್ಕುಮಾರ್, ನಾಗೇಶ್ ಇತರರು ಇದ್ದರು.
ಚನ್ನಪಟ್ಟಣ: ತಾಲೂಕಿನ ಬೇವೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದ 2025&30 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನ.16 ಕ್ಕೆ ಚುನಾವಣೆ ೂಷಣೆಯಾಗಿದೆ. ಸಂದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದು, ಕಣ ತೀವ್ರ ರಂಗೇರಿದೆ.
ಸಂದ 12 ನಿರ್ದೇಶಕರ ಆಯ್ಕೆಗೆ ನಡೆಯಬೇಕಿರುವ ಈ ಚುನಾವಣೆಯಲ್ಲಿ ಎಸ್ಟಿ ಸಮುದಾಯದ ಸದಸ್ಯರು ಇಲ್ಲದ ಕಾರಣ ಸಂದಲ್ಲಿ ಉಳಿದ 11 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ೂಷಣೆಯಾಗಿದೆ. ಮಹಿಳಾ ಮೀಸಲು ೇತ್ರದ 2 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿರುವ ಕಾರಣ ಉಳಿದ 9 ನಿರ್ದೇಶಕ ಸ್ಥಾನದ ಆಯ್ಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಹಾಗೂ ಬಂಡಾಯದಿಂದ ಒಟ್ಟು 15 ಮಂದಿ ಕಣದಲ್ಲಿ ಉಳಿದು ಸೆಣಸಾಡುತ್ತಿದ್ದಾರೆ.
ಸಂದ ಸಾಲಗಾರರ ಸಾಮಾನ್ಯ ೇತ್ರದ 5 ನಿರ್ದೇಶಕರ ಸ್ಥಾನಕ್ಕೆ ಒಟ್ಟು 7 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಎಚ್.ಎಂ. ಧನಂಜಯ್ಯ, ಬಿ.ಸಿ.ಯೋಗೀಶ್, ಬಿ. ಕೃಷ್ಣ, ದಯಾನಂದಸಾಗರ, ಬಿಎನ್ಎಸ್ ಕುಮಾರ್, ಬಿ.ಎಸ್. ರಾಜಶೇಖರ್ಸ್ವಾಮಿ, ಎಂ.ಸಿ. ವೆಂಕಟಗಿರಿಯಪ್ಪ ಅವರು ಚುನಾವಣೆ ಎದುರಿಸುತ್ತಿದ್ದಾರೆ. ಸಂದ ಸಾಲಗಾರರಲ್ಲದ ೇತ್ರದ 1 ನಿರ್ದೇಶಕ ಸ್ಥಾನಕ್ಕೆ ಒಟ್ಟು 3 ನಾಮಪತ್ರ ಸಲ್ಲಿಕೆಯಾಗಿದ್ದು, ಅದರಂತೆ ಕೆ.ಎಲ್. ಪ್ರಕಾಶ್, ಬಿ.ಎಲ್. ದಿನೇಶ್, ನಾಗರಾಜು ಕಣದಲ್ಲಿದ್ದಾರೆ.
ಸಂದ ಸಾಲಗಾರರ ಮಹಿಳಾ ಮೀಸಲು ೇತ್ರದ 2 ನಿರ್ದೇಶಕ ಸ್ಥಾನಕ್ಕೆ ಪುಟ್ಟಲಿಂಗಮ್ಮ, ಪ್ರಭಾವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ೇತ್ರದ 1 ನಿರ್ದೇಶಕ ಸ್ಥಾನಕ್ಕೆ ಬಿ.ಕೆ. ಅರ್ಜುನ, ಕೆ. ರಾಮಸ್ವಾಮಿ ಚುನಾವಣೆ ಎದುರಿಸುತ್ತಿದ್ದಾರೆ. ಬಿಸಿಎಂ (ಎ) ಮೀಸಲು ೇತ್ರದ 1 ನಿರ್ದೇಶಕ ಸ್ಥಾನಕ್ಕೆ ಬಿ.ಕೆ. ಪಂಚಲಿಂಗಯ್ಯ, ಬಿ.ಟಿ. ರುಮೂರ್ತಿ, ಸಾಲಗಾರರ ಕ್ಷೇತ್ರದ ಬಿಸಿಎಂ (ಬಿ) ಮೀಸಲು ೇತ್ರದ 1 ನಿರ್ದೇಶಕ ಸ್ಥಾನಕ್ಕೆ ಬಿ.ಎಲ್. ರಮೇಶ್, ಬಿ.ಆರ್. ನಂದೀಶ್ ಚುನಾವಣೆ ಎದುರಿಸುತ್ತಿದ್ದಾರೆ.
ಒಟ್ಟಾರೆ 9 ನಿರ್ದೇಶಕ ಸ್ಥಾನಕ್ಕೆ 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆ ಎದುರಿಸುತ್ತಿದ್ದಾರೆ.
ಅಕ್ರಮದ ಆರೋಪ?
ಸಂದ ಚುನಾವಣಾ ಕಣ ರಂಗೇರಿದ್ದು, ಚುನಾವಣೆಯಲ್ಲಿ ಅಕ್ರಮದ ಆರೋಪವೂ ಕೇಳಿಬಂದಿದೆ. ಚುನಾವಣಾಧಿಕಾರಿ ರಮ್ಯಾ ಅವರಿಂದ ಅಧಿಕಾರ ದುರ್ಬಳಕೆ ಆಗಿದೆ. ಅವರು ಚುನಾವಣಾ ನಿಯಮ ಉಲ್ಲಂನೆ ಮಾಡಿದ್ದಾರೆ. ಚುನಾವಣಾಧಿಕಾರಿ ರಮ್ಯಾ ಸಂಜೆ 7 ಆದರೂ ಅಭ್ಯರ್ಥಿಗಳಿಂದ ಬಲವಂತವಾಗಿ ನಾಮಪತ್ರ ವಾಪಸ್ ತೆಗೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಶಿಷ್ಟಾಚಾರ ಉಲ್ಲಂಸಿ ನಡೆದಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಿ ಚುನಾವಣೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಸಂದ ಕಚೇರಿ ಎದುರು ಕೆಲ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಚುನಾವಣೆಯ ನಾಮಪತ್ರ ವಾಪಸ್ ಪಡೆಯಲು ಮಂಗಳವಾರ ಮಧ್ಯಾಹ್ನ 3ಕ್ಕೆ ಅಂತಿಮ ಗಡುವಿನ ನಂತರವೂ ಕಾಲಾವಕಾಶ ನೀಡಿ ನಿಯಮ ಉಲ್ಲಂನೆ ಮಾಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ರಾತ್ರಿ 7ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ಮಾಡಿಕೊಟ್ಟು ಚುನಾವಣೆ ನಿಯಮ ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಶಿಷ್ಟಚಾರ ಉಲ್ಲಂನೆಯಾಗಿದ್ದು, ಈ ಕೂಡಲೇ ಚುನಾವಣಾಧಿಕಾರಿ ರಮ್ಯಾ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಈಗ ಆಗಿರುವ ಚುನಾವಣೆ ಪ್ರಕ್ರಿಯೆಯನ್ನು ರದ್ದು ಮಾಡಿ, ಚುನಾವಣೆಯನ್ನು ಮುಂದೂಡಬೇಕು ಎಂದು ಸದಸ್ಯರು ಆಗ್ರಹಿಸಿದರು.