ಚನ್ನಪಟ್ಟಣ: ತಾಲೂಕು ವಕೀಲರ ಸಂದ ಆಡಳಿತ ಮಂಡಳಿಯ ಎರಡು ವರ್ಷದ ಅವಧಿಯ ಪದಾಧಿಕಾರಿಗಳ ಸ್ಥಾನಕ್ಕೆ ಏ.13ರಂದು ಚುನಾವಣೆ ನಿಗದಿಯಾಗಿದ್ದು, ರಣಕಣ ರಂಗೇರಿದೆ.
ಉಪಾಧ್ಯ ಸ್ಥಾನಕ್ಕೆ ಎಲ್.ಸತೀಶ್ ಅವಿರೋಧ ಆಯ್ಕೆಯಾಗಿದ್ದು, ಉಳಿದ ಪ್ರಮುಖ ಸ್ಥಾನಗಳಾದ ಅಧ್ಯ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಹಾಗೂ ಕಾರ್ಯಕಾರಿ ಸಮಿತಿಯ 5 ಸಾಮಾನ್ಯ ಹಾಗೂ 1 ಮಹಿಳಾ ಮೀಸಲು ಸ್ಥಾನಕ್ಕೆ ಚುನಾವಣೆ ನಡೆಯಲಿದೆ, ಸಂದಲ್ಲಿ ಒಟ್ಟು 141 ಮತದಾರರು ಹಕ್ಕು ಚಲಾಯಿಸಿ ಅಭ್ಯರ್ಥಿಗಳ ಗೆಲುವು&ಸೋಲನ್ನು ನಿರ್ಧರಿಸಲಿದ್ದಾರೆ.
10 ಪದಾಧಿಕಾರಿಗಳ ಆಯ್ಕೆಗೆ 19 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಅಧ್ಯ ಸ್ಥಾನಕ್ಕೆ ಹಾಲಿ ಅಧ್ಯ ಟಿ.ವಿ.ಗಿರೀಶ್, ಮಾಜಿ ಕಾರ್ಯದರ್ಶಿ ದಿಲೀಪ್ಕುಮಾರ್ ಹಾಗೂ ಜೆ.ಟಿ.ಪ್ರಕಾಶ್ ಸ್ಪರ್ಧೆ ಮಾಡಿದ್ದಾರೆ. ಎರಡು ಬಾರಿ ಅಧ್ಯರಾಗಿ ಸೇವೆ ಸಲ್ಲಿಸಿರುವ ಟಿ.ವಿ.ಗಿರೀಶ್ಗೆ ಮೂರನೇ ಬಾರಿಗೂ ಪಟ್ಟ ಒಲಿಯುತ್ತದೆಯೇ ಕಾದು ನೋಡಬೇಕಿದೆ. ಸಂದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ದಿಲೀಪ್ಕುಮಾರ್ ಇದೇ ಪ್ರಥಮ ಬಾರಿಗೆ ಅಧ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮೇಲ್ನೋಟಕ್ಕೆ ಅಧ್ಯ ಸ್ಥಾನ ತ್ರಿಕೋನ ಸ್ಪರ್ಧೆಯಾಗಿ ಕಂಡು ಬಂದರೂ ಟಿ.ವಿ.ಗಿರೀಶ್ ಮತ್ತು ದಿಲೀಪ್ಕುಮಾರ್ ನಡುವೆ ನೇರ ಹಣಾಹಣಿಯ ವಾತಾವರಣ ಕಂಡು ಬರುತ್ತಿದೆ.
ಸಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಂ.ಕೆ.ಪ್ರಭು ಮತ್ತು ಎಸ್.ಬಿ.ಧನಂಜಯ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಧರ್ಮೆಂದ್ರಕುಮಾರ್ ಹಾಗೂ ಎನ್.ಸಿದ್ದರಾಜಯ್ಯ ಸ್ಪರ್ಧಿಸಿದ್ದು, ಮಹಿಳಾ ಮೀಸಲು ಖಜಾಂಚಿ ಸ್ಥಾನಕ್ಕೆ ವಸಂತಮ್ಮ, ಶಶಿಕಲಾ ಹಾಗೂ ಎ.ಲ್ಮಮ್ಮ ಪೈಪೋಟಿ ನಡೆಸುತ್ತಿದ್ದಾರೆ. ಸಂದ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಲ್ಲಿ 5 ಪುರುಷ ಸಾಮಾನ್ಯ ಸ್ಥಾನಕ್ಕೆ ಮತ್ತು 1 ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದು, 5 ಪುರುಷ ಸಾಮಾನ್ಯ ಸ್ಥಾನಕ್ಕೆ ಪ್ರಶಾಂತ್ಕುಮಾರ್, ಮರಿಸ್ವಾಮಿ, ಹಾರೀಸ್ಖಾನ್, ತಿಮ್ಮರಾಜು, ಮಹೇಶ್, ಶಿವಶಂಕರ್, ಶ್ರೀಧರ್ ಹಾಗೂ 1 ಮಹಿಳಾ ಮೀಸಲು ಸ್ಥಾನಕ್ಕೆ ಕವಿತಾ ಹಾಗೂ ಹೇಮಾ ಸ್ಪರ್ಧೆಗಿಳಿದಿದ್ದಾರೆ.
ಮತದಾರರು ಯಾರ ಕೈ ಹಿಡಿದು, ಯಾರ ಕೊರಳಿಗೆ ವಿಜಯಮಾಲೆ ಹಾಕಿ ಹಾರೈಸುವವರು ಎನ್ನುವುದಕ್ಕೆ ಏ.13ರಂದು ಉತ್ತರ ಸಿಗಲಿದೆ.