ಚಿಕ್ಕಮಳೂರಿನಲ್ಲಿ ವೃದ್ಧೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿರುವುದು.  
ಬೆಂಗಳೂರು ದಕ್ಷಿಣ

ಕಾಮಗಾರಿಗೆ ಅಡ್ಡಿಪಡಿಸಿ ವೃದ್ಧೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ದೌರ್ಜನ್ಯ

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣದಲ್ಲಿ ಅಮಾನವೀಯ ಘಟನೆ
  • ವೃದ್ಧೆಯನ್ನು ಕಂಬಕ್ಕೆ ಕಟ್ಟಿದ ನೆರೆಯವರು
  • ನೀರಿನ ಪೈಪ್ ಲೈನ್ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ ಎಂದು ಆಕ್ರೋಶ
  • ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಚನ್ನಪಟ್ಟಣ

ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ವಯೋವೃದ್ದೆಯೊರ್ವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ದೌರ್ಜನ್ಯ ನಡೆಸಿರುವ ಅಮಾನವೀಯ ಘಟನೆ ನಗರದ ಚಿಕ್ಕಮಳೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕಮಲಮ್ಮ (63) ದೌರ್ಜನ್ಯಕ್ಕೆ ಒಳಗಾಗಿರುವ ವೃದ್ಧೆ. ಇವರ ಮನೆಯ ಪಕ್ಕದ ನಿವಾಸಿಗಳಾದ ಲಲಿತಮ್ಮ, ಭಾಗ್ಯಮ್ಮ ಹಾಗೂ ಮಂಗಳಾ ಎಂಬುವವರ ವಿರುದ್ಧ ವೃದ್ಧೆಯನ್ನು ಕಂಬಕ್ಕೆ ಕಟ್ಟಿರುವ ಆರೋಪ ಕೇಳಿಬಂದಿದೆ.

ವೃದ್ದೆಯ ಮನೆ ಪಕ್ಕ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ವೃದ್ದೆ ಅಡ್ಡಿಪಡಿಸುತ್ತಾಳೆ ಎಂಬ ಕಾರಣಕ್ಕೆ ವೃದ್ದೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ದರ್ಪ ನಡೆಸಿದ್ದಾರೆ. ಸುಮಾರು ನಿಮಿಷಗಳ

ಕಾಲ ಕಂಬದಲ್ಲಿಯೇ ನರಳಾಟ ನಡೆಸಿದ್ದು, ದಾರೊಹೋಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವೃದ್ಧೆ ಕಮಲಮ್ಮ ಒಂಟಿಯಾಗಿ ವಾಸಿಸುತ್ತಿದ್ದು, ಈಕೆಗೆ ಯಾರು ಸಹ ಇಲ್ಲ ಎನ್ನಲಾಗಿದೆ. ವಯೋಸಹಜ ರಂಪಾಟ ನಡೆಸಿದ್ದು, ಈಕೆಯ ಬುದ್ದಿವಾದ ಹೇಳುವುದನ್ನು ಬಿಟ್ಟು, ಈ ರೀತಿಯಾದ ಅಮಾನವೀಯ ಘಟನೆ ತರವಲ್ಲ ಎನ್ನಬಹುದು.

ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ವೃದ್ದೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.