ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ರೇವಣಸಿದ್ದೇಶ್ವರಬೆಟ್ಟದ ಬಳಿ ವೃದ್ಧನ ಕಳೆಬರ ಪತ್ತೆ

ಕೈಲಾಂಚ: ರೇವಣಸಿದ್ದೇಶ್ವರಬೆಟ್ಟದ ಬಳಿ ಮಾಗಡಿ ತಾಲೂಕು ಮಾಯನಾಯಕನಹಳ್ಳಿಯ ಹನುಮಯ್ಯ (72) ಎಂಬುವವರ ಕಳೆಬರ ಪತ್ತೆಯಾಗಿದೆ.
ಶನಿವಾರ ಮಧ್ಯಾಹ್ನ ಜಾನುವಾರು ಮೇಯಿಸುತ್ತಿದ್ದವರಿಗೆ ಕಲ್ಲಿನ ಪೊದೆಯಲ್ಲಿ ಅಸ್ಥಿಪಂಜರ ಕಾಣಿಸಿದೆ.
ಕೂಡಲೇ ಸ್ಥಳಿಯರಿಗೆ ವಿಷಯ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿದಾಗ ಹನುಮಯ್ಯ ಅವರ ಅಂಗವಿಕಲರ ಗುರುತಿನ ಚೀಟಿ ಸಿಕ್ಕಿದೆ. ವಾರಸುದಾರರು ದೃಢಪಡಿಸಿದ ನಂತರ ಅಸ್ಥಿಪಂಜರವನ್ನು ಮರಣೋತ್ತರ ಪರೀೆಗೆ ಕಳುಹಿಸಳಾಗಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಹನುಮಯ್ಯ ಏಳೆಂಟು ದಿನಗಳ ಹಿಂದೆ ರೇವಣಸಿದ್ದೇಶ್ವರ ಬೆಟ್ಟದ ಕಡೆ ಬಂದಿದ್ದು, ಬೆಟ್ಟದಿಂದ ಸ್ವಲ್ಪ ದೂರದ ರ್ನಿಜನ ಪ್ರದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.