ಬಂಧಿತ ಕಳ್ಳರಿಂದ ವಶಪಡಿಸಿಕೊಂಡ ಬೈಕ್​, ಕಾರು, ಆಟೋಗಳೊಂದಿಗೆ ಬಿಡದಿ ಠಾಣೆ ಪೊಲೀಸರು. 
ಬೆಂಗಳೂರು ದಕ್ಷಿಣ

ಎಂಟು ಮಂದಿ ದರೋಡೆಕೋರರ ಬಂಧನ

ರೇಷ್ಮೆ ನಗರ ಡೆಸ್ಕ್
ಬಿಡದಿ: ಕಾರು, ಬೈಕ್​ ಸವಾರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರು ಯುವಕರು ಹಾಗೂ ಕಾನೂನು ಸಂರ್ಷಕ್ಕೊಳಪಟ್ಟ ನಾಲ್ವರು ಬಾಲಕಿಯರು ಸೇರಿದಂತೆ ಒಟ್ಟು 8 ಮಂದಿಯನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಸದ್ದಾಂ ಹುಸೇನ್​ (22), ಬೆಂಗಳೂರಿನ ಶಿವಪ್ರಸಾದ್​ (21), ಯಶವಂತ್​ ಕುಮಾರ್​.ಆರ್​ (21), ಕಬೀರ್​ (22) ಬಂಧಿತರು.
ಏನಿದು ಪ್ರಕರಣ?
ಬಂಧಿತರಲ್ಲಿ ಮೂವರು ಯುವಕರು ಹಾಗೂ ನಾಲ್ವರು ಬಾಲಕಿಯರು ಬೆಂಗಳೂರಿನ ಕೆ.ಆರ್​.ಮಾರ್ಕೆಟ್​ನಿಂದ ದೇವನಹಳ್ಳಿಗೆ ನ.18ರಂದು ಕ್ಯಾಬ್​ ಬುಕ್​ ಮಾಡಿದ್ದರು. ಈ ವೇಳೆ ದೇವನಹಳ್ಳಿಗೆ ಬುಕ್​ ಮಾಡಿದ್ದ ಸ್ಥಳವನ್ನು ರದ್ದು ಮಾಡಿ ಬಿಡದಿಯ ಜೋಗರಪಾಳ್ಯದ ಸ್ನೇಹಿತನ ಮನೆಗೆ ಹೋಗಬೇಕೆಂದು ಕ್ಯಾಬ್​ ಚಾಲಕ ಸ್ವಾಮಿಗೌಡ ಅವರಿಗೆ ತಿಳಿಸಿ, 1200 ರೂ. ಬಾಡಿಗೆ ಮಾತನಾಡಿದ್ದರು. ಕಾರು ಬಿಡದಿ ಕಡೆಗೆ ಬಂದಾಗ ಕಾಡುಮನೆ ಕ್ರಾಸ್​ ಬಳಿ ಮತ್ತೊರ್ವನನ್ನು ದುಷ್ಕರ್ಮಿಗಳು ಕಾರಿಗೆ ಹತ್ತಿಸಿಕೊಂಡಿದ್ದರು.
ಬೆಂಗಳೂರು& ಮೈಸೂರು ಹೆದ್ದಾರಿ ಕಡೆಯಿಂದ ಜೋಗರಪಾಳ್ಯ ಕಡೆಗೆ ತಿರುಗಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಬನ್ನಿಗಿರಿ ಬಳಿ ಚಾಲಕ ಸ್ವಾಮಿಗೌಡಗೆ ಅನುಮಾನ ಬಂದಿದ್ದರಿಂದ ಕಾರು ನಿಲ್ಲಿಸಿ ನನಗೆ ಬಾಡಿಗೆ ಹಣ ಕೊಡಿ, ನಾನು ಹೋಗಬೇಕು ಎಂದಿದ್ದಾನೆ. ಈ ವೇಳೆ ರಾಡ್​ ತೋರಿಸಿ ಕಾರು ಬಿಟ್ಟು ಹೋಗುವಂತೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ತಣ ಸ್ವಾಮಿಗೌಡ ಕಾರು ಬಿಟ್ಟು ಓಡಿ ಹೋಗಿ ಬಿಡದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸರು ಕ್ಯಾಬ್​ ಬುಕ್​ ಮಾಡಿದ್ದ ಮೊಬೈಲ್​ ಸಂಖ್ಯೆ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ.
16 ಲ ರೂ. ಮೌಲ್ಯದ ಕಾರು, ಬೈಕ್​ ವಶ
ವಿವಿಧ ಕಡೆಗಳಲ್ಲಿ ಇದೇ ರೀತಿ ದರೋಡೆ ಮಾಡಿದ್ದ 3 ಕಾರು, 6 ದ್ವಿಚಕ್ರ ವಾಹಗಳು, 1 ಆಟೋ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಡದಿ, ಕನಕಪುರ, ಚನ್ನಪಟ್ಟಣ, ಮಳವಳ್ಳಿ, ಶಿವಮೊಗ್ಗ, ಶ್ರೀರಂಗಪಟ್ಟಣ ಪೊಲೀಸ್​ ಠಾಣೆಗಳ ವ್ಯಾಪ್ತಿ ಸೇರಿ ಒಟ್ಟು 10 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಬಾಲಕಿಯರ ವಿಶೇಷ ಗೃಹಕ್ಕೆ ರವಾನೆ
ಕಾನೂನು ಸಂರ್ಷಕ್ಕೊಳಪಟ್ಟ ನಾಲ್ವರು ಬಾಲಕಿಯರನ್ನು ರಾಮನಗರ ಬಾಲಮಂಡಳಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಬಾಲಕಿಯರನ್ನು ದಾವಣಗೆರೆಯ ಸರ್ಕಾರಿ ವೀಣಾಲಯ ಹಾಗೂ ಬಾಲಕಿಯರ ವಿಶೇಷ ಗೃಹಕ್ಕೆ ಬಿಡಲಾಗಿದೆ.