ಕ್ರೈಂ 
ಬೆಂಗಳೂರು ದಕ್ಷಿಣ

ಕುಡಿದ ಮತ್ತಿನಲ್ಲಿ ಯುವಕನ ಕೊಲೆ

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣ ಸಾತನೂರು ಸರ್ಕಲ್ ಬಳಿ ಹೋಟೆಲ್
  • ಊಟ ಮಾಡುತ್ತಿದ್ದವನ ಮೇಲೆ ಹಲ್ಲೆ
  • ಮೃತ ಭರತ್ ಆಟೋ ಚಾಲಕ

ಚನ್ನಪಟ್ಟಣ:ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಖಾಸಗಿಹೋಟೆಲ್ ಮುಂಭಾಗ ಕುಡಿದ ಮತ್ತಿನಲ್ಲಿಯುವಕನನ್ನು ಕೊಲೆ ಮಾಡಿದ ಇಬ್ಬರನ್ನುಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರುಬಂಧಿಸಿದ್ದಾರೆ.

ತಾಲೂಕಿನದೊಡ್ಡಮಳೂರು ಗ್ರಾಮದ ಆಟೋ ಚಾಲಕಭರತ್(28) ಮೃತ. ಮಂಗಳವಾರಪೇಟೆ ನಿವಾಸಿಅಭಿಷೇಕ್ ಹಾಗೂ ಕೋಟೆ ನಿವಾಸಿಮಂಜು ಬಂಧಿತರು.

ಶುಕ್ರವಾರರಾತ್ರಿ ನಗರದ ಬಾರ್ ಒಂದರಬಳಿ ಭರತ್, ಆತನ ಸ್ನೇಹಿತರುಹಾಗೂ ಅಭಿಷೇಕ್ ಮತ್ತು ಮಂಜುನಡುವೆ ಗಲಾಟೆ ನಡೆದಿದೆ. ಗಲಾಟೆತಿಳಿಗೊಂಡ ಬಳಿಕ ಭರತ್ ತನ್ನಸ್ನೇಹಿತರೊಂದಿಗೆ ಹೋಟೆಲ್ಗೆ ಊಟಕ್ಕೆ ತೆರಳಿದ್ದಾರೆ. ವೇಳೆ ಹೋಟೆಲ್ಗೆಬಂದ ಅಭಿಷೇಕ್ ಹಾಗೂ ಮಂಜು ಏಕಾಏಕಿಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಗಂಭೀರ ಗಾಯಗೊಂಡಿದ್ದ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನುವಾರಸುದಾರರಿಗೆ ಒಪ್ಪಿಸಲಾಗಿದೆ.