ಚನ್ನಪಟ್ಟಣ: ನಗರದ ಬೆಂಗಳೂರು&ಮೈಸೂರು ಹೆದ್ದಾರಿಯ ಖಾಸಗಿ ಹೋಟೆಲ್ ಮುಂಭಾಗ ಕುಡಿದ ಮತ್ತಿನಲ್ಲಿ ಯುವಕನನ್ನು ಕೊಲೆ ಮಾಡಿದ ಇಬ್ಬರನ್ನು ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ದೊಡ್ಡಮಳೂರು ಗ್ರಾಮದ ಆಟೋ ಚಾಲಕ ಭರತ್(28) ಮೃತ. ಮಂಗಳವಾರಪೇಟೆ ನಿವಾಸಿ ಅಭಿಷೇಕ್ ಹಾಗೂ ಕೋಟೆ ನಿವಾಸಿ ಮಧು ಬಂಧಿತರು.
ಶುಕ್ರವಾರ ರಾತ್ರಿ ನಗರದ ಬಾರ್ ಒಂದರ ಬಳಿ ಭರತ್, ಆತನ ಸ್ನೇಹಿತರು ಹಾಗೂ ಅಭಿಷೇಕ್ ಮತ್ತು ಮಧು ನಡುವೆ ಗಲಾಟೆ ನಡೆದಿದೆ. ಗಲಾಟೆ ತಿಳಿಗೊಂಡ ಬಳಿಕ ಭರತ್ ತನ್ನ ಸ್ನೇಹಿತರೊಂದಿಗೆ ಹೋಟೆಲ್ಗೆ ಊಟಕ್ಕೆ ತೆರಳಿದ್ದಾರೆ. ಈ ವೇಳೆ ಹೋಟೆಲ್ಗೆ ಬಂದ ಅಭಿಷೇಕ್ ಹಾಗೂ ಮಧು ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಭರತ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಚನ್ನಪಟ್ಟಣ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.