ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಮಾದಕ ವಸ್ತು ಮಾರಾಟಗಾರನ ಬಧನ

ಚನ್ನಪಟ್ಟಣ: ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗೆ ಎಡೆಮೂರಿ ಕಟ್ಟುವಲ್ಲಿ ಇಲ್ಲಿನ ಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ವಿಜಯನಗರದ ನಿವಾಸಿ ಮಹಮದ್​ ಖಾಸಿಂ (25) ಬಂಧಿತ ಆರೋಪಿ. ನಗರದ ತಿಟ್ಟಮಾರನಹಳ್ಳಿ ರಸ್ತೆಯಲ್ಲಿರುವ ಮಹೇಶ್ವರ ಕಲ್ಯಾಣ ಮಂಟಪದ ಎದುರಿನ ಹಿಂದೂ ರುದ್ರಭೂಮಿಯ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ.
ಈ ಕುರಿತಂತೆ ಮಾಹಿತಿ ಆಧರಿಸಿದ ಪುರಠಾಣೆ ಪಿಎಸ್​ಐ ಜಗದೀಶ ನಾಯಕ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಮಾದಕ ವಸ್ತು ಕೊಂಡುಕೊಳ್ಳುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮೈಕಾನಿಕ್​ ಕೆಲಸ ಮಾಡುತ್ತಿದ್ದ ಆರೋಪಿಯಿಂದ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.