ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಟ್ರ್ಯಾಕ್ಟರ್ ಹಿಂಬದಿಗೆ ಆಟೋ ಡಿಕ್ಕಿಯಾಗಿ ಚಾಲಕ ಸಾವು

ಕುದೂರು: ರಾಷ್ಟ್ರೀಯ ಹೆದ್ದಾರಿ&75ರ ನಾರಸಂದ್ರ ಸಮೀಪ ಶನಿವಾರ ರಾತ್ರಿ ನೀಲಗಿರಿ ಕಂಬಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ​ಗೆ ಹಿಂದಿನಿಂದ ಆಟೋ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಸಿಂಗಟಿಹಳ್ಳಿ ದರ್ಶನ್​ ಗೌಡ (24) ಮೃತ.
ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ದರ್ಶನ್​ಗೌಡ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ನಾರಸಂದ್ರ ಸಮೀಪ ನೀಲಗಿರಿ ಪೋಲ್​ಗಳನ್ನು ತುಂಬಿಕೊಂಡು ಟ್ರ್ಯಾಕ್ಟರ್ ರ್​ ಹೊರಟಿತ್ತು. ಆದರೆ ಟೆಲರ್​ನಿಂದ ಪೋಲ್​ಗಳು ಹೊರಗೆ ಬಂದಿದ್ದು, ಇದನ್ನು ಗಮನಿಸದೆ ಆಟೋ ಟೆಲರ್​ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಆಗ ನೀಲಗಿರಿ ಮರದ ಕಂಬಗಳು ತಾಗಿ ಆಟೋ ನಜ್ಜಗುಜ್ಜಾಗಿದೆ. ಗಂಭೀರ ಗಾಯಗೊಂಡ ದರ್ಶನ್​ಗೌಡ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.